ರಾಣೆಬೆನ್ನೂರು: ಇಲ್ಲಿನ ಕ್ರೀಡಾಂಗಣದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಿಸುವ ಹಿನ್ನೆಲೆಯಲ್ಲಿ ಶಾಸಕ ಪ್ರಕಾಶ ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಇಲ್ಲಿನ ನಗರಸಭೆಯ ಗುಡ್ಡದ ಸ್ಮಾರಕಭವನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಪರ ವಿರೋಧದ ನಡುವೆ ಸುಧೀರ್ಘ ಚರ್ಚೆ ನಡೆದು ಒಮ್ಮತದ ತೀರ್ಮಾನ ಕೈಗೊಳ್ಳಲಾಗದೆ ಸಭೆಯು ಅಪೂರ್ಣಗೊಂಡಿತು.

ನಗರಸಭಾ ಕ್ರೀಡಾಂಗಣದಲ್ಲಿ ಬಸ್ ನಿಲ್ದಾಣ ಮಾಡುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ. ಜೊತೆಗೆ ನಗರದ ಮಧ್ಯಭಾಗದಲ್ಲಿರುವ ಕಾರಣದಿಂದಾಗಿ ಎಲ್ಲರಿಗೂ ಉಪಯೋಗವಾಗಲಿದೆ. ಕ್ರೀಡಾಂಗಣವನ್ನು ನಗರದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್ ಬಳಿ 10 ಎಕರೆ ಸರ್ಕಾರಿ ಜಾಗೆ ಗುರುತಿಸಲಾಗಿದೆ. ಅಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ನಿರ್ಮಿಸುವ ಮೂಲಕ ಹೈಟೆಕ್ ಕ್ರೀಡಾಂಗಣ ಮಾಡಲು ನಿರ್ಧರಿಸಿರುವೆ. ಈ ಕುರಿತು ಜನಾಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳುವ ಸಂಬಂಧ ಈ ಸಭೆ ಕರೆಯಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಸಭೆಗೆ ಪ್ರಸ್ತಾಪಿಸಿದರು.

ಪರ–ವಿರೋಧದ ಚರ್ಚೆ: ಈಗಿರುವ ಕ್ರೀಡಾಂಗಣದ ಪಕ್ಕದಲ್ಲಿ 150 ವರ್ಷಗಳ ಇತಿಹಾಸವಿರುವ ನಗರಸಭಾ ಪ್ರೌಢಶಾಲೆ ಹಾಗೂ 135 ವರ್ಷಗಳ ಹಳೆಯ ಸರ್ಕಾರಿ ಶಾಲೆ ನಂ.1, ಜೊತೆಗೆ ಸರ್ಕಾರಿ ಶಾಲೆ ನಂ. 7 ಮತ್ತು ನಂ. 8 ಮೂರು ಪ್ರಾಥಮಿಕ ಶಾಲೆಗಳಿವೆ. ಅದರ ಪಕ್ಕದಲ್ಲಿ 60 ವರ್ಷ ಇತಿಹಾಸವಿರುವ ಆರ್ ಟಿ ಇ ಎಸ್ ಪಿಯು ಕಾಲೇಜ್ ಇದೆ. ಎದುರಿಗೆ ಸರ್ಕಾರಿ ಐಟಿಐ ಕಾಲೇಜು ಇದ್ದು ಬಸ್ ನಿಲ್ದಾಣ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲ ಆಗಲಿದೆ. ಜೊತೆಗೆ ಹೆಚ್ಚಿನ ಧ್ವನಿ ವರ್ಧಕ ಹಾಗೂ ಬಸ್ಸುಗಳ ಓಡಾಟದಿಂದ ತೊಂದರೆಗಳಾಗಲಿವೆ. ಜೊತೆಗೆ ರಾಷ್ಟೀಯ ಹಬ್ಬಗಳ ಆಚರಣೆಗಳಾದ ಸ್ವಾತಂತ್ರ್ಯ ದಿನ, ಪ್ರಜಾ ರಾಜ್ಯೋತ್ಸವ ಸೇರಿದಂತೆ ಇತರ ಖಾಸಗಿ ಕಾರ್ಯಕ್ರಮಗಳು ನಡೆಯಲು ತೊಂದರೆಗಳಾಗುತ್ತವೆ. ಈ ಕಾರಣದಿಂದ ಇಲ್ಲಿ ಕ್ರೀಡಾಂಗಣ ಮಾಡುವುದು ಬೇಡ ಎಂಬುದರ ಬಗ್ಗೆ ಸಾರ್ವಜನಿಕರ ಅಭಿಪ್ರಾಯಗಳು ಮೂಡಿ ಬಂದವು.

ವೈದ್ಯ ಡಾ.ಎಸ್.ಎಲ್. ಪವಾರ ಮಾತನಾಡಿ, 1944-45 ರಲ್ಲಿ ಬ್ರಿಟಿಷ್ ಸರ್ಕಾರ ಶಾಲೆ, ಕ್ರೀಡಾಂಗಣ ನಿರ್ಮಿಸಲು ಜಾಗೆಯನ್ನು ನೀಡಿದ್ದು, ಅಲ್ಲಿ ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ನಿರ್ದೇಶನವಿದೆ ಎಂದು ಸಭೆಗೆ ತಿಳಿಸಿದರು.

ಮೊದಲು ಓಂ ಪಬ್ಲಿಕ್ ಸ್ಕೂಲ್ ಬಳಿ ಈಗಾಗಲೇ ಗುರುತಿಸಿದ 10 ಎಕರೆ ಜಾಗೆಯಲ್ಲಿ ಮೊದಲು ಹೈಟೆಕ್ ಕ್ರೀಡಾಂಗಣ ನಿರ್ಮಿಸಿ ಉದ್ಘಾಟನೆ ಮಾಡಬೇಕು. ನಂತರ ನಗರಸಭೆ ಕ್ರೀಡಾಂಗಣದಲ್ಲಿ ಹೊಸ ಬಸ್ ನಿಲ್ದಾಣಕ್ಕೆ ಮುಂದಾಗಬೇಕು. ಇಷ್ಟು ವರ್ಷ ತಡೆದುಕೊಂಡಿದ್ದೇವೆ. ಇನ್ನೊಂದು ಐದು ವರ್ಷ ತಡೆದುಕೊಳ್ಳುತ್ತೇವೆ ಎಂದು ಸ್ವಾಭಿಮಾನಿ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ ಸಭೆಗೆ ತಿಳಿಸಿದರು.

ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ಬಸ್ ನಿಲ್ದಾಣ ಮಾಡುವುದರಿಂದ ದಿನಂಪ್ರತಿ ನಗರಕ್ಕೆ ಆಗಮಿಸುವ ಸಹಸ್ರಾರು ಗ್ರಾಮೀಣ ಪ್ರದೇಶಗಳ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲ ಆಗಲಿದೆ. ಹಳೇ ಬಸ್ ನಿಲ್ದಾಣಕ್ಕೆ ಬರಲು, ಹೋಗಲು ಹೆಚ್ಚು ಅನುಕೂಲವಾಗಲಿದೆ. ಅನೇಕ ವರ್ಷಗಳಿಂದ ಕ್ರೀಡಾಂಗಣ ಅಭಿವೃದ್ದಿಯಾಗಿಲ್ಲ . ಈಗಿರುವ ಕ್ರೀಡಾಂಗಣ ಸ್ಥಳಾಂತರಿಸಿದರೆ ಸುಸಜ್ಜೀತವಾದ, ಅತ್ಯುತ್ತಮವಾದ ಕ್ರೀಡಾಂಗಣ ಪಡೆಯಬಹುದು. ಜೊತೆಗೆ ಕ್ರೀಡಾಂಗಣದ ಕಾರ್ಯ ಆರಂಭವಾದ ನಂತರ ಬಸ್ ನಿಲ್ದಾಣ ಇಲ್ಲಿ ನಿರ್ಮಿಸಬಹುದು. ಈಗಿರುವ ಬಸ್ ನಿಲ್ದಾಣದಿಂದ ಬಹಳಷ್ಟು ಹತ್ತಿರವಿರುವ ಕಾರಣ ಕ್ರೀಡಾಂಗಣದಲ್ಲಿಯೇ ಬಸ್ ನಿಲ್ದಾಣ ಮಾಡಬೇಕು ಎಂದು ಕೆಲವರು ಸಭೆಗೆ ಅಭಿಪ್ರಾಯಗಳನ್ನು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ಎಚ್. ಬುರಡೀಕಟ್ಟಿ ಮಾತನಾಡಿ, ನ್ಯಾಯಾಲಯ ಸಂಕೀರ್ಣವನ್ನು ಬೇರೆ ಕಡೆ ಸ್ಥಳಾಂತರ ಮಾಡಲು ಅವಕಾಶವಿಲ್ಲ. ಈಗಿರುವ ಜಾಗದಲ್ಲಿ ಅಭಿವೃದ್ಧಿಪಡಿಸಲು ಸುಪ್ರಿಂ ಕೋರ್ಟ್ ಆದೇಶವಿದೆ ಎಂದು ತಿಳಿಸಿದರು.

ನಗರದ ಹವಾಲ್ದಾರ ಹೊಂಡ, ಹಲಗೇರಿ ರಸ್ತೆಯ ಕೆಇಬಿ ಗ್ರಿಡ್, ಜಾನುವಾರು ಮಾರುಕಟ್ಟೆ, ಈಗಿರುವ ನ್ಯಾಯಾಲಯವನ್ನು, ಖಬರಸ್ಥಾನದ ಎದುರಿಗಿರುವ ಜಾಗವನ್ನು, ಎಂಜಿನಿಯರಿಂಗ್ ಕಾಲೇಜು ಹತ್ತಿರವಿರುವ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂದು ಇನ್ನು ಕೆಲವರು ಸಲಹೆ ನೀಡಿದರು.

ಕೆಇಬಿ ಗ್ರಿಡ್ನ್ನು ಬೇರೆ ಸ್ಥಳಾಂತರಕ್ಕೆ ₹50 ಕೋಟಿ ಅನುದಾನ ಬೇಕು. ಹವಾಲ್ದಾರ್ ಹೊಂಡವು ಕೆರೆ ಎಂದು ನಮೂದಾಗಿರುವ ಕಾರಣ ಅದನ್ನು ತೆಗೆದುಕೊಳ್ಳಲು ಕಾನೂನಿನ ತೊಡಕಿದೆ. ಇಂದಿನ ಸಭೆಯಲ್ಲಿ ಅನೇಕ ವಿಷಯಗಳು ನಾಗರಿಕರಿಂದ ಮೂಡಿಬಂದವು. ಇವುಗಳ ಸಲಹೆಗಳನ್ನು ಪಡೆದು ಮತ್ತೆ ಜನಾಭಿಪ್ರಾಯದೊಂದಿಗೆ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಶಾಸಕ ಪ್ರಕಾಶ ಕೋಳಿವಾಡ ಸ್ಪಷ್ಟಪಡಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ಹಾವೇಮುಲ್ ಅಧ್ಯಕ್ಷ ಮಂಜನಗೌಡ ಪಾಟೀಲ, ವೈದ್ಯ ಡಾ.ಎಸ್ ಎಲ್ ಪವಾರ, ಈಶ್ವರ ಹಾವನೂರ, ಮಧು ಕೋಳಿವಾಡ, ಪುಟ್ಟಪ್ಪ ಮರಿಯಮ್ಮನವರ, ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಎಫ್. ಪಾಟೀಲ, ಮಂಜನಗೌಡ ಪಾಟೀಲ, ಜಗದೀಶ ಕೆರೂಡಿ, ಮಂಜುನಾಥ ಗೌಡ ಶಿವಣ್ಣನವರ, ರುಕ್ಮಿಣಿದೇವಿ ಸಾವುಕಾರ, ಸುದೀರ ಕುರುವತ್ತಿ, ನಿತ್ಯಾನಂದ ಕುಂದಾಪುರ, ವಿ.ವಿ. ಹರಪನಹಳ್ಳಿ, ಶಿವಯೋಗಿ ಮಹಾನುಭಾವಿಮಠ, ವಿ.ಪಿ. ಲಿಂಗನಗೌಡ್ರ, ಪ್ರಕಾಶ ಪೂಜಾರ, ಬಿ.ಎಚ್. ಬುರಡಿಕಟ್ಟಿ, ಗಣೇಶ ಗೋಣಿಬಸಮ್ಮನವರ, ಏಕಾಂತ ಮುದಿಗೌಡ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-22-165139107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.