ರಾಣೆಬೆನ್ನೂರು: ತಾಲ್ಲೂಕಿನ ಮೇಡ್ಲೇರಿ ಗ್ರಾಮದ ಬೀರೇಶ್ವರ ದೇವಸ್ಥಾನದ ಒಳಗುಡಿ ಮತ್ತು ಹೊರಗುಡಿ ಬೀರೇಶ್ವರ ಸ್ವಾಮಿ ಮೂರ್ತಿಗೆ ಕಾರಣ ಹುಣ್ಣಿಮೆ ಅಂಗವಾಗಿ ಶನಿವಾರ ವಿಶೇಷ ಹೂ ಅಲಂಕಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಿಗ್ಗೆ ಪೂಜಾರ ವಂಶಸ್ಥರು ಕರಡಿಗಿ, ಗಿಂಡಿ ತೆಗೆದುಕೊಂಡು ಹೋಗಿ ಒಳಗುಡಿಯಿಂದ ಹೂ ಪತ್ರೆ ತರಲಾಗುತ್ತದೆ. ಹೊಳೆ ಗಂಗಮ್ಮ ಪೂಜೆ ಸಲ್ಲಿಸಲಾಗುವುದು. ಜೋಗಮ್ಮರು ಚಾಮರ ಬೀಸುತ್ತಾರೆ. ಮಹಿಳೆಯರು ಕೇಲು ತುಂಬಿಕೊಂಡು ತರುತ್ತಾರೆ. ಕೋಲಕಾರರು ಮಜಲು ನೀರು ಭಕ್ತರಿಗೆ ಉಗ್ಗುತ್ತಾರೆ. ಮಾಲ್ದಾರ, ಕೋಲಕಾರರು, ಪೂಜಾರ, ನಗಾರಿ ಜಾಗಟಿ, ರ್ಯಾವಳ್ಳೆರ, ಗುರಿಕಾರರು, ಡೊಳ್ಳುಕಾರರು ಮತ್ತು ಬಾಬುದಾರರು ಇದ್ದರು. ಕೆಂಡದ ಮಂಗಳಾರತಿ, ಐದು ದೀಪದ ,18 ದೀಪ ಜೋಡು ದೀಪ, ಕರ್ಪೂರಾರತಿ ಬೆಳಗುವರು. ಭಕ್ತರಿಂದ ಜೈಕಾರ ಹಾಕಿದರು. ಎಲ್ಲರಿಗೂ ಭಂಡಾರ ಹಂಚಲಾಗುವುದು. ನಂತರ ಬಾಬುದಾರರಿಗೆ ವೀಳ್ಯೆ ಕೊಡುತ್ತಾರೆ. ನಂತರ ಚೌಡೇಶ್ವರಿ ದೇವರಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಹಣ್ಣು ತುಪ್ಪ , ಬಾನ ಪ್ರಸಾದ ವಿತರಣೆ ಮಾಡಿದರು. ನಂತರ ಬೀರೇಶ್ವರ ಸ್ವಾಮಿಯ ಒಳಗುಡಿ ಪ್ರವೇಶ ನಡೆಯುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-22-716592057

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.