ರಾಣೆಬೆನ್ನೂರು: ಇಲ್ಲಿನ ದೊಡ್ಡಪೇಟೆಯ ಬಸವೇಶ್ವರ ದೇವಸ್ಥಾನ ಸಮಿತಿಯಿಂದ ಸೋಮವಾರ ಬಸವ ಜಯಂತಿ ಆಚರಿಸಲಾಯಿತು.

ಜಗಜ್ಯೋತಿ ಬಸವೇಶ್ವರ ಮೂರ್ತಿ ಹಾಗೂ ಏಕೋರಾಮರಾಧ್ಯರ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ್ ಅರುಣ ಕಾರ್ಗಿ ಮತ್ತು ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ರೈತರು ಶೃಂಗರಿಸಿದ ಹತ್ತಾರು ಎತ್ತು ಜೋಡಿಗಳ ಮೆರವಣಿಗೆ ಮಾಡಿದರು.

ಬೆಳಿಗ್ಗೆ ದೇವಸ್ಥಾನ ಸಮಿತಿ ಪದಾಧಿಕಾರಿಗಳಿಂದ ಬಸವಣ್ಣ, ವೀರಭದ್ರೇಶ್ವರ ಮತ್ತು ಗಣೇಶನ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ, ಮಹಾಪೂಜೆ, ಮಹಾಮಂಗಳಾರತಿ ಮತ್ತು ಅಟವಾಳಗಿ ಸಹೋದರರಿಂದ ಪುರುವಂತಿಕೆ ಮತ್ತು ಗುಗ್ಗಳ ಸೇವೆ ನಡೆಯಿತು. ಮೆರವಣಿಗೆಯು ಸಕಲ ವಾಧ್ಯಗಳೊಂದಿಗೆ ಹಾಗೂ ಎತ್ತುಗಳ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ಸಾಗುವ ಬೀದಿಯಲ್ಲಿ ತಳಿರು ತೋರಣ ಕಟ್ಟಿ ಶೃಂಗರಿಸಲಾಗಿತ್ತು. ನಂತರ ಮೆರವಣಿಗೆಯು ಮರಳಿ ದೇವಸ್ಥಾನದ ಆವರಣಕ್ಕೆ ಬಂದು ಸಂಪನ್ನಗೊಂಡಿತು. ನಂತರ ಪ್ರಸಾದ ವಿತರಣೆ ನಡೆಯಿತು.

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ‘ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಮನುಕುಲಕ್ಕೆ ಸಮಾನತೆಯ ಪಾಠ ಕಲಿಸಿಕೊಟ್ಟ ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ನಮಗೆಲ್ಲರಿಗೂ ಪಾಠ, ಬದುಕಿಗೆ ದಾರಿ. ಶ್ರೇಷ್ಠರ ತತ್ವ, ಸಿದ್ಧಾಂತಗಳನ್ನು ಅರ್ಥೈಸಿ ಜೀವನದಲ್ಲಿ ಅಳವಡಿಸಿಕೊಂಡರೆ ಸುಂದರ ಬದುಕು ನಮ್ಮದಾಗುತ್ತದೆ’ ಎಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಯ ವೀರಣ್ಣ ಜಂಬಿಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಬಸವರಾಜ ವಿ.ರೊಡ್ಡನವರ, ಶಂಭಣ್ಣ ಬಳ್ಳಾರಿ, ಮುರುಗೇಶ ಬಳ್ಳಾರಿ, ಬಸವರಾಜ ಚಿಮ್ಮಲಗಿ, ಸಿದ್ದು ಚಿಕ್ಕಬಿದರಿ, ಬಸವರಾಜ ತಾವರಗೊಂದಿ, ಚನ್ನಪ್ಪ ಕಟಗೀಹಳ್ಳಿ, ಲೆಕ್ಕದಪ್ಪ ಜಂಬಿಗಿ, ಕಿರಣ ಹಿರೇಬಿದರಿ, ಪ್ರಶಾಂತ ಕೊಪ್ಪದ, ಶಿವು ಬೇತೂರ, ಶಿದ್ದಲಿಂಗಪ್ಪ ಕೊಪ್ಪದ, ರಾಜು ಬಳ್ಳಾರಿ, ಪವನಕುಮಾರ ಮಲ್ಲಾಡದ, ಅಮೋಘ ಬದಾಮಿ, ಅಶೋಕ ಅರಳೇಶ್ವರ, ಬಾರಿಗಿಡದ, ಅರ್ಚಕ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-1225012042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.