ರಾಣೆಬೆನ್ನೂರು: ರಾಜ್ಯದಾದ್ಯಂತ ಸಾಮಾಜಿಕ ಭದ್ರತಾ ಪಿಂಚಣಿದಾರರ ಅರ್ಜಿ ಮರುಪರಿಶೀಲನೆ ಮಾಡುತ್ತಿರುವುದು ಸ್ವಾಗತಾರ್ಹ, ಲೋಪ ದೋಷ ಕಂಡುಬಂದ ಪಿಂಚಣಿದಾರರ ಅರ್ಜಿಯನ್ನು ಅರ್ಜಿದಾರರ ನಿವಾಸಕ್ಕೆ ಭೇಟಿ ನೀಡಿ ಮರು ಪರಿಶೀಲಿಸಬೇಕೆಂದು ಸ್ವಾಭಿಮಾನಿ ಕರವೇ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಆರ್.ಎಚ್.ಭಾಗವಾನ ಅವರಿಗೆ ಮನವಿ ಸಲ್ಲಿಸಿದರು.

ಸ್ವಾಭಿಮಾನಿ ಕರವೇ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಜಿ ಕುಂದಾಪುರ ಮಾತನಾಡಿ, ಪಿಂಚಣಿ ಪಡೆಯುತ್ತಿರುವ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ದಾಪ್ಯ ವೇತನ, ವಿಧವಾ ವೇತನ, ಮನಸ್ವಿ ಯೋಜನೆ ಸಾಲ ಬಾಧೆಯಿಂದ ರೈತ ಆತ್ಮಹತ್ಯೆ, ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ, ಆಸಿಡ್ ದಾಳಿಗೆ ಒಳಗಾದ ಮಹಿಳೆಯರ ಪಿಂಚಣಿ, ಮೈತ್ರಿ ಪಿಂಚಣಿ, ದೇವದಾಸಿಯರ ಪಿಂಚಣಿ, ರಾಜ್ಯ ಸ್ವತಂತ್ರ ಹೋರಾಟಗಾರ ಪಿಂಚಣಿ ಯೋಜನೆಯಡಿ ಪಿಂಚಣಿ ಮಾಡಿಸಿಕೊಳ್ಳುವಾಗ ಶಾಲಾ ದಾಖಲಾತಿ ಇದ್ದವರು ಶಾಲಾ ದಾಖಲಾತಿ ಕೊಟ್ಟು ಪಿಂಚಣಿ ಮಾಡಿಸಿಕೊಂಡಿದ್ದಾರೆ ಎಂದರು.

ಪಿಂಚಣಿಯನ್ನು ರದ್ದು ಮಾಡದೆ ಪಿಂಚಣಿದಾರರು ಕೊಟ್ಟ ಅರ್ಜಿ ದಾಖಲಾತಿಯನ್ನು ಮತ್ತೆ ಪುನಃ ಪರಿಶೀಲಿಸಿ ಪಿಂಚಣಿಯನ್ನು ಮುಂದುವರಿಸಿ ಪಿಂಚಣಿ ದಾರರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು.

ಶಿವಕುಮಾರ ಜಾಧವ, ಚಂದ್ರಪ್ಪ ಬಣಕಾರ, ಮಲ್ಲಿಕಾರ್ಜುನ ಸಾವಕ್ಕಳವರ, ಕೊಟ್ರೆಶಪ್ಪ ಎಮ್ಮಿ, ಶ್ರೀಧರ್ ಚಲವಾದಿ, ಪರಶುರಾಮ ಕುರುವತ್ತಿ, ಶಂಕರ್ ಹಳ್ಳಪ್ಪನವರ, ಗೋಪಿ ಕುಂದಾಪುರ, ಭೀಮೇಶ, ಕುಮಾರ್ ಕಾಕೋಳ, ನಾಗರಾಜ್ ಕಾಳಪ್ಪನವರ, ರೇವಣಸಿದ್ದಯ್ಯ ಸಣ್ಣಸಂಗಾಪುರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-22-524348535

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.