ರಾಣೆಬೆನ್ನೂರು: ನಗರದ 110 ತುಮ್ಮಿನಕಟ್ಟಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಏ.24ರಂದು ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ಎಲ್ಲ 33/11 ಕೆವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ. ಕೃಷಿ, ನೀರಾವರಿ ಪಂಪಸೆಟ್ಗಳ 11 ಕೆವಿ ಮಾರ್ಗಗಳಿಗೆ ವೇಳೆ ಬದಲಾವಣೆ ಮಾಡಿ ವಿದ್ಯುತ್ ಸರಬರಾಜು ಮಾಡಲಾಗುವುದು.

110 ಕೆವಿ ತುಮ್ಮಿನಕಟ್ಟಿ ವಿದ್ಯುತ್ ಕೇಂದ್ರದಿಂದ ಕೂಸಗಟ್ಟಿ ಗ್ರಾಮದಲ್ಲಿರುವ ಹಿರೇಕೆರೂರು ಗ್ರಾಮದ ಕುಡಿಯುವ ನೀರಿನ ಸ್ಥಾವರ, ಆಣೂರು ಕೆರೆ ತುಂಬಿಸುವ 33 ಕೆವಿ ಸ್ಥಾವರ, ತುಮ್ಮಿನಕಟ್ಟಿ, ಫತ್ತೇಪುರ, ಕೂಸಗಟ್ಟಿ, ಮೆಣಸಿನಹಾಳ, ತಿಮ್ಮೆನಹಳ್ಳಿ, ಸಣ್ಣಸಂಗಾಪುರ, ಮಾಳನಾಯಕನಹಳ್ಳಿ, ಬಡಬಸಾಪುರ ಗ್ರಾಮ ಹಾಗೂ 33 ಕೆವಿ ಕುಪ್ಪೇಲೂರು ವಿದ್ಯುತ್ ಕೇಂದ್ರದ ಅಸುಂಡಿ ಕೆರೆ ತುಂಬಿಸುವ 33 ಕೆವಿ ಸ್ಥಾವರ, ಕೂಲಿ, ಕುಪ್ಪೇಲೂರು, ನಿಟ್ಟಪಳ್ಳಿ, ಕೋಟಿಹಾಳ, ಚಿಕ್ಕಮಾಗನೂರು, ಹಿರೇಮಾಗನೂರು ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಹಾವೇರಿ: ಜಿಲ್ಲೆಯ ಬಸವನಕಟ್ಟಿ 110 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಏಪ್ರಿಲ್ 24ರಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಬಸವನಕಟ್ಟಿ, ಸೋಮನಕಟ್ಟಿ, ಮಾಚಾಪುರ, ಬೂದಗಟ್ಟಿ, ಕನವಳ್ಳಿ, ಹನುಮನಹಳ್ಳಿ, ಕಾಟೇನಹಳ್ಳಿ, ಅಗಡಿ, ತಿಮ್ಮೇನಹಳ್ಳಿ, ಮಾಳಾಪುರ, ಗಾಂಧಿಪುರ, ಜಂಗಮನಕೊಪ್ಪ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-1863789172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.