ರಾಣೆಬೆನ್ನೂರು: ‘ಆದ್ಯ ವಚನಕಾರ ದೇವರ ದಾಸಿಮಯ್ಯ ಬಸವಾದಿ ಶರಣರಿಗಿಂತ ಪೂರ್ವದಲ್ಲಿಯೇ ಕಾಯಕ ನಿಷ್ಠೆ ಮತ್ತು ವಚನ ಹೇಳುವ ಮೂಲಕ ಸಮಾ ಜದ ಅಂಕು–ಡೊಂಕು ತಿದ್ದಿದ ಮೊದಲಿಗರಾಗಿದ್ದಾರೆ’ ಎಂದು ತಹಶೀಲ್ದಾರ್ ಆರ್.ಎಚ್.ಬಾಗವಾನ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಂತ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿಎಜೆಎಸ್ಎಸ್ ಬಿಇಡಿ ಕಾಲೇಜಿನ ಪ್ರಾಚಾರ್ಯ ಮೃತ್ಯುಂಜಯ ಹಿರೇಮಠ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಬಸವರಾಜ ಕೇಲಗಾರ ಮಾತನಾಡಿದರು.

ನೇಕಾರ ಒಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ರಮೇಶ ಗುತ್ತಲ, ಬಸವರಾಜ ಲಕ್ಷ್ಮೇಶ್ವರ, ಮಂಜು ನಾಥ ಹೊಸಪೇಟೆ, ಸಂಕಪ್ಪ ಮಾರನಾಳ, ಮಾರುತಿ ಗರಡಿಮನಿ, ಅಶೋಕ ದುರ್ಗಶೀಮಿ, ಪ್ರೀತಂ ಬಜ್ಜೆ, ಮನೊಹರ ಲಕ್ಷ್ಮೇಶ್ವರ, ಪರುಶುರಾಮ ಅಗಡಿ, ಕರಬಸಪ್ಪ ನೀಲಗುಂದ, ಗುಡದಯ್ಯ ನೀಲಗುಂದ, ಗಿರೀಶ ಗುಳೇದಗುಡ್ಡ, ಹನುಮಂತಪ್ಪ ಕಬ್ಬಾರ, ಲಕ್ಷ್ಮಣ ಸಾಲಿ, ಪ್ರಕಾಶ ಅಗಡಿ, ವೀಣಾ ಕಲ್ಲಮ್ಮನವರ, ಶಿವರಾಜ ಶೀಮಿಕೇರಿ, ಕಾಳೇರ ಇದ್ದರು.

12ನೇ ಶತಮಾನದ ವಚನಕಾರರ ಸಾಮಾಜಿಕ ಮೌಲ್ಯಗಳು ಇಂದಿಗೂ ಪ್ರಸ್ತುತ. ಕನ್ನಡದಲ್ಲಿ ಮೂಡಿ ಬಂದ ವಚನ ಸಾಹಿತ್ಯವು, ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಾಚಾರ್ಯ ಪ್ರೊ.ಎಸ್.ಪಿ.ಗೌಡರ ಹೇಳಿದರು.

ತಾಲ್ಲೂಕಿನ ಸುಣಕಲ್ಲ ಬಿದರಿ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಇತಿಹಾಸ ವಿಭಾಗದ ಆಶ್ರಯದಲ್ಲಿ ಈಚೆಗೆ ನಡೆದ ವಚನಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೊ.ಕಾಂತೇಶ ಗೋಡಿಹಾಳ ಉಪನ್ಯಾಸ ನೀಡಿದರು.

ಪ್ರೊ.ನಾಗರಾಜ ಗೋಡಿಹಾಳ, ಪ್ರೊ.ಬಸವರಾಜ ಹುಗ್ಗಿ, ರೇವಣಸಿದ್ದಪ್ಪ ಕೆ.ಬಿ.ಮಂಜುನಾಥ ಬಿ.ಕೆ.ಶೋಭಾ ನಂದಿಹಳ್ಳಿ, ಸತೀಶ ನಾಯಕ ಇದ್ದರು.

ಬ್ಯಾಡಗಿ: ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಸೋಮವಾರ ದೇವರ ದಾಸಿಮಯ್ಯ ಅವರ ಜನ್ಮ ದಿನವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ತಹಶೀಲ್ದಾರ್ ಚಂದ್ರಶೇಖರ ನಾಯಕ ಮಾತನಾಡಿ ಬಸವಣ್ಣನವರಿಗಿಂತ ಮುಂಚಿನ ವಚನಕಾರರಲ್ಲಿ ಒಬ್ಬರಾಗಿರುವ ದೇವರ ದಾಸಿಮಯ್ಯ ಅವರು ನೇಕಾರ ಸಮುದಾಯದ ಆರಾಧ್ಯ ದೈವವಾಗಿದ್ದರು. ರಾಮನಾಥ ಎಂಬ ಅಂಕಿತನಾಮದಿಂದ ವಚನಗಳನ್ನು ರಚಿಸುವ ಮೂಲಕ ಸಮಾಜ ಅಂಕುಡೊಂಕುಗಳನ್ನು ತಿದ್ದಲು ಸಾಕಷ್ಟು ಶ್ರಮಿಸಿದ್ದಾರೆ ಎಂದರು.

ಅವರ ವಚನಗಳು ಸಮಾನತೆ ಮತ್ತು ಕಾಯಕ ಮತ್ತು ಭಕ್ತಿಯ ಮಹತ್ವವನ್ನು ಸಾರುತ್ತವೆ ಎಂದು ಹೇಳಿದರು.

ಈ ವೇಳೆ ತಹಶೀಲ್ದಾರ ಕಚೇರಿ ಸಿಬ್ಬಂದಿ, ಸಮಾಜದ ಮುಖಂಡರು ಭಾಗವಹಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-22-256048539

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.