ತಡಸ: ಕಳೆದೆರಡು ತಿಂಗಳಿಂದ ಮಳೆಯಿಲ್ಲದೆ ಕಂಗಾಲಾದ ರೈತರು ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಸಂತುಷ್ಟರಾಗಿ ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದಾರೆ.
ಎರಡನೇ ಬಾರಿ ಮಾಡಿದ ಬಿತ್ತನೆಗೆ ಸಮರ್ಪಕ ನೀರು ಸಿಗುತ್ತಿದೆ. ತಡಸ ಸುತ್ತ ಮುತ್ತಲಿನ ಗ್ರಾಮಗಳಾದ ಮುತ್ತಳ್ಳಿ, ಅಡವಿ ಸೋಮಾಪೂರ, ಕುನ್ನುರ, ಮಮದಾಪೂರ, ದುಂಡಶಿ, ಹೊಸೂರು, ಕೋಣನಕೇರಿ ಗ್ರಾಮಗಳಲ್ಲಿ ಮಳೆಯಿಂದಾಗಿ ತಂಪು ಆವರಿಸಿಕೊಂಡಿದೆ.
ನಿರಂತರ ಮಳೆಯಿಂದ ಕೆರೆಕಟ್ಟೆ, ಹೊಂಡಗಳು ಸಂಪೂರ್ಣ ಭರ್ತಿಯಾಗುವ ಹಂತದಲ್ಲಿವೆ.
‘ಬಿಡದೆ ಸುರಿಯುತ್ತಿರುವ ಮಳೆ ಭತ್ತಕ್ಕೆ ಅನುಕೂಲವಾಗಿದೆ. ಕಳೆ ಕೀಳಲು ಎಡೆ ಕುಂಟಿ ಹೊಡೆಯಲು ಸಹಕಾರಿ ಆಗಿದ್ದು ಗೋವಿನ ಜೋಳದ ಬೆಳೆಯು ಜವಳ ಹಿಡಿಯುವ ಹಾಗೆ ಕಾಣುತ್ತದೆ‘ ಎಂದು ರೈತ ಸಾದೇವ ಬಿರೊಳ್ಳಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.