ರಾಣೆಬೆನ್ನೂರು: ‘ಮದ್ಯ ವರ್ಜನ ಶಿಬಿರವು ಒಂದು ಯಜ್ಞವಿದ್ದಂತೆ. ನಿಷ್ಠೆಯಿಂದ ಭಾಗವಹಿಸಿದರೆ ಫಲ ಖಂಡಿತ ಸಿಗುತ್ತದೆ’ ಎಂದು ಡಿವೈಎಸ್ಪಿ ಜೆ.ಲೋಕೇಶ ಹೇಳಿದರು.

ಇಲ್ಲಿನ ಸಿದ್ಧೇಶ್ವರನಗರದ ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಮಂಟಪದಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ 2058ನೇ ಮದ್ಯ ವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದ ಒಳಿತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಂತಹ ಮಹತ್ವದ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಿಬಿರ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಿ. ಆಧ್ಯಾತ್ಮಿಕ ಮತ್ತು ಸಂಸ್ಕಾರದಿಂದ ಸಂತೃಪ್ತಿಯನ್ನು ಕಂಡು ಜೀವನ ಸಾರ್ಥಕತೆ ಕಂಡುಕೊಂಡವರಾಗಿದ್ದಾರೆ. ಇಂದು ಸಮಾಜದಲ್ಲಿ ಕೆಲವೇ ಕೆಲವರು ತಮ್ಮ ಬದುಕಿನಲ್ಲಿ ಚಟವಾಗಿ ಅಳವಡಿಸಿಕೊಂಡಿರುವ ಮದ್ಯವ್ಯಸನಿಗಳಿಂದಾಗಿ ಸಮಾಜದ ಸ್ವಾಸ್ತ್ಯ ಕೆಡುವಂತಾಗಿದೆ’ ಎಂದರು.

ಗಂಗಾಪುರದ ಸಿದ್ಧಾರೂಢ ಆಶ್ರಮದ ಅಧ್ಯಕ್ಷ ಮರುಳಶಂಕರ ಸ್ವಾಮೀಜಿ ಮಾತನಾಡಿ, ‘ತಂದೆ, ತಾಯಿ ತಮ್ಮ ಉಜ್ಜಲ ಭವಿಷ್ಯಕ್ಕಾಗಿ ನಿರಂತರ ಶ್ರಮಿಸಿದ್ದಾರೆ. ಬೆಳೆದು ದೊಡ್ಡವರಾದ ನಂತರ ಇಂತಹ ಚಟಕ್ಕೆ ಬಲಿಯಾಗಿದ್ದಾರೆ. ತಮ್ಮ ಜೀವನ ಪುನಃ ಉಜ್ಜಲಗೊಳಿಸಿಕೊಳ್ಳಲು ಇದೊಂದು ಅವಕಾಶ ಸಿಕ್ಕಿದೆ. ಸಮಾಜದಲ್ಲಿ ಇತರರಂತೆ ತಾವು ಸಹ, ಗೌರವಯುತವಾಗಿ ಬದುಕಿ, ಬಾಳಿ ಜನ್ಮ ಸಾರ್ಥಕತೆ ಪಡಿಸಿಕೊಳ್ಳಲು ಮುಂದಾಗಬೇಕು’ ಎಂದರು.

ಜಿಲ್ಲಾ ಜನಜಾಗ್ರತಿ ವೇದಿಕೆ ಅಧ್ಯಕ್ಷ ಬಸವರಾಜ ಹುಲ್ಲತ್ತಿ ಮಾತನಾಡಿ, ‘ಕಳೆದ 20 ವರ್ಷಗಳಿಂದ ತಾವು ಈ ಯೋಜನೆ ಸೇವಾಕರ್ತರಾಗಿ ಕೆಲಸ ಮಾಡುತ್ತಿದ್ದು, ಇದರಿಂದ ಮದ್ಯ ವ್ಯಸನಿಗಳ ಬಾಳು ಸುಂದರಗೊಳಿಸಿದ ಆತ್ಮತೃಪ್ತಿ ಮತ್ತು ಸಂಸ್ಥೆಯ ಎಲ್ಲರಿಗೂ ಇದೆ. ಇಲ್ಲಿ ಯಾರಿಗೂ ಔಷಧಿ ಗುಳಿಗೆ, ಚುಚ್ಚುಮದ್ದು ನೀಡಿ ಗುಣಪಡಿಸುವುದಿಲ್ಲ. ಕೇವಲ ಮನಃಪರಿವರ್ತನೆ ಮೂಲಕ ಹೊಸ ದಿಕ್ಕಿನತ್ತ ಕೊಂಡೊಯ್ಯಲಾಗುತ್ತಿದೆ ಎಂದರು.

ಸಂಚಾಲನಾ ಸಮಿತಿ ಅಧ್ಯಕ್ಷ, ಮಂಜುನಾಥ ಗೌಡಶಿವಣ್ಣನವರ, ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ ಮಾತನಾಡಿದರು. ಜಿಲ್ಲಾ ಜನಜಾಗೃತಿ ಸಮಿತಿ ದೊಡ್ಡವೀರಭದ್ರಪ್ಪ ಮೋಟಗಿ, ಯೋಜನಾಧಿಕಾರಿ ಮಂಜುನಾಥಗೌಡ, ಧಾರವಾಡ ಪ್ರಾದೇಶಿಕ ಯೋಜನಾ ನಿರ್ದೇಶಕ ಭಾಸ್ಕರ ಎಂ, ಚಂದ್ರಶೇಖರ ಬಣಕಾರ,ಶಿವಾನಂದ ಮಾಳಗಿ, ನಿಂಗಪ್ಪ ಸತ್ಯಪ್ಪನವರ, ನಿತ್ಯಾನಂದ ಕುಂದಾಪುರ, ಮಾರ್ಕಂಡಪ್ಪ ನೇಕಾರ, ಶಿಭಿರಾಧಿಕಾರಿ ದಿವಾಕರ್ ಪೂಜಾರಿ, ನಿರ್ಮಲಾ ಅಣ್ಣೇಶ, ಗೌರಮ್ಮ,ರವಿ, ತಾರಾಮತಿ ಹಿರೇಮಠ, ಯಮುನಾ, ಅಂಜು ಶೆಟ್ಟಿ, ಆನಂದ್, ರಮೇಶ್, ಉಮೇಶ್, ನವೀನಾ ಟಿ ಇದ್ದರು. 70ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-22-242996137

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.