ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಸಂಚಾರ ಅಸ್ತವ್ಯಸ್ತ

Last Updated 20 ಅಕ್ಟೋಬರ್ 2020, 15:27 IST
ಅಕ್ಷರ ಗಾತ್ರ

ಹಾವೇರಿ: ಮಂಗಳವಾರ ಸಂಜೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಗೆ ನಗರದ ಹಳೇ ಪಿ.ಬಿ.ರಸ್ತೆ, ಹಾನಗಲ್‌ ಮುಖ್ಯ ಹೆದ್ದಾರಿಗಳಲ್ಲಿ ಮಳೆ ನೀರು ಹೊಳೆಯಂತೆ ಹರಿಯಿತು. ಇದರಿಂದ ಸಂಚಾರ ಅಸ್ತವ್ಯಸ್ತವಾಯಿತು.

ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಹರಿದು ಬಂದ ನೀರು ಹಾನಗಲ್‌ ಮುಖ್ಯರಸ್ತೆಗೆ ನುಗ್ಗಿತು. ಬಸ್‌ ನಿಲ್ದಾಣದ ಮುಂಭಾಗದಿಂದ ಎಪಿಎಂಸಿ ಮಾರುಕಟ್ಟೆವರೆಗೆ ಮಳೆ ನೀರು ಹೊಳೆಯಂತೆ ಹರಿಯಿತು. ರಭಸಕ್ಕೆ ಹರಿಯುತ್ತಿದ್ದ ನೀರಿನಲ್ಲಿ ಬೈಕ್‌ ಸವಾರರು ಚಾಲನೆ ಮಾಡಲು ಸಾಧ್ಯವಾಗದೆ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಹೋದರು. ಸಂಚಾರ ‘ಒನ್‌ವೇ’ ಆದ ಕಾರಣ ವಾಹನಗಳು ಸಾಲುಗಟ್ಟಿ ನಿಂತವು.

ಸರಸ್ವತಿ ಟಾಕೀಸ್‌ ರಸ್ತೆ ಕೂಡ ಬಂದ್‌ ಆಯಿತು. ಇದರಿಂದ ವಾಹನ ಸವಾರರು ಒಳರಸ್ತೆಗಳಲ್ಲಿ ಬಳಸಿಕೊಂಡು ಸಂಚಾರ ಮಾಡಿದರು. ಹಳೇ ಪಿ.ಬಿ.ರಸ್ತೆಯಲ್ಲಿ ನೀರಿನ ಹರಿವು ಜೋರಾಗಿತ್ತು. ಪೊಲೀಸ್‌ ವಸತಿಗೃಹಕ್ಕೂ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ಪ್ರತಿ ಬಾರಿ ಜೋರು ಮಳೆ ಬಂದಾಗಲೂ ಇದೇ ಪರಿಸ್ಥಿತಿ ಇರುತ್ತದೆ.

ಕೊಚ್ಚಿಹೋದ ವ್ಯಾಪಾರಿಗಳು:ಹುಕ್ಕೇರಿ ಮಠದ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿದ ಪರಿಣಾಮ, ತಳ್ಳುಗಾಡಿ ವ್ಯಾಪಾರಸ್ಥರು ಹಲವಾರು ಮೀಟರ್‌ ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ಮಳಿಗೆಗಳಲ್ಲಿದ್ದ ಜನರು ರಕ್ಷಣೆಗೆ ಕೂಗಿಕೊಳ್ಳುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ವಿವಿಧ ಜನವಸತಿ ಪ್ರದೇಶಗಳಲ್ಲಿ ಮಳೆ ಅವಾಂತರದಿಂದ ಜನರು ಕಂಗಾಲಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT