ರಾಣೆಬೆನ್ನೂರು: ‘ದೇವಸ್ಥಾನಗಳು ನಾಡಿನ ಜನರಲ್ಲಿ ಭಗವಂತನ ಬಗ್ಗೆ ಸಂಸ್ಕೃತಿ ಸಂಸ್ಕಾರದ ಬಗ್ಗೆ ವಿಶ್ವಾಸ ತುಂಬುವ ಕೇಂದ್ರಗಳು’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಹಲಗೇರಿ ಗ್ರಾಮದ ಗಾಂಧಿ ವೃತ್ತದಲ್ಲಿ ಈಚೆಗೆ ನಡೆದ ಬಸವೇಶ್ವರ ದೇವಸ್ಥಾನದ ನೂತನ ಗೋಪುರದ ಕಳಸಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಲಗೇರಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬಹಳ ಪ್ರಮುಖವಾದ ಗ್ರಾಮ. ಸಾಮೂಹಿಕ ಜಾಗೃತಿ ಮೂಡಿಸಲು ಶ್ರದ್ಧಾ ಕೇಂದ್ರಗಳ ಅವಶ್ಯಕತೆ ಇದೆ. ದೇವರು ಅಂದರೆ ಎಲ್ಲರೂ ಒಂದಾಗುತ್ತಾರೆ. ರಾಜಕಾರಣ ಅಂದರೆ ಬೇರೆ ಆಗುತ್ತಾರೆ. ರಾಜಕಾರಣ ಸಂಸ್ಕೃತಿ ಅಲ್ಲ’ ಎಂದು ಹೇಳಿದರು.

ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಸ್.ಎಸ್. ರಾಮಲಿಂಗಣ್ಣನವರ, ಬಸವೇಶ್ವರ ದೇವಸ್ಥಾನ ಅಧ್ಯಕ್ಷ ಚನ್ನಪ್ಪ ಬಾಣಾಪುರ, ಸಿದ್ದನಗೌಡ್ರ ಪಾಟೀಲ, ಪವನ ಕಬ್ಬಿಣದ, ಶಿವಪುತ್ರಪ್ಪ ದೇಸಾಯಿ, ನಾಗರಾಜ ಬಾಳಿಕಾಯಿ, ಸೋಮನಗೌಡ ಮಾಳಗಿ, ಎಸ್.ಡಿ. ಹಿರೇಮಠ, ಪವನಕುಮಾರ ಮಲ್ಲಾಡದ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಅಭಿಮಾನಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-22-1302761300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.