ರಾಣೆಬೆನ್ನೂರು: ತಾಲ್ಲೂಕಿನ ಆರೇಮಲ್ಲಾಪುರ ಮತ್ತು ಐರಣಿ ಗ್ರಾಮದ ಸಮೀಪದಲ್ಲಿರುವ ಪ್ರವಾಸಿ ತಾಣವಾಗಿರುವ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಗುಡ್ಡದ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಅರಣ್ಯ ಪ್ರದೇಶ ಸಂಪೂರ್ಣ ಸುಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಸರ್ಕಾರ ಈಚೆಗೆ ಪ್ರವಾಸಿ ತಾಣವನ್ನಾಗಿಸಿತ್ತು. ಅಷ್ಟರಲ್ಲಿಯೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ.

ಕೃಷ್ಣಮೃಗ ಅಭಯಾರಣ್ಯ ಪ್ರದೇಶದಲ್ಲಿನ ಪ್ರಾಣಿ, ಪಕ್ಷಿಗಳು ಬೆಂಕಿಯಲ್ಲಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಿಲ್ಲ.

ಗುಡ್ಡಕ್ಕೆ ಹೋಗಲು ಕಡಿದಾದ ರಸ್ತೆಯಿದ್ದು ಪೈರ್ ವಾಹನ ಅಲ್ಲಿಗೆ ಹೋಗಲು ಆಗದೇ ಅವರು ಕೂಡ ಕೈ ಚೆಲ್ಲಿದ್ದಾರೆ. ಬೈಕ್, ಸಣ್ಣ ಜೀಪ್ ಅಥವಾ ಕಾರು ಹೋಗಲು ಮಾತ್ರ ಅವಕಾಶವಿದೆ.

ಸಂಪದ್ಭರಿತ ಆಯುರ್ವೇದ ಸಸ್ಯಗಳು ಗುಡ್ಡದಲ್ಲಿ ಇದ್ದವು. ಸಂಜೆ ಬೆಂಕಿಯಿಂದ ಧಗ ಧಗಿಸುತ್ತಿರುವ ಕೆನ್ನಾಲಿಗೆ ಬಿದ್ದಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಭಯಭೀತರಾಗಿ ಓಡಿ ಗ್ರಾಮ ಸೇರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-22-1972271910

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.