ರಾಣೆಬೆನ್ನೂರು: ಇಲ್ಲಿನ ಗುರುಕೊಟ್ಟೂರೇಶ್ವರ ನಗರದಲ್ಲಿ ವಿದ್ಯುತ್ ಸಮರ್ಪಕ ಪೂರೈಕೆ ಮಾಡಬೇಕೆಂದು ಆಗ್ರಹಿಸಿದ ನಿವಾಸಿಗಳು ಮಂಗಳವಾರ ಗಂಗಾಪುರ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಂತರ ಹೆಸ್ಕಾಂ ಎಇಇ ಯಲ್ಲಪ್ಪ ನೀರಲಗಿ ಹಾಗೂ ಸೆಕ್ಸನ್ ಆಫೀಸರ್ ಬಾಬಜಾನ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಬಾಬಣ್ಣ ಕೊಪ್ಪದ ಮಾತನಾಡಿ, ‘ಪಟ್ಟಣದ ಕೊಟ್ಟುರೇಶ್ವರ ನಗರದಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸ್ವಲ್ಪ ಗಾಳಿ ಬೀಸಿದರೂ ಸಾಕು ವಿದ್ಯುತ್ ಕಡಿತಗೊಳ್ಳುತ್ತದೆ. ಇದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಹೆಸ್ಕಾಂ ಕಚೇರಿ ಎದುರು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ವಿದ್ಯುತ್ ಸಮಸ್ಯೆಯಿಂದಾಗಿ ರಾತ್ರಿಯಲ್ಲಿ ವಿಷಜಂತುಗಳ ಹಾವಳಿಯಿಂದ ಜನರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಹಗಲಿನಲ್ಲಿ ವೃದ್ಧರು ಮನೆಯಲ್ಲಿ ಇರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಕೂಡಲೇ ಅಧಿಕಾರಿಗಳು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಹೆಸ್ಕಾಂ ಎಇಇ ಯಲ್ಲಪ್ಪ ನೀರಲಗಿ, ‘ಇನ್ನೊಂದು ವಾರದಲ್ಲಿ ಕೆರೆಯ ಅಂಗಳದಲ್ಲಿನ ಕಂಬಗಳನ್ನು ಸ್ಥಳಾಂತರಿಸಿ, ಹೊಸದಾಗಿ ಲೈನ್ ಎಳೆಯಲಾಗುವುದು’ ಎಂದು ಭರವಸೆ ನೀಡಿದರು.

ಈ ವೇಳೆ ಮುರುಗೇಶಣ್ಣ ಬೇತೂರು, ಗಣೇಶ ಸಾಲಿಮನಿ, ಪಂಚಾಕ್ಷರಯ್ಯ ಮುದಗಲ್ಮಠ, ಅಜ್ಜಪ್ಪ ಇಚ್ಚಂಗಿ, ರವಿಕುಮಾರ ಗಚ್ಚಿನಮಠ, ಕೊಟ್ರೇಶ ಹಾದಿಮನಿ, ಕೋಟೆಪ್ಪ ಕೊಪ್ಪದ, ಚೇತನ ರಾಜನಹಳ್ಳಿ, ನಾಗರಾಜ ತಿಮ್ಮಲಾಪುರ, ಹನುಮಂತ ದೊಡ್ಮನಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-22-1545870178

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.