ರಾಣೆಬೆನ್ನೂರು: ಕೊಡುಗೈ ದಾನಿಗಳು ಒದಗಿಸಿರುವ ಸೌಲಭ್ಯಗಳು ಹಾಗೂ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿ ಕೊಂಡು ಮಕ್ಕಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿನೊಂದಿಗೆ ಮುನ್ನಡೆಸುವ ಗುರುತರ ಜವಾಬ್ದಾರಿ ಶಿಕ್ಷಕರ ಹಾಗೂ ಪಾಲಕರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಹೇಳಿದರು.

ತಾಲ್ಲೂಕಿನ ಕಾಕೋಳ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸೋಮ ವಾರ ಬೆಂಗಳೂರಿನ ಒಸ್ಯಾಟ್ ಹಾಗೂ ರಾಕುಟೆನ್ ಇಂಡಿಯಾ ಎಂಟರ್ಪ್ರೈಸಿಸ್ ಸಂಸ್ಥೆಯಿಂದ ನೂತನವಾಗಿ ನಿರ್ಮಿಸಿ ರುವ ನಾಲ್ಕು ಸುಸಜ್ಜಿತ ಕೊಠಡಿಗಳ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಬೆಂಗಳೂರಿನ ರಾಕುಟೆನ್ ಇಂಡಿಯಾ ಎಂಟರ್ಪ್ರೈಸಸ್ ಸಂಸ್ಥೆಯ ಡೈರೆಕ್ಟರ್ ಎಂಜಿನಿಯರ್ ಸೌಮ್ಯ ಶ್ರೀನಿವಾಸ್, ಒಸ್ಯಾಟ್ ಸಂಸ್ಥೆಯ ಪ್ರಮುಖ ಪ್ರಸಾದ್ ಎಚ್.ಆರ್., ರಾಕು ಇಂಡಿಯಾ ಸಂಸ್ಥೆಯ ಸಿಎಸ್ಆರ್ ಮುಖ್ಯಸ್ಥೆ ಹಾಗೂ ದಿವ್ಯ, ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾನಂದ ಕಡೇಮನಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಶಿಕ್ಷಕ ಜಿ.ಬಿ.ಮಾಗಳ, ರಾಜುಗೌಡ ಪಾಟೀಲ, ದೇವೇಂದ್ರಪ್ಪ ಕೂರಗುಂದ, ಮಾದೇವಪ್ಪ ಹಿರೇಬಿದರಿ, ಕರಿಯಪ್ಪ ದುಂಡೆಪ್ಪನವರ, ರುದ್ರಪ್ಪ ಕಿವುಡಣ್ಣನವರ, ನೀಲಪ್ಪ ಮೋಟೆಬೆನ್ನೂರ, ಭರಮಪ್ಪ ಅಸುಂಡಿ,ಮಾಲತೇಶ ಶಿಡಗನಾಳ, ಕ್ಷೇತ್ರ ಸಮನ್ವಯಾಧಿಕಾರಿ ಮಂಜು ನಾಯಕ, ಸಿಆರ್ಪಿ ಕುಮಾರ ಲಮಾಣಿ, ರಾಜಪ್ಪ, ಪಿಡಿಒ ಪೂಜಾರ, ಪ್ರಭು ಮುಲ್ಕಿ ಗೌಡ್ರ, ಎಸ್ ಕೆ ದೇವರಹಳ್ಳಿ, ಮಧು ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-22-1955310981

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.