ರಾಣೆಬೆನ್ನೂರು: ಅಲ್ಪಸಂಖ್ಯಾತರಿಗಾಗಿ ಕರ್ನಾಟಕ ಸರ್ಕಾರವು ₹ 30 ಕೋಟಿ ವೆಚ್ಚದ ವಸತಿ ಶಾಲೆಯನ್ನು ತೆರೆಯಲು ಸರ್ಕಾರ ಮಂಜೂರಿ ಮಾಡಿದೆ. ನಗರದ ಮಸೀದಿಗಳಿಗೆ ₹ 50 ಲಕ್ಷ ಅನುದಾನ ನೀಡುವುದಾಗಿ ಎಂದು ಶಾಸಕ ಪ್ರಕಾಶ ಕೋಳಿವಾಡ ಭರವಸೆ ನೀಡಿದರು.

ಇಲ್ಲಿನ ಮಾರುತಿನಗರದ ಹೊರವಲಯದ ಸರ್ಕಾರಿ ಪಪೂ ಕಾಲೇಜಿನ ಬಳಿ ಇರುವ ಈದ್ಗಾ ಮೈದಾನದಲ್ಲಿ ಶನಿವಾರ ರಂಜಾನ್ ಹಬ್ಬದ ಆಚರಣೆ ಪ್ರಯುಕ್ತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಅವರು ಭಾಗವಹಿಸಿ ಶುಭಾಶಯ ಕೋರಿ ಮಾತನಾಡಿದರು.

ಸದ್ಯ ಇರಾನ್ ಮತ್ತು ಇಸ್ರೇಲ್ ಅಮೆರಿಕ ಮಧ್ಯೆ ನಡೆಯುತ್ತಿರುವ ಯುದ್ಧದಿಂದ ಇಡೀ ವಿಶ್ವದ ಮೇಲೆ ಪರಿಣಾಮ ಬೀರಿದೆ. ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಈ ಯುದ್ಧ ನ್ಯಾಯ ಸಮ್ಮತವಲ್ಲ. ಶೀಘ್ರವೇ ಈ ಯುದ್ದ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿರುವುದಾಗಿ ಕೋಳಿವಾಡ ತಿಳಿಸಿದರು.

ನಂತರ ಪಿಕೆಕೆ ಸಂಸ್ಥೆಯಿಂದ ಮುಸ್ಲಿಂ ಸಮುದಾಯಕ್ಕೆ ಸಿಹಿ ಬೂಂದಿ ಪ್ಯಾಕೆಟ್ ಅನ್ನು ವಿತರಿಸಿದರು.

ಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಲೊಕೋಶ.ಜೆ, ಸಿಪಿಐ ವೆಂಕಟೇಶ ಮತ್ತು ನಾಗೇಶ ಕಾಡದೇವರ, ನಗರ ಹಾಗೂ ಗ್ರಾಮೀಣ ಠಾಣೆ ಪಿಎಸ್ಐ ಇದ್ದರು.

ನಗರ ಹಾಗೂ ತುಮ್ಮಿನಕಟ್ಟಿ, ಚಳಗೇರಿ, ಹಲಗೇರಿ, ಅಸುಂಡಿ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಾನ ಆರಾಧನೆ ಮತ್ತು ಉಪವಾಸ ಮಾಸದ ಪ್ರತೀಕವಾದ ಪವಿತ್ರ ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದು ಕಂಡು ಬಂದಿತು.

ಇಲ್ಲಿನ ಈದ್ಗಾ ಮೈದಾನದಲ್ಲಿ ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಮರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಗರದಲ್ಲಿ ಮಕ್ಕಳು ಹಾಗೂ ಹಿರಿಯರು ಹೊಸ ಉಡುಪು ಧರಿಸಿ ಪರಸ್ಪರ ಶುಭಾಶಯ ಕೋರಿದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್.ಬಿದರಿ, ಈದ್ಗಾ ಸಮಿತಿ ಅಧ್ಯಕ್ಷ ಹಾಗೂ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಜಾಜಖಾನ್ ಸೌದಾಗಾರ, ಶೇರುಖಾನ್ ಕಾಬೂಲಿ, ಅತಾವುಲ್ಲಾ ಉದಗಟ್ಟಿ, ಜಬೀವುಲ್ಲಾ ದಾವಣಗೆರೆ, ನೂರುಲ್ಲಾ ಖಾಜಿ, ಐಯ್ಯಜ್ ಭಾವಿಕಟ್ಟಿ, ಇಕ್ಬಾಲ್ ರಾಣೆಬೆನ್ನೂರು, ಬಸೀರ್ಅಹ್ಮದ್, ಕಾಟೇನಹಳ್ಳಿ ಮುಂತಾದವರು ಭಾಗವಹಿಸಿದ್ದರು.

ಬ್ಯಾಡಗಿ: ಪಟ್ಟಣದಲ್ಲಿ ತಿಂಗಳ ಪೂರ್ತಿ ಉಪವಾಸ ವ್ರತ (ರೋಜಾ) ಆಚರಣೆಯ ಬಳಿಕ ಮುಸ್ಲಿಮರು ‘ಈದ್ ಉಲ್ ಫಿತ್ರ‘ ಹಬ್ಬದ ಅಂಗವಾಗಿ ಶನಿವಾರ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಮೂಲಕ ದೇವರನ್ನು ಸ್ಮರಿಸಿದರು.

ಬೆಳಿಗ್ಗೆ ಅಂಜುಮನ್-ಏ-ಇಸ್ಲಾಂ ಸಮಿತಿ ಆಶ್ರಯದಲ್ಲಿ ಚಾವಡಿ ರಸ್ತೆಯ ಮಸೀದಿಯಿಂದ ಮೆರವಣೆಗೆಯಲ್ಲಿ ತೆರಳಿದ ಮುಸ್ಲಿಮರು, ರಟ್ಟಿಹಳ್ಳಿ ರಸ್ತೆಯ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡರು. ಹೊಸ ಬಟ್ಟೆ ತೊಟ್ಟ ಪ್ರತಿಯೊಬ್ಬರೂ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಬಳಿಕ ಒಬ್ಬರಿಗೊಬ್ಬರು ಪರಸ್ಪರ ಆಲಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿದ ಶಾಸಕ ಬಸವರಾಜ ಶಿವಣ್ಣನನವರ, ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಹಾಗೂ ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮುಸ್ಲಿಮರಿಗೆ ಶುಭಾಶಯ ಕೋರಿದರು.

ಈ ವೇಳೆ ನಗರ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ಮುನಾಫ್ ಎರೇಶೀಮಿ, ಡಾ.ಎ.ಎಂ.ಸೌದಾಗರ, ಮುಕ್ತಿಯಾರ ಮುಲ್ಲಾ, ರಾಜೇಸಾಬ್ ಕಳ್ಯಾಳ, ಜಮೀರ್ ರಿತ್ತಿ, ಅಬ್ದುಲ್ಸಮ್ಮದ ಬೆಳವಿಗಿ, ಅಬ್ದುಲ್ಮಜೀದ್ ಮುಲ್ಲಾ, ಮಂಜೂರಲಿ ಹಕಿಂ, ರಫೀಕ್ ಬೆಳಗಾಂವ, ತೌಶಕ ಕಳ್ಯಾಳ, ಮುಕ್ತಿಯಾರ ಮುಲ್ಲಾ, ಎಂ.ಐ.ಮಲ್ಲೂರ ಸೇರಿ ನೂರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ರಟ್ಟೀಹಳ್ಳಿ: ಪಟ್ಟಣದಲ್ಲಿ ಮುಸ್ಲಿಮರು ಶನಿವಾರ ಸಡಗರ ಸಂಭ್ರಮದಿಂದ ಈದ್ ಉಲ್ ಫಿತ್ರ್ ಆಚರಿಸಿದರು.

ಬೆಳಿಗ್ಗೆ ಸಮಾಜದ ಜನರು ಶುಭ್ರವಾಗಿ ಹೊಸಬಟ್ಟೆ ಧರಿಸಿಕೊಂಡು ಪವಿತ್ರ ರಂಜಾನ್ ಹಬ್ಬದ ಕೊನೆಯ ದಿನವಾದ ಈದ್–ಉ್ ಫಿತ್ರ್ ಹಬ್ಬ ಆಚರಿಸಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.))

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-22-1600393807

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.