ರಾಣೆಬೆನ್ನೂರು: ಕೊಯ್ಲು ಮಾಡಿ ಮಷೀನ್ಗೆ ಹಾಕಿಸಲು ಸಂಗ್ರಹಿಸಿಟ್ಟಿದ್ದ ಕಡಲೆಕಾಳು ಗಿಡದ ರಾಶಿಗೆ ಮತ್ತು ಸಮೀಪದಲ್ಲಿದ್ದ ಬಿಳಿಜೋಳದ ಬಣವೆಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಕಡಲೆಕಾಳು ಗಿಡದ ರಾಶಿ ಸಂಪೂರ್ಣ ಸುಟ್ಟು ₹ 1 ಲಕ್ಷಕ್ಕೂ ಹೆಚ್ಚು ಹಾನಿಯಾದ ಘಟನೆ ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಈಚೆಗೆ ನಡೆದಿದೆ.

ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೌಡಯ್ಯದಾನಪುರದ ಮಧು ದೇವೇಂದ್ರಪ್ಪ ಮಡಿವಾಳ ಎಂಬ ರೈತ ನಾಲ್ಕು ಎಕರೆ ಜಮೀನಿನಲ್ಲಿ ಕಡ್ಲಿಕಾಳು ಬೆಳೆಯನ್ನು ಬೆಳೆದಿದ್ದರು. ಬೆಳೆ ಫಸಲು ಬಂದ ಪರಿಣಾಮ ಕೂಲಿ ಆಳುಗಳನ್ನು ಹಚ್ಚಿ ಕಡಲೆ ಗಿಡಗಳನ್ನು ಕೀಳಿಸಿ ಯಂತ್ರದ ಮೂಲಕ ಕಾಳುಗಳನ್ನು ಬೇರ್ಪಡಿಸಲು ಒಂದೆಡೆ ರಾಶಿಯಾಗಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದರು. ಮನೆಗೆ ಹೋಗಿ ಬೆಳಿಗ್ಗೆ ಬಂದು ನೋಡಿದಾಗ ಸಂಪೂರ್ಣ ಸುಟ್ಟಿದ್ದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.