ರಾಣೆಬೆನ್ನೂರು: ಅವಧಿ ಮೀರಿದ ಕೇಕ್ ಹಾಗೂ ಅಶುಚಿತ್ವದ ವಾತಾವರಣದಲ್ಲಿ ಕಳಪೆ ಪದಾರ್ಥಗಳನ್ನು ತಯಾರಿಸಿ ಮಾರುತ್ತಿದ್ದ ಆರೋಪದಡಿ ನಗರದ ಎರಡು ಬೇಕರಿಗಳನ್ನು ಅಧಿಕಾರಿಗಳು ಬಂದ್ ಮಾಡಿಸಿದ್ದಾರೆ.

ನಗರದ ಮೇಡ್ಲೇರಿ ರಸ್ತೆಯಲ್ಲಿರುವ ‘ಗೋಲ್ಡನ್ ಕೇಕ್ ಹಾರ್ಟ್’ ಬೇಕರಿಯಲ್ಲಿ ಖರೀದಿಸಿದ್ದ ಕೇಕ್ ತಿಂದು ಮೂವರು ಮಕ್ಕಳು ಅಸ್ವಸ್ಥಗೊಂಡಿದ್ದರು. ಇದರಿಂದ ಎಚ್ಚೆತ್ತ ನಗರಸಭೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು, ಬೇಕರಿ ಮೇಲೆ ದಾಳಿ ಮಾಡಿದ್ದರು. ‘ಗೋಲ್ಡನ್ ಕೇಕ್ ಹಾರ್ಟ್’ ಬೇಕರಿ ಹಾಗೂ ಸಮೀಪದಲ್ಲಿದ್ದ ನ್ಯೂ ಹರ್ಷಾ ಬೇಕರಿ ಎರಡನ್ನೂ ಬುಧವಾರ ಬಂದ್ ಮಾಡಿಸಲಾಗಿದೆ.

ದೇವರಗುಡ್ಡದ ನಿಂಗಪ್ಪ ಅವರು ಗೋಲ್ಡನ್ ಕೇಕ್ ಹಾರ್ಟ್ ಬೇಕರಿಯಲ್ಲಿ ಮಂಗಳವಾರ ಕೇಕ್ ಖರೀದಿಸಿಕೊಂಡು ಹೋಗಿದ್ದರು. ಕೇಕ್ ಕತ್ತರಿಸಿದಾಗ ಕೇಕ್ನ ಮೇಲ್ಭಾಗದಲ್ಲಿ ಆಕರ್ಷಕ ಬಣ್ಣ ಮೆತ್ತಿದ್ದ ಕ್ರೀಮ್ ಇತ್ತು. ಮಕ್ಕಳು ಸೇರಿ ಹಲವರು ಕೇಕ್ ತಿಂದಿದ್ದರು.

ರಾತ್ರಿ ಸಂಭ್ರಮಾಚರಣೆ ಮುಗಿದ ಮೇಲೆ ಮೂವರು ಮಕ್ಕಳಿಗೆ ವಾಂತಿಯಾಗಿತ್ತು. ಅನುಮಾನಗೊಂಡ ಪೋಷಕರು, ಪೂರ್ಣ ಕೇಕ್ ಕತ್ತರಿಸಿದಾಗ ಬೂಸ್ಟ್ ಹಿಡಿದಿರುವುದು ಗೊತ್ತಾಗಿತ್ತು. ಬೇಕರಿಗೆ ಹೋಗಿದ್ದ ಪೋಷಕರು, ಅವಧಿ ಮೀರಿದ ಕೇಕ್ ಮಾರಿದ್ದನ್ನು ಪ್ರಶ್ನಿಸಿದರು. ಅದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ತಾಲ್ಲೂಕು ಆಹಾರ ಸುರಕ್ಷತಾ ಅಧಿಕಾರಿಗಳು, ತಾಲ್ಲೂಕು ಆರೋಗ್ಯ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ಜಂಟಿಯಾಗಿ ಬುಧವಾರ ಕಾರ್ಯಾಚರಣೆ ನಡೆಸಿ ಗೋಲ್ಡನ್ ಕೇಕ್ ಹಾರ್ಟ್ ಬೇಕರಿಯಲ್ಲಿ ತಪಾಸಣೆ ನಡೆಸಿದರು.

ಅವಧಿ ಮುಗಿದ ಹಾಲಿನ ಪ್ಯಾಕೆಟ್ಗಳು, ಕಳಪೆ ಮೈದಾ, ಕೆಮಿಕಲ್, ವಿವಿಧ ಬಣ್ಣಗಳ ಮಾದರಿಗಳನ್ನು ಸಂಗ್ರಹಿಸಿದರು. ಬೇಕರಿಯಲ್ಲಿ ಸ್ವಚ್ಛತೆ ಇಲ್ಲದಿರುದನ್ನು ಗಮನಿಸಿದರು. ನಂತರ, ಬೇಕರಿ ಬಂದ್ ಮಾಡಿಸಿ ಮಾಲೀಕರಿಗೆ ದಂಡ ವಿಧಿಸಿ ನೋಟಿಸ್ ನೀಡಿದರು.

ಅದಾದ ನಂತರ, ಸಮೀಪದಲ್ಲಿದ್ದ ನ್ಯೂ ಹರ್ಷಾ ಬೇಕರಿಯಲ್ಲೂ ಪರಿಶೀಲಿಸಿದರು. ಅಲ್ಲಿಯೂ ಪದಾರ್ಥ ತಯಾರಿ ಜಾಗದಲ್ಲಿ ಸ್ವಚ್ಛತೆ ಇಲ್ಲದಿರುವುದು ಗೊತ್ತಾಯಿತು. ಅವಧಿ ಮೀರಿದ ಪದಾರ್ಥಗಳೂ ಪತ್ತೆಯಾದವು. ಹೀಗಾಗಿ, ಆ ಬೇಕರಿಯನ್ನು ಮುಚ್ಚಿಸಿದರು.

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಪೌರಾಯುಕ್ತ ಎಫ್.ವೈ. ಇಂಗಳಗಿ, ‘ಅಶುಚಿತ್ವ ಕಂಡು ಬಂದಿದೆ. ಪ್ಲಾಸ್ಟಿಕ್ ಬಳಕೆಯೂ ಪತ್ತೆಯಾಗಿದೆ. ಬೇಕರಿ ಜಪ್ತಿ ಮಾಡಲಾಗಿದೆ. ಮಾಲೀಕನಿಗೆ ದಂಡ ವಿಧಿಸಿ ನೋಟಿಸ್ ನೀಡಲಾಗಿದೆ’ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-22-551682348

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.