ರಾಣೆಬೆನ್ನೂರು: ತಾಲ್ಲೂಕಿನ ರಾಹುತನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪದ್ಮಾವತಿಪುರದಲ್ಲಿ (ಬಸಲಿಕಟ್ಟಿ ತಾಂಡಾ) ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಿಸಿಲು ಹೆಚ್ಚಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ. ನೀರಿನ ಲಭ್ಯತೆ ಇದ್ದರೂ ನಿರ್ವಹಣೆ ಕೊರತೆಯೂ ಸಮಸ್ಯೆಗೆ ಕಾರಣವಾಗುತ್ತಿದೆ. ರಾಹುತನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6 ಗ್ರಾಮಗಳಿದ್ದು, ಮೂವರು ವಾಟರ್ಮನ್ ಇದ್ದಾರೆ. ಸಿಬ್ಬಂದಿಯ ಕೊರತೆಯೂ ಇದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಒಂದು ಮಾತ್ರ ಸರಿಯಿದೆ. ಇನ್ನೊಂದು ಘಟಕ ಕೆಟ್ಟು ಹಲವು ದಿನಗಳಾಗಿವೆ.

ಶಾಲೆ ಬಳಿಯ ಘಟಕ ಕೆಟ್ಟು ಹಲವು ವರ್ಷಗಳಾಗಿವೆ. ಲಭ್ಯವಿರುವ ಒಂದು ಘಟಕದಲ್ಲಿ ಕೊಳವೆಬಾವಿ ನೀರು ಕಡಿಮೆಯಾಗಿದೆ. ಒಂದು ತಾಸು ಕಾದರೆ 5-6 ಕೊಡ ಮಾತ್ರ ನೀರು ಸಿಗುತ್ತಿದೆ. ಅದೇ ನೀರಿಗೆ ಜನರು ಜಗಳವಾಡುವ ಸ್ಥಿತಿಯಿದೆ.

ಬೇಸಿಗೆಯಾದ್ದರಿಂದ ಮಹಿಳೆಯರು ಮತ್ತು ಮಕ್ಕಳು, ನೀರಿಗಾಗಿ ತಳ್ಳು ಗಾಡಿ ಹಿಡಿದುಕೊಂಡು ಅಕ್ಕ–ಪಕ್ಕದ ಜಮೀನುಗಳಿಗೆ ತಿರುಗಾಡುತ್ತಿದ್ದಾರೆ. ವಸತಿ ಪ್ರದೇಶದಲ್ಲಿರುವ ಕೊಳವೆ ಬಾವಿಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಅದು ಜನರ ಬಳಕೆಗೆ ಸಾಲುತ್ತಿಲ್ಲ. ಹಬ್ಬ, ಮದುವೆ ಇತ್ಯಾದಿ ಸಮಾರಂಭಕ್ಕೂ ನೀರಿನ ಹಾಹಾಕಾರ ಉಂಟಾಗುತ್ತಿದೆ.

‘ಪದ್ಮಾವತಿಪುರ ದಲ್ಲಿ 12 ಕೊಳವೆ ಬಾವಿಗಳಿವೆ. 5 ಕೊಳವೆವಾವಿಗಳು, ನೀರಿಲ್ಲದೇ ಬರಿದಾಗಿವೆ. ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ, ನೀರಿನ ಸಮಸ್ಯೆ ಉಲ್ಬಣಿಸಿದೆ. ಪ್ರತಿ ವರ್ಷ ನೀರಿನ ಸಮಸ್ಯೆ ಎದುರಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿಲ್ಲ’ ಎಂದು ತಾಂಡಾದ ನಿವಾಸಿಗಳು ದೂರಿದರು.

‘ಪದ್ಮಾವತಿಪುರದಲ್ಲಿ ಐದಾರು ಸಾವಿರ ಜನಸಂಖ್ಯೆಯಿದೆ. ಇಲ್ಲಿನ ಜನತೆಯು ಗೌಂಡಿ ಕೆಲಸ ಮತ್ತು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗ, ಎಲ್ಲ ಕೆಲಸ ಬಿಟ್ಟು ನೀರು ತರುವುದೇ ಕೆಲಸವಾಗಿದೆ. ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಎತ್ತು, ಎಮ್ಮೆ, ಆಡು, ಕುರಿ, ಕೋಳಿ ಸೇರಿ ಪ್ರಾಣಿಗಳೂ ಯಾತನೆ ಅನುಭವಿಸುತ್ತಿವೆ’ ಎಂದರು.

‘ತಾಂಡಾದಿಂದ 3-4 ಕಿ.ಮೀ. ದೂರದ ರಾಣೆಬೆನ್ನೂರಿನ ವಾಗೀಶನಗರದ ಸಿಲ್ವರ್ ಜುಬಲಿ ಪಾರ್ಕ್ ಬಳಿ ನಗರಸಭೆಯ ನೀರಿನ ಟ್ಯಾಂಕ್ ಇದೆ. ಅಲ್ಲಿಗೆ ನಿತ್ಯವೂ ಹೋಗಿ ಕೊಡದಲ್ಲಿ ನೀರು ತರುತ್ತಿದ್ದೇವೆ. ಮಾರ್ಗಮಧ್ಯೆ ರೈಲ್ವೆ ಗೇಟ್ ಸಹ ಇದೆ. ಮನೆಗೊಬ್ಬರಿಗೆ ನಿತ್ಯವೂ ನೀರು ತರುವುದೇ ಕೆಲಸವಾಗುತ್ತಿದೆ. ಹಣವಿದ್ದವರು ಮನೆಗೆ ನೀರಿನ ಟ್ಯಾಂಕರ್ ತರಿಸಿಕೊಳ್ಳುತ್ತಿದ್ದಾರೆ. ಆದರೆ, ಬಡವರು ಏನು ಮಾಡಬೇಕು. ನೀರಿಗಾಗಿ ಪರದಾಡುತ್ತಿದ್ದಾರೆ’ ಎಂದು ಹೇಳಿದರು.

ಕಳೆದ ವಾರ ಹೊಸದಾಗಿ ಎರಡು ಕೊಳವೆ ಬಾವಿ ಕೊರೆಸಲಾಗಿದೆ. ಒಂದಕ್ಕೆ ಮೋಟರ್ ಹಾಗೂ ಪಂಪ್ ಅಳವಡಿಸಲಾಗಿದೆ. ಇನ್ನೊಂದಕ್ಕೆ ಪಂಪ್ಸೆಟ್ ಅಳವಡಿಕೆ ಬಾಕಿಯಿದೆ. ಆದರೆ, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಮುಂದಿನ ಒಂದು ತಿಂಗಳು ಬೇಸಿಗೆಯಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ.

ಪದ್ಮಾವತಿಪುರದಲ್ಲಿ ಪ್ರತಿ ಮನೆಗೂ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯಡಿ ನಳ ಅಳವಡಿಸಲಾಗಿದೆ. ಆದರೆ, ನೀರು ಸಮರ್ಪಕವಾಗಿ ಬರುತ್ತಿಲ್ಲ ಎಂದು ಜನರು ದೂರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-22-1531325131

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.