ರಾಣೆಬೆನ್ನೂರು: ಅಕ್ರಮ ಗೋ ಸಾಗಾಟ ಮತ್ತು ಗೋಹತ್ಯೆಯಾಗದಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಶುಕ್ರವಾರ ಪ್ರತಿಭ ಟನಾ ಮೆರವಣಿಗೆ ನಡೆಸಿದರು.

ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಅಲ್ಲಿ ತಹಶೀಲ್ದಾರ್ ಆರ್.ಎಚ್.ಬಾಗವಾನ ಅವರಿಗೆ ಮನವಿ ಸಲ್ಲಿಸಿದರು.

ಗೋ ರಕ್ಷಾ ಪ್ರಮುಖ ಮಂಜುನಾಥ ಪ್ರಕಾಶ ಚಲವಾದಿ ಮಾತನಾಡಿ, ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2020ರ ವಿಧಾನ ಸಭೆ ವಿಧೇಯಕ ಸಂಖ್ಯೆ -69 ಸರ್ಕಾರದ ಆದೇಶವಿದ್ದರೂ ಕೂಡಾ ಸರ್ಕಾರದ ಆದೇಶ ಗಾಳಿಗೆ ತೂರಿ ಗೋಹತ್ಯೆ ನಿರಂತರವಾಗಿ ನಡೆಯುತ್ತಿದೆ. ಹಿಂದೂ ಸಂಪ್ರದಾಯದ ಪ್ರಕಾರ ಗೋವನ್ನು 33 ಕೋಟಿ ದೇವಾನುದೇವತೆಗಳ ಸಮಾನವೆಂದು ಪೂಜಿಸಿ ಆರಾಧಿಸುವ ಸಂಸ್ಕೃತಿ ನಮ್ಮದು. ಗೋ ಹತ್ಯೆಯಿಂದ ಹಿಂದೂಗಳ ಭಾವನೆಗೆ ಅಪಾರವಾದ ಹಾನಿಯಾಗುತ್ತಿದೆ ಮತ್ತು ನಮ್ಮ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಆರೋಪಿಸಿದರು.

ಕಾರಣ ಜಿಲ್ಲೆಯಲ್ಲಿ ಅಕ್ರಮ ಗೋಸಾಟವನ್ನು ಮತ್ತು ಸರ್ಕಾರದ ಆದೇಶದಂತೆ ಗೋ ಹತ್ಯೆಯಾಗದಂತೆ ಕಟ್ಟುನಿಟ್ಟಿನ ಆದೇಶವನ್ನು ಪೊಲೀಸರು, ಸಾರಿಗೆ ಅಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಇಲಾಖೆಯವರಿಗೆ ತಾವು ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಆದೇಶ ಪಾಲಿಸದ ಗೋಹಂತಕರಿಗೆ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸಬೇಕು. ಮಾತೃ ಸ್ವರೂಪಿ ಗೋ ಮಾತೆಯ ರಕ್ಷಣೆಗೆ ತಾವು ಪ್ರಮುಖ ಕೇಂದ್ರಗಳಲ್ಲಿ ಪರಿಶೀಲನಾ ತಂಡವನ್ನು ನೇಮಿಸಬೇಕು.ಪೊಲೀಸ್ ಇಲಾಖೆಯಿಂದ ಚೆಕ್ ಪೋಸ್ಟ್ ನಿರ್ಮಾಣ ಮಾಡಬೇಕು. ಮೇ 29ರವರೆಗೆ ಗೋ ಮಾರಾಟವನ್ನು ಮತ್ತು ಜಾನುವಾರು ಸಂತೆಯನ್ನು ನಿಷೇದ ಆದೇಶ ಹೊರಡಿಸಬೇಕು ಎಂದರು.

ಜಿಲ್ಲಾ ಭಜರಂಗದಳ ವಿನಯಗೌಡ ಬಾಳನಗೌಡ, ಜಿಲ್ಲಾ ಸಹ ಸಂಯೋಜಕ, ಹಾವೇರಿ ಜಿಲ್ಲಾ ವಿಎಚ್ಪಿ ಸಹ ಸಂಯೋಜಕ ಚನ್ನಬಸಪ್ಪ ಓಂಕಾರಣ್ಣನವರ, ಶರತಕುಮಾರ ನೂಲಗೇರಿ, ಬೀರಪ್ಪ ಗುದಿಗೇರ, ನಾಗರಾಜ ಕೊರವರ, ಮಾಯಮ್ಮನವರ, ಶರತ, ಜಯರಾಮ ಕುಂದಾಪುರ, ಮನೋಜ ಬಾಳಿಕಾಯಿ, ಅನಿಲ ಶಿರಹಟ್ಟಿ, ಕಿರಣ ಬೀಮಪ್ಪ ಮೇಡ್ಲೆರಿ, ದಿನೇಶ ಪಾಟೀಲ, ಲಕ್ಷ್ಮಣ ನಾಯಕ, ಅನಿಲ ಕುರಿಯವರ, ಶ್ರೀನಿಧಿ ದಿವಾನ, ಸಂತೋಷ ಮಹಾಂತ, ಹನುಮಂತ ಎನ್.ಇ, ಅಣ್ಣಪ್ಪ ಚಿನ್ನಿಕಟ್ಟಿ, ಪ್ರಶಾಂತ ಬಾಳನಗೌಡ್ರ, ಮನು ಗುತ್ತಲ, ವಿನೋದ ಕುಮಾರ, ವಿಶ್ವಗೌಡ ಬೋಸ್ಲೆ, ಜಯಪ್ಪ, ತಮ್ಮಣ್ಣ, ಶಿವಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-22-1011026261

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.