ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ

7

ದುರಸ್ತಿಯಾಗದ ಶುದ್ಧ ಕುಡಿಯುವ ನೀರಿನ ಘಟಕ

Published:
Updated:
ಅಕ್ಕಿಆಲೂರ ಸಮೀಪದ ಬಂದ್ ಆಗಿರುವ ವೀರಾಪುರದ ಶುದ್ಧ ಕುಡಿಯುವ ನೀರಿನ ಘಟಕ 

ಅಕ್ಕಿಆಲೂರ: ಸಮೀಪದ ವೀರಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷವಾದರೂ ಕೂಡ ದುರಸ್ತಿಯಾಗಿಲ್ಲ.

ಶುದ್ಧ ನೀರಿನ ಘಟಕ ಉದ್ಘಾಟನೆಯಾಗಿ ಕೆಲವೇ ದಿನಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಬಂದ್‌ ಆದರೂ ಕೂಡ ದುರಸ್ತಿಯಾಗಿಲ್ಲ. ಘಟಕವನ್ನು ನಿರ್ಮಿಸಿರುವ ಭೂಸೇನಾ ನಿಗಮಕ್ಕೆ ಐದು ವರ್ಷಗಳ ಕಾಲ ನಿರ್ವಹಣಾ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಗ್ರಾಮಸ್ಥರು ನೀರಿಗಾಗಿ ನಳ ಹಾಗೂ ಕೊಳವೆ ಬಾವಿಗಳನ್ನೇ ಆಶ್ರಯಿಸುವಂತಾಗಿದೆ.

‘ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿ ವರ್ಷವೇ ಕಳೆದಿದೆ. ಈ ಮಧ್ಯೆ ಹಲವಾರು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಹ ಮಾಡಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಅನುದಾನ ಇಲ್ಲ ಎಂದು ಕಾರಣ ಹೇಳಿ ಅಧಿಕಾರಿಗಳು ಸಮಯ ಕಳೆಯುತ್ತಿದ್ದಾರೆ’ ಎಂದು ಗ್ರಾಮಸ್ಥ ಮಹಾವೀರ ಕರಗುದರಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಭೂಸೇನಾ ನಿಗಮ ನಿರ್ಮಿಸಿರುವ ಘಟಕಗಳ ಪೈಕಿ ಅರ್ಧದಷ್ಟು ಬಂದ್ ಆಗಿವೆ. ತಾಂತ್ರಿಕ ದೋಷ ಸೇರಿದಂತೆ ಇನ್ನಿತರ ಕಾರಣಗಳಿಂದ ಘಟಕ ಕಾರ್ಯ ನಿರ್ವಹಿಸದೇ ಇರುವುದು ಗಮನಕ್ಕೆ ಬಂದಿದೆ. ನಿಗಮದ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಹಾನಗಲ್‌ನ ಜಿಲ್ಲಾ ಪಂಚಾಯ್ತಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸೊಪ್ಪಿನಮಠ ಅಸಹಾಯಕತೆ ವ್ಯಕ್ತಪಡಿಸಿದರು.

ಹಾನಗಲ್ ತಾಲ್ಲೂಕಿನಾದ್ಯಂತ ಬಂದ್ ಆಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು 15 ದಿನಗಳೊಳಗಾಗಿ ದುರಸ್ತಿ ಮಾಡಿಸಿ, ಸಾರ್ವಜನಿಕ ಬಳಕೆಗೆ ಮುಕ್ತವಾಗಿಸುವಂತೆ ಅಧಿಕಾರಿಗಳ ಶಾಸಕ ಸಿ.ಎಂ.ಉದಾಸಿ ವಿಧಿಸಿದ್ದ ಗಡುವು ಮುಗಿದಿದ್ದರೂ ಏನೂ ಪ್ರಯೋಜನವಾಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !