ರಾಣೆಬೆನ್ನೂರು: ನಗರದ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ, ಸಾರ್ವಜನಿಕ ಸಿ.ಟಿ.ಎಸ್ ನಂ.312ಕ್ಕೆ ಇ- ಸ್ವತ್ತು ಕೊಡುವುದು ಮತ್ತು ಮಾದರ ಹೊಂಡ ಅಭಿವೃದ್ಧಿ ಪಡಿಸುವುದು ಮತ್ತು ಕೆಎಚ್ಬಿ ಕಾಲೋನಿಗೆ ಮೂಲ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಗರಸಭೆ ಎದುರು ಈಚೆಗೆ ಪ್ರತಿಭಟನೆ ನಡೆಸಿದರು.

ಆನಂತರ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡ್ರ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಜಿಲ್ಲೆಯಲ್ಲಿಯೇ ರಾಣೆಬೆನ್ನೂರು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ನಗರದ ಸಿಟಿಎಸ್ ನಂ.312ರಲ್ಲಿನ ನಿವೇಶನಗಳಿಗೆ ಇ - ಸ್ವತ್ತು ಕೊಡಬೇಕೆಂದು ಅನೇಕ ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಸ್ಪಂದಿಸಿಲ್ಲ. ಕೆ.ಎಚ್.ಬಿ. ಕಾಲೊನಿ ನಿವಾಸಿಗಳು ಹಾಗೂ ಅಲ್ಲಿನ ಹಿರಿಯರು ಮೂಲ ಸೌಲಭ್ಯಕ್ಕಾಗಿ ನಗರಸಭೆಗೆ ಅಲೆದಾಡಿ ಮಾನಸಿಕವಾಗಿ ನೊಂದಿದ್ದಾರೆ. ಕಸ ಸಂಗ್ರಹ ವ್ಯವಸ್ಥೆಯೊಂದನ್ನು ಬಿಟ್ಟರೆ ಬೇರೆ ಯಾವುದೇ ಸೌಲಭ್ಯಗಳಿಲ್ಲ. ಅಲ್ಲಿರುವ ರಸ್ತೆಗಳು ಹಾಳುಬಿದ್ದಿವೆ ಎಂದರು.

ನಗರದ ಪ್ರಸಿದ್ದ ಮಾದರ ಹೊಂಡ ಅಭಿವೃದ್ದಿ ಮಾಡುವಂತೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಯಾವುದೇ ರೀತಿ ಕ್ರಮ ಕೈಗೊಳ್ಳದಿರುವುದು ಖಂಡನೀಯ.

ನಗರದ ವಾಣಿಜ್ಯ ಮಳಿಗೆಗಳನ್ನು ವಹಿಸಿದ್ದ ಅವಧಿ ಮಾರ್ಚ್ -2026ಕ್ಕೆ ಅಂತ್ಯಗೊಂಡಿದ್ದು, ಎರಡು ತಿಂಗಳು ಕಳೆದರೂ ಹೊಸದಾಗಿ ಹರಾಜು ಪ್ರಕ್ರಿಯೆ ನಡೆಸದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂವಿಧಾನ ಬದ್ಧವಾಗಿ ಹರಾಜು ಪ್ರಕ್ರಿಯೆ ಮಾಡಬೇಕು. 30 ವರ್ಷಗಳಿಂದ 900ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳಿಗೆ ವಾರಸುದಾರರೇ ಇಲ್ಲ. ಅವರು ಮರಣ ಹೊಂದಿದ್ದರೂ ಕೂಡ ಅದನ್ನು ಮುಂದುವರೆಸಿಕೊಂಡು ಬರುತ್ತಿರುವುದು ಕಾನೂನು ಪ್ರಕಾರ ತಪ್ಪು ಎಂದು ದೂರಿದರು.

ಕಿರಣ ಗುಳೇದ, ಶೈಲಮ್ಮ ಹರನಗಿರಿ, ಅಮೀದಬಾನು ಶಿಡೇನೂರು, ನಾಗಮ್ಮ ತಳವಾರ, ಮಂಜುನಾಥ ಗುಡ್ಡಣ್ಣನವರ, ಕೊಟ್ರಮ್ಮ ಕಾಯಕದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-22-2016693432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.