ರಾಣೆಬೆನ್ನೂರು: ತಾಲ್ಲೂಕಿನ ಹೂಲಿಹಳ್ಳಿ ಮೇಗಾ ಮಾರುಕಟ್ಟೆಯಲ್ಲಿ ವರ್ತಕರಿಗೆ ಹಂಚಿಕೆಯಾದ ನಿವೇಶನಗಳ ನೋಂದಣಿ ಮಾಡಿಸುವುದು ಹಾಗೂ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ತಾತ್ಕಾಲಿಕ ಶೆಡ್ ಮತ್ತು ಖುಲ್ಲಾ ಜಾಗೆಗಾಗಿ ಸಂದಾಯ ಮಾಡಿದ ಹಣ ವಾಪಸ್ಸು ನೀಡಬೇಕೆಂದು ಒತ್ತಾಯಿಸಿದ ನೆಹರು ಮಾರುಕಟ್ಟೆ ವರ್ತಕರ ಸಂಘದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿ, ಎಪಿಎಂಸಿ ಸಹ ಕಾರ್ಯದರ್ಶಿ ಪರಮೇಶ್ವರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ವರ್ತಕರ ಸಂಘದ ಮುಖಂಡ ಜಿ.ಜಿ. ಹೊಟ್ಟಿಗೌಡ್ರ ಮಾತನಾಡಿ, ‘ತಾಲ್ಲೂಕಿನ ಹೂಲಿಹಳ್ಳಿ ಮೇಗಾ ಮಾರುಕಟ್ಟೆಯಲ್ಲಿನ ನಿವೇಶನಗಳನ್ನು ಎರಡು ವರ್ಷಗಳ ಹಿಂದೆಯೇ ಹಂಚಿಕೆ ಮಾಡಿದ್ದು, ಇದುವರೆಗೂ ನೋಂದಣಿ ಮಾಡಿಸಿಕೊಟ್ಟಿಲ್ಲ. ನಿವೇಶನ ಹಣವನ್ನು ಕಾಲಕಾಲಕ್ಕೆ ಭರಸಲಾಗಿದೆ’ ಎಂದು ದೂರಿದರು.

ನೆಹರು ಮಾರುಕಟ್ಟೆ ಮಾಜಿ ಅಧ್ಯಕ್ಷ ಅಶೋಕ ಗಂಗನಗೌಡ್ರ ಮಾತನಾಡಿ, ‘ಎಪಿಎಂಸಿ ಸಮಿತಿಯ ಜಾನುವಾರು ಮಾರುಕಟ್ಟೆಯಲ್ಲಿ ತಾತ್ಕಾಲಿಕ ಶೆಡ್ ಸಹಿತ ಖುಲ್ಲಾ ಜಾಗೆಯನ್ನು ಬಾಡಿಗೆ ಆಧಾರದ ಮೇಲೆ 2011ರಲ್ಲಿ ಹಂಚಿಕೆ ಮಾಡಿದ್ದು, ಇದುವರೆಗೂ ವ್ಯಾಪಾರಸ್ಥರ ವಶಕ್ಕೆ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ನೆಹರು ಮಾರುಕಟ್ಟೆ ಅಧ್ಯಕ್ಷ ಬಿ.ಎಸ್. ಪಟ್ಟಣಶೆಟ್ಟಿ, ಎಚ್.ಎನ್. ಮುದ್ದಿಯವರವ, ಪುಟ್ಟನಗೌಡ ತೆಂಬದ, ಅಶೋಕ ಗಂಗನಗೌಡ್ರ, ಫಕ್ಕೀರಪ್ಪ ಹೊನ್ನಳ್ಳಿ, ರಾಮನಗೌಡ್ರ ಚನ್ನಗೌಡ್ರ, ಶಿವಯೋಗಿ ಅಸುಂಡಿ, ಮೃತ್ಯುಂಜಯ ಪಾಟೀಲ, ವಿಜಯ ಕಬ್ಬಿಣದ, ಅರುಣ ಗೂಳಣ್ಣವನರ, ಸೋಮನಗೌಡ ಹೊಟ್ಟಿಗೌಡ್ರ, ಬಸವರಾಜ ನರಸಗೊಂಡರ, ಹನುಮಂತಪ್ಪ ಸಾವುಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-741745391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.