ರಾಣೆಬೆನ್ನೂರು: ‘ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ ಸಂಭವಿಸಿದ್ದು, ರೈತರಿಗೆ ತುಂಬಲಾರದ ನಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಧ್ಯಂತರ ಪರಿಹಾರ ನೀಡಬೇಕು’ ಎಂದು ಬಿಜೆಪಿ ಮುಖಂಡ ಸಂತೋಷಕುಮಾರ ಪಾಟೀಲ ಆಗ್ರಹಿಸಿದರು.

ತಾಲ್ಲೂಕಿನ ಮೇಡ್ಲೇರಿ ಹೋಬಳಿ ವ್ಯಾಪ್ತಿಯ ತುಂಗಭದ್ರಾ ನದಿ ತೀರದ ಪ್ರದೇಶಗಳಾದ ಹಿರೇಬಿದರಿ, ಐರಣಿ ಹಾಗೂ ಮೇಡ್ಲೇರಿ ಗ್ರಾಮಗಳಲ್ಲಿ ಅಕಾಲಿಕ ಮಳೆ ಮತ್ತು ಬಿರುಗಾಳಿ ಮಳೆಯಿಂದಾಗಿ ಹಾನಿಯಾದ ಪ್ರದೇಶಗಳನ್ನು ಶನಿವಾರ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರ ಅಡಿಕೆಗೆ ಬೆಳೆಗೆ ₹1 ಲಕ್ಷ, ಭತ್ತಕ್ಕೆ ₹50 ಸಾವಿರದಂತೆ ಪರಿಹಾರವನ್ನು ಮೇ 28ರೊಳಗಾಗಿ ನೀಡಬೇಕು. ಇಲ್ಲವಾದರೆ ಮೇ 29ರಂದು ತಹಸೀಲ್ದಾರ್ ಕಚೇರಿ ಎದುರು ಸರ್ಕಾರದ ಪುಣ್ಯರಾಧನೆ ಕಾರ್ಯಕ್ರಮ ಮಾಡಲಾಗುವುದು’ ಎಂದು ಎಚ್ಚರಿಸಿದರು.

ತಾಲ್ಲೂಕಿನ ಹಿರೇಬಿದರಿ ಗ್ರಾಮದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ನೇತೃತ್ವದಲ್ಲಿ ಪಾದಯಾತ್ರೆ ಮೂಲಕ ನಗರಕ್ಕೆ ಆಗಮಿಸಲಾಗುವುದು. ನಂತರ ನಗರದ ಚೌಡೇಶ್ವರಿ ದೇವಸ್ಥಾನದಿಂದ ಎತ್ತಿನ ಗಾಡಿ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿ ಎದುರು ಪ್ರತಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಮೇ 17ರಂದು ಮಧ್ಯಾಹ್ನ 3ಕ್ಕೆ ತಾಲ್ಲೂಕಿನ ಹಿರೇಬಿದರಿ ಗ್ರಾಮಕ್ಕೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಹಾನಿಯಾದ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.

ಈ ವೇಳೆ ಯುವರಾಜ ಬಾರಟಕ್ಕಿ, ಸೋಮು ಹಲಗೇರಿ, ಸಿದ್ದನಗೌಡ ಪಾಟೀಲ, ರಾಮಣ್ಣ ಹೂನ್ನಾಳಿ, ಹನುಮಂತಪ್ಪ ಚಂದಾಪುರ್, ತಿಪ್ಪೇಶ ಮೂಗಾನವರ್, ಉಮೇಶ್ ಚಿಕ್ಕಳವರ, ವಿಶ್ವನಾಥ್ ಚನ್ನಪ್ಪನವರ, ಬಸವರಾಜ ಕುರುವತ್ತಿ, ಬಸವರಾಜ ಹರಕನಾಳ, ಸುಭಾಷ್ ಮೇಡ್ಲೇರಿ, ಚಂದ್ರಪ್ಪ ಚಂದಾಪುರ, ನಾಗನಗೌಡ ಕೂನಬೇವು, ವಿರುಪಾಕ್ಷಪ್ಪ ಮಳವಳ್ಳಿ, ಉಮೇಶ್ ಮಳವಳ್ಳಿ, ದಿಳ್ಳಪ್ಪ ಕಂಬಳಿ, ಗುಡ್ಡಪ್ಪ ಕಂಬಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-22-102923453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.