ಹಾವೇರಿ: ತಂಪೆರೆದ ಮಳೆ

ಶುಕ್ರವಾರ, ಏಪ್ರಿಲ್ 19, 2019
30 °C

ಹಾವೇರಿ: ತಂಪೆರೆದ ಮಳೆ

Published:
Updated:
Prajavani

ಹಾವೇರಿ: ಕೆಲವು ದಿನಗಳಿಂದ ಸತತ ಝಳಕ್ಕೆ ಬಸವಳಿದಿದ್ದ ಜಿಲ್ಲೆಯ ಜನತೆಯ ಮೊಗದಲ್ಲಿ ಬುಧವಾರ ಸಂಜೆ ವರುಣನ ಸಿಂಚನವು ಮಂದಹಾಸ ಮೂಡಿತು. ಮಧ್ಯಾಹ್ನ 40 ಸೆಲ್ಸಿಯ್ಸ್ ಡಿಗ್ರಿ ಸಮೀಪಿಸಿದ್ದ ತಾಪಮಾನದಿಂದ ಬಿಸಿಯೇರಿದ್ದರೆ, ಸಂಜೆ ತಂಗಾಳಿ ಜೊತೆ ಸುರಿದ ಮಳೆ ಮುದ ನೀಡಿತು. 

ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ಸಂಜೆ ಮೋಡ ಕವಿದ ವಾತಾವರಣವಿತ್ತು. ಹಾನಗಲ್‌ ಹಾಗೂ ಬಂಕಾಪುರ ಪಟ್ಟಣದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿಯಿತು. 

ಹಾವೇರಿ, ಸವಣೂರ, ಗುತ್ತಲದಲ್ಲಿ ಗುಡುಗು– ಮಿಂಚಿನ ಆರ್ಭಟದೊಂದಿಗೆ ಉತ್ತಮ ಮಳೆಯಾಯಿತು. ಶಿಗ್ಗಾವಿ ಮತ್ತು ಬ್ಯಾಡಗಿ ತಾಲ್ಲೂಕಿನಲ್ಲಿ ತುಂತುರು ಮಳೆ ಸುರಿಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !