ಗುರುವಾರ , ಅಕ್ಟೋಬರ್ 22, 2020
27 °C
blood donation awareness bus

‘ರಕ್ತದಾನ ರಥ’ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಕ್ಕಿಆಲೂರ (ಹಾವೇರಿ ಜಿಲ್ಲೆ): ಗ್ರಾಮೀಣ ಜನರಿಗೆ ರಕ್ತದಾನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಲ್ಲಿನ ‘ಸ್ನೇಹಮೈತ್ರಿ ಬ್ಲಡ್ ಆರ್ಮಿ’ಯು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾನಗಲ್ ಘಟಕದ ಸಹಕಾರದಲ್ಲಿ ನಿರ್ಮಿಸಿರುವ ‘ರಕ್ತದಾನ ರಥ’ (ಬಸ್‌) ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಯಾಗಿದೆ. ‌

ರಕ್ತದಾನ ರಥ ನಿರ್ಮಾಣಕ್ಕಾಗಿ ಸ್ನೇಹಮೈತ್ರಿ ಬ್ಲಡ್ ಆರ್ಮಿಯ ಕರಬಸಪ್ಪ ಗೊಂದಿ ಅವರಿಗೆ ಪ್ರಶಸ್ತಿಪತ್ರ ಮತ್ತು ಫಲಕ ನೀಡಿ ಗೌರವಿಸಲಾಗಿದೆ.

ಪ್ರತಿದಿನ ಹಾನಗಲ್‍ನಿಂದ ಅಕ್ಕಿಆಲೂರು ಮಾರ್ಗವಾಗಿ ಹಾವೇರಿಗೆ ಸಂಚರಿಸುವ ಈ ಬಸ್ ಅನೇಕ ಹಳ್ಳಿಗಳಿಗೆ ಸಂಚರಿಸಿ, ಗ್ರಾಮೀಣರಲ್ಲಿ ರಕ್ತದಾನ ಕುರಿತು ಒಂದು ವರ್ಷದಿಂದ ಅರಿವು ಮೂಡಿಸುತ್ತಿದೆ. ಇದರಿಂದ ಸಾಕಷ್ಟು ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.