ರಾಣೆಬೆನ್ನೂರು: ತಾಲ್ಲೂಕಿನ ನೂಕಾಪುರ ಬಳಿ ಹೊನ್ನನಾಗದೇವತೆ ದೇವಸ್ಥಾನದ ಬಳಿ ಜಮೀನಿನಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ನವಿಲಿಗೆ ಹೆಸ್ಕಾಂನ ಲೈನ್ಮನ್ಗಳು ಗುರುವಾರ ಭಾರತೀಯ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮರೆದ ಘಟನೆ ನಡೆದಿದೆ.

ಪದೆ ಪದೇ ಲೈನ್ ಟ್ರಿಪ್ ಆಗಿದ್ದಕ್ಕೆ ವಿದ್ಯುತ್ ಕೈಕೊಟ್ಟಿದ್ದಕ್ಕೆ ಲೈನ್ಮನ್ ಸಂಗಮೇಶ ಕೋಟಿಕಲ್ ಹಾಗೂ ಚೇತನ್ ಬಳ್ಳಾರಿ ಅವರು ಲೈನ್ ಫಾಲ್ಟ್ ನೋಡಲು ಹೋದಾಗ ಜಮೀನಿನಲ್ಲಿ ವಿದ್ಯುತ್ ಪರಿವರ್ತಕದ ಜೋಡು ಕಂಬಕ್ಕೆ ವಿದ್ಯುತ್ ತಗುಲಿ ಕಂಬದ ಮೇಲೆಯೆ ನವಿಲು ಸಾವನ್ನಪ್ಪಿದ್ದು ಕಂಡು ಬಂತು. ತಕ್ಷಣ ನವಿಲನ್ನು ವಿದ್ಯತ್ ಕಂಬದಿಂದ ಕಳೆಗಿಳಿಸಿ ಪಕ್ಕದಲ್ಲಿರುವ ಜಮೀನಿನಲ್ಲಿ ಗುಂಡಿ ತೋಡಿ ಗ್ರಾಮಸ್ಥರ ಸಹಾಯದಿಂದ ಅಂತ್ಯಕ್ರಿಯೆ ನೆರವೇರಿಸಿದರು. ತೋಷ ನಾಯಕ, ಶಂಕರ್ ಚವ್ವಾಣ, ಅರುಣ ರಾಠೋಡ, ಚೇತನ್ ರಾಠೋಡ, ವಾಲಪ್ಪ ಕೇತಾವತ್, ಗುಡ್ಡಪ್ಪ ಮರಡೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-22-2082221467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.