ರಾಣೆಬೆನ್ನೂರು: ಇಲ್ಲಿನ ಗಂಗಾಪುರ ರಸ್ತೆಯ ಹಿರೇಮಠದಲ್ಲಿರುವ ರಾಜ್ಯದ ಮೊದಲನೇ ಶನೈಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶನಿವಾರ ಹಿರೇಮಠ ಸಂಸ್ಕೃತಿ ಸಂಸ್ಕಾರ ಸಮಿತಿಯಿಂದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿದವು.

ಬೆಳಿಗ್ಗೆ ಶನಿದೇವರ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ ಪೂಜೆ ಹಾಗೂ ದುರ್ಗಾ ಹೋಮ ಹವನ ಕಾರ್ಯಕ್ರಮ ನಡೆದವು. ಭಕ್ತರು ತೋಯ್ದ ಬಟ್ಟೆಯಲ್ಲಿ ಶನಿದೇವರ ಮೂರ್ತಿಗೆ ಎಳ್ಳೆಣ್ಣೆ ಸುರಿದು ಭಕ್ತಿ ಸಮರ್ಪಿಸಿದರು. ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು.

ಭಕ್ತರು ಆಹಾರ ಪದಾರ್ಥ, ಬಟ್ಟೆ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ದಾನ ಮಾಡಿದರು. ನಂತರ ಪ್ರಸಾದ ವಿತರಣೆ ನಡೆಯಿತು. ಮಹಿಳೆಯರು ಶನಿದೇವರ ತೊಟ್ಟಿಲು ಸೇವೆ ಮಾಡಿ ಜೋಗುಳ ಹಾಡಿದರು. ಶನಿದೇವರ ದರ್ಶನಕ್ಕೆ ಭಕ್ತರು ತಂಡೋಪ ತಂಡವಾಗಿ ಆಗಮಿಸಿದ್ದರು. ಗ್ರಾಮೀಣ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.

ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಇಂದು ಶನಿದೇವರ ಆಶೀರ್ವಾದ ಪಡೆಯಲು ವಿಶೇಷ ದಿನವಾಗಿದೆ. ಹಿಂದೂ ಧರ್ಮದಲ್ಲಿ ಶನಿದೇವರನ್ನು ಕರ್ಮದಾತ, ಶನಿಯು ಸೂರ್ಯದೇವ ಮತ್ತು ಛಾಯಾದೇವಿಯರ ಮಗ. ನ್ಯಾಯದ ದೇವರು ಮತ್ತು ನವಗ್ರಹಗಳಲ್ಲಿ ಪ್ರಮುಖರೆಂದು ಪರಿಗಣಿಸಲಾಗಿದೆ’ ಎಂದರು.

ದಾವಣಗೆರೆ, ಹರಿಹರ, ಹಾವೇರಿ, ಹಿರೇಕೆರೂರು, ಶಿರಾಳಕೊಪ್ಪ, ಶಿಗ್ಗಾವಿ, ಸವಣೂರು, ಹುಬ್ಬಳ್ಳಿ, ಕುಂದಗೋಳ, ಬ್ಯಾಡಗಿ, ಹಾನಗಲ್, ಹಿರೇಬೂದಿಹಾಳ, ಹಿರೇಹಡಗಲಿ, ಹರಪನಹಳ್ಳಿ, ಹಡಗಲಿ, ವಿಜಯನಗರ ಜಿಲ್ಲೆಯಿಂದ ಭಕ್ತರು ಆಗಮಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-22-595085218

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.