ರಾಣೆಬೆನ್ನೂರು: ತಾಲ್ಲೂಕಿನಾದ್ಯಂತ ಮುಂಗಾರು ಹಂಗಾಮು ಆರಂಭವಾಗಿದ್ದರಿಂದ ರೈತರು ಸೋಯಾಬೀನ್ ಬೆಳೆಯಲು ತಾಲ್ಲೂಕಿನಲ್ಲಿ ಅನೇಕ ರೈತರು ಸಬ್ಸಿಡಿ ದರದಲ್ಲಿ ಬಿತ್ತನೆಗೆ ಬೀಜ ಖರೀದಿಸಲು ಮುಂದಾಗಿದ್ದಾರೆ. ತಾಲ್ಲೂಕಿನಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಬಹುದು ಎಂದು ತಿಳಿದು ಅದಕ್ಕೆ ತಕ್ಕಂತೆ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಕಡಿಮೆ ಮಳೆ ಬೀಳುವಲ್ಲಿ ಸೊಯಾಬೀನ್ ಬೆಳೆಯುವ ಸಾಮರ್ಥ್ಯ ಹೊಂದಿದ ಜಮೀನಿಗೆ ಈ ವರ್ಷ ಮೆಕ್ಕೆಜೋಳ ಕಡಿಮೆ ಮಾಡಿ ಹೆಚ್ಚಿನ ರೈತರು ಸೋಯಾಬೀನ್ ಬೀಜ ಬಿತ್ತನೆ ಮಾಡಲು ಮುಂದಾಗಿದ್ದಾರೆ.

ಬಿತ್ತನೆಗೆ ಅಗತ್ಯವಿರುವ ಸೋಯಾಬಿನ್ ಬೀಜಗಳಿಗೆ ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೇಡ್ಲೇರಿ ಹೋಬಳಿಯ ರೈತ ಸಂಪರ್ಕ ಕೇಂದ್ರದ ಮುಂದೆ ಸೋಯಾಬೀನ್ ಬೀಜ ಖರೀದಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಮಂಗಳವಾರ ದಿವಸ ಸೊಯಾಬಿನ್ ಖಾಲಿಯಾಗಿದ್ದರಿಂದ ಸೋಮವಾರ ಮತ್ತು ಮಂಗಳವಾರ ಪಾಳೆಯದಲ್ಲಿ ನಿಂತಿದ್ದ ರೈತರಿಗೆ ಕೃಷಿ ಅಧಿಕಾರಿಗಳು ಟೋಕನ್ ವಿತರಿಸಿದ್ದರು.

‘ಮೇಡ್ಲೇರಿ ರೈತ ಸಂಪರ್ಕ ಕೇಂದ್ರಕ್ಕೆ 1200 ಚೀಲ ಸೋಯಾಬೀನ್ ಪಾಕೇಟ್ಗಳು ಬಂದಿವೆ. ಶುಕ್ರವಾರ ವಿತರಣೆ ಮಾಡಲಾಗುವುದು ಎಂದು ರೈತರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ರೈತ ಸಂಪರ್ಕ ಕೇಂದ್ರಕ್ಕೆ ತಂಡೋಪ ತಂಡವಾಗಿ ಜಮಾಯಿಸಿದ ರೈತರು ಆಧಾರ್ ಕಾರ್ಡ್ ಹಾಗೂ ಆರ್ಟಿಸಿ ಉತಾರ ಜರಾಕ್ಸ್ ಪ್ರತಿ ಹಿಡಿದು ನಮಗೂ ಇಂದೇ ಬೀಜ ವಿತರಣೆ ಮಾಡಬೇಕು’ ಎಂದು ಆಗ್ರಹಿಸಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿದರು.

‘ಆಗ ಕೃಷಿ ಅಧಿಕಾರಿಗಳು ರೈತರನ್ನು ಸಮಾಧಾನ ಪಡಿಸಿ ಮತ್ತೆ ಟೋಕನ್ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ ಮೊದಲು ಸೋಮವಾರ ಟೋಕನ್ ಕೊಟ್ಟ ರೈತರಿಗೆ ಸಂಜೆವರೆಗೂ 800 ಚೀಲಗಳಷ್ಟು ಸೋಯಾಬಿನ್ ಮತ್ತು 100 ಕೆಜಿ ತೊಗರಿ ಬೀಜ ವಿತರಣೆ ಮಾಡಲಾಗಿದೆ. ನಾಳೆ ಕೂಡ ಬೀಜ ವಿತರಣೆ ಮಾಡಲಾಗುವುದು’ ಎಂದು ಕೃಷಿ ಅಧಿಕಾರಿ ವಿರೇಶ ಎಂ.ಜೆ ತಿಳಿಸಿದರು.

‘ಕಳೆದ ಎರಡು ಮೂರು ದಿನಗಳಿಂದ ಸರ್ಕಾರದಿಂದ ಸಬ್ಸಿಡಿ ದರದಲ್ಲಿ ಸಿಗುವ ಸೋಯಾಬೀನ್ ಬೀಜ ಖಾಲಿಯಾಗಿದ್ದು, ಇಂದು ಬರುತ್ತೆ ನಾಳೆ ಬರುತ್ತೆ ಎಂದು ಅಧಿಕಾರಿಗಳು ಸಬೂಬು ಹೇಳಿ ಕಳಿಸುತ್ತಾರೆ. ಮಳೆ ಉತ್ತಮವಾಗಿದ್ದರಿಂದ ಬಿತ್ತನೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಈಗ ಕೈಯಲ್ಲಿ ದುಡ್ಡು ಹಿಡಿದುಕೊಂಡು ಬಿತ್ತನೆ ಬೀಜಕ್ಕೆ ಕಚೇರಿಗೆ ಅಲೆದಾಡುವಂತಾಗಿದೆ. ಖಾಸಗಿಯಾಗಿ ಕೊಳ್ಳೋಣವೆಂದರೆ ಅಲ್ಲಿ ದರ ಹೆಚ್ಚಾಗಿದೆ. ಸರ್ಕಾರ ಕೂಡಲೇ ಸಮರ್ಪಕವಾಗಿ ಸೋಯಾಬೀನ್ ಬೀಜ್ ವಿತರಣೆ ಮಾಡಬೇಕು‘ ಎಂದು ರೈತರು ಮನವಿ ಮಾಡಿದರು.

ಕೃಷಿ ಸಹಾಯಕ ನಿರ್ದೇಶಕ ಶಾಂತಮಣಿ ಜಿ. ಅವರು ಪ್ರಜಾವಾಣಿಯೊಂದಿಗೆ ಮಾತನಾಡಿ, ‘ಬೇಡಿಕೆಗೆ ಅನುಗುಣವಾಗಿ ಸೋಯಾಬೀನ್ ಬೀಜ ಬರುತ್ತಿದೆ. ಭಾನುವಾರ ಮತ್ತೆ 300 ಕ್ವಿಂಟಲ್ ಬರಲಿದೆ. ಎಲ್ಲ ರೈತರಿಗೂ ಬೀಜ ವಿತರಣೆ ಮಾಡಲಾಗುವುದು. ರೈತರು ಆತಂಕ ಪಡಬಾರದು. ಶನಿವಾರ ಕುಪ್ಪೇಲೂರು ರೈತ ಸಂಪರ್ಕ ಕೇಂದ್ರದಲ್ಲಿ 100 ಕ್ವಿಂಟಲ್ ಸೋಯಾಬಿನ್ ಬೀಜ ವಿತರಣೆ ಮಾಡಲಾಗುವುದು’ ಎಂದು ಹೇಳಿದರು.

‘ರೈತರು ಮುಂಗಾರು ಸ್ಥಿರತೆಯನ್ನು ಖಚಿತಪಡಿಸಿಕೊಂಡು ನಿರಂತರವಾಗಿ ಉತ್ತಮ ಮಳೆಯಾದ ನಂತರ ಬಿತ್ತನೆ ಮಾಡುವುದು ಉತ್ತಮ. ಮಣ್ಣಿನಲ್ಲಿ 3-5 ಸೆಂ.ಮೀ ಆಳದವರೆಗೆ ಸಮರ್ಪಕ ತೇವಾಂಶ ಇರಬೇಕು. ಚದುರಿದ ಮಳೆ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಕಂಡು ಬರುತ್ತಿದ್ದು, ರೈತರು ಆತುರದಲ್ಲಿ ಸೋಯಾಬೀನ್ ಬಿತ್ತನೆ ಮಾಡದೇ, ನಿರಂತರ ಮಳೆ ಹಾಗೂ ಸಮರ್ಪಕ ಮಣ್ಣಿನ ತೇವಾಂಶ ಲಭ್ಯವಾದ ನಂತರ ಬಿತ್ತನೆ ಕೈಗೊಳ್ಳುವುದು ಸೂಕ್ತ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-22-49232157

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.