ರಾಣೆಬೆನ್ನೂರು: ಬೆಳಗಲೆಮ್ಮ ದೇವಾಂಗ ತತ್ವಮತ ಎಂಬ ನಾಮಾಂಕಿತದೊಂದಿಗೆ ದೇವಾಂಗ ಜ್ಯೋತಿ ಹೊತ್ತ ವಾಹನವನ್ನು ಗುರುವಾರ ತಾಲ್ಲೂಕು ದೇವಾಂಗ ಸಮಾಜದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ನಗರದ ದೊಡ್ಡಪೇಟೆ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಬಳಿ ದೇವಾಂಗ ಜ್ಯೋತಿಗೆ ರಾಜ್ಯ ದೇವಾಂಗ ರತ್ನ ಪ್ರಶಸ್ತಿ ಪುರಸ್ಕೃತ ನಾರಾಯಣಪ್ಪ ಮಂಡಕ್ಕಿ ಹಾಗೂ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ಬಸವರಾಜ ಮೈಲಾರ ಮಾತನಾಡಿ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಶಕ್ತಪೀಠ ಬನಶಂಕರಿಯಲ್ಲಿ ಮೇ 9 ಮತ್ತು 10 ರಂದು ನಡೆಯಲಿರುವ ರಾಜ್ಯ ಮಟ್ಟದ ಅಖಿಲ ಭಾರತ ದೇವಾಂಗ ಜಾಗೃತಿ ಸಮಾವೇಶ ಹಾಗೂ ದಯಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 36 ನೇ ವಾರ್ಷಿಕೋತ್ಸವ ಸಮಾರಂಭದ ಪ್ರಚಾರ ಹಿನ್ನೆಲೆಯಲ್ಲಿ ಈ ಜ್ಯೋತಿ ರಾಣೆಬೆನ್ನೂರು ತಾಲ್ಲೂಕಿಗೆ ಆಗಮಿಸಿದೆ ಎಂದರು.

ಇಲ್ಲಿಂದ ಆರಂಭವಾದ ಜ್ಯೋತಿ ಯಾತ್ರೆ ಸುಭಾಸ್ ಚೌಕ, ಬಸವೇಶ್ವರ ದೇವಸ್ಥಾನ, ತಳವಾರ ಗಲ್ಲಿ, ಎಡಿಬಿ ವೃತ್ತ, ಎಂ.ಜಿ.ರಸ್ತೆ, ದುರ್ಗಾ ವೃತ್ತದಿಂದ ಕುರುಬಗೇರಿ ಕುದರಿಗಲ್ಲಿಯ ಪ್ರಾಚೀನ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಸಂಪನ್ನಗೊಂಡಿತು.

ಗೌರವ ಘಟಕದ ಅಧ್ಯಕ್ಷ ಸಂಕಪ್ಪ ಮಾರನಾಳ, ವೈದ್ಯ ಡಾ.ಬಸವರಾಜ ಎಸ್. ಕೇಲಗಾರ, ದೇವಾಂಗ ಸಂಘದ ತಾಲ್ಲೂಕು ಘಟದ ಅಧ್ಯಕ್ಷ ಬಸವರಾಜ ಪಿ. ಲಕ್ಷ್ಮೇಶ್ವರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಗಿರೀಶ ಗುಳೇದಗುಡ್ಡ, ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-22-237538604

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.