ಶೇಷಗಿರಿ: ರಾಮಾಯಣ ದರ್ಶನಂ ರಂಗ ಪ್ರಸ್ತುತಿ ಇಂದು

7

ಶೇಷಗಿರಿ: ರಾಮಾಯಣ ದರ್ಶನಂ ರಂಗ ಪ್ರಸ್ತುತಿ ಇಂದು

Published:
Updated:
Prajavani

ಅಕ್ಕಿಆಲೂರ: ಮೈಸೂರಿನ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ ರಾಷ್ಟ್ರಕವಿ ಕುವೆಂಪು ಅವರ ‘ರಾಮಾಯಣ ದರ್ಶನಂ’ ರಂಗಪ್ರಸ್ತುತಿ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಜ. 3ರಂದು ಸಂಜೆ 6 ಗಂಟೆಗೆ ಪ್ರದರ್ಶನಗೊಳ್ಳಲಿದೆ.

ಶೇಷಗಿರಿಯ ಗಜಾನನ ಯುವಕ ಮಂಡಳದ (ಶೇಷಗಿರಿ ಕಲಾತಂಡ) ಸಹಕಾರದಲ್ಲಿ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. ರಾಜ್ಯದ ಪ್ರಮುಖ 17 ರಂಗ ಕೇಂದ್ರಗಳಲ್ಲಿ ಪ್ರದರ್ಶನ ನಡೆಯಲಿದ್ದು, ಈಗಾಗಲೇ 13 ಕೇಂದ್ರಗಳಲ್ಲಿ ಪ್ರದರ್ಶನ ನಡೆದು, 14 ನೇ ಪ್ರದರ್ಶನಕ್ಕೆ ಶೇಷಗಿರಿ ಅಣಿಯಾಗಿದೆ.

ರಂಗ ನಿರ್ದೇಶಕ ನಿನಾಸಂ ಕೆ.ಜಿ.ಮಹಾಬಲೇಶ್ವರ ನಿರ್ದೇಶನ, ಉಮೇಶ ಸಾಲಿಯಾನ ಸಹ ನಿರ್ದೇಶನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್ ಪರಿಕಲ್ಪನೆ, ಮೈಸೂರು ರಂಗಾಯಣದ ನಿರ್ದೇಶಕಿ ಭಾಗೀರತಿ ಕದಂ ನಿರ್ವಹಣೆ, ಜಗದೀಶ್ ಮನೆವಾರ್ತೆ ಮತ್ತು ಕೃಷ್ಣಕುಮಾರ ನಾರ್ಣಕಜೆ ರಂಗರೂಪದೊಂದಿಗೆ ಪ್ರದರ್ಶನ ಕಾಣಲಿದೆ.

ಬಿಗ್‌ಬಾಸ್ ಖ್ಯಾತಿಯ ರವಿ ಮೂರೂರು ಸಂಗೀತ, ಶ್ರೀನಿವಾಸ್ ಭಟ್ ಚೀನಿ ಸಂಗೀತ ನಿರ್ವಹಣೆ, ಧಾರವಾಡ ರಂಗಾಯಣದ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ವಸ್ತ್ರವಿನ್ಯಾಸ ಹಾಗೂ ಪರಿಕರ, ಮಲ್ಲೇಶ ಕಲ್ಲತ್ತಿ ಬೆಳಕಿನ ವಿನ್ಯಾಸದಲ್ಲಿ ನಾಡಿನ 45 ಕ್ಕೂ ಅಧಿಕ ಕಲಾವಿದರು 4 ಗಂಟೆಗಳ ಪ್ರದರ್ಶನ ನೀಡುವರು.

ರಂಗಾಸಕ್ತರು ಹೆಚ್ಚಿನ ಮಾಹಿತಿ ಹಾಗೂ ಪ್ರವೇಶ ಪತ್ರಗಳಿಗೆ ಮೊ. 8095719018, 9008551395 ಅಥವಾ 9448630551 ಸಂಪರ್ಕಿಸುವಂತೆ ಗಜಾನನ ಯುವಕ ಮಂಡಳದ ಅಧ್ಯಕ್ಷ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ್ ಧಾರೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !