ರಾಣೆಬೆನ್ನೂರು: ಶಿವನ ಸಾಕಾರ ರೂಪವೇ ಶ್ರೀಗುರು. ಗುರು ದರ್ಶನ ವಾದರೆ ಶಿವದರ್ಶನವಾಯಿತೆಂಬ ನಂಬಿಕೆಯಿದೆ. ಜಗ ಬೆಳಗಲು ಸೂರ್ಯ ಬೇಕು. ಬಾಳು ಬೆಳಗಲು ಗುರು ಬೇಕು. ಗುರುಬಲದಿಂದ ಮನುಷ್ಯನ ಬಾಳು ಸುಭದ್ರಗೊಳ್ಳುವುದೆಂದು ಬಾಳೆ ಹೊನ್ನೂರು ರಂಭಾಪುರಿ ವೀರ ಸೋಮೇ ಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ಸೋಮವಾರ ವೀರಭದ್ರೇಶ್ವರ ದೇವಸ್ಥಾನದ ಗೋಪುರ ಕಳಸಾರೋಹಣ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಅಂಗವಾಗಿ ಜರುಗಿದ ಜನ ಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬ್ರಹ್ಮ ಸೃಷ್ಟಿ ಮಾಡಬಲ್ಲ. ವಿಷ್ಣು ಸಂರಕ್ಷಣೆ ಮಾಡಬಲ್ಲ. ಮಹೇಶ್ವರ ದುಷ್ಟ ಶಕ್ತಿ ನಾಶ ಮಾಡಬಲ್ಲ. ಈ ಮೂರು ಗುಣಗಳು ಶ್ರೀ ಗುರುವಿನಲ್ಲಿ ಅಡಕವಾಗಿವೆ. ಶ್ರೀ ಗುರು ಮನಸ್ಸು ಮಾಡಿದರೆ ಹೊಸದನ್ನು ನಿರ್ಮಿಸಬಲ್ಲ ಮತ್ತು ಸಂರಕ್ಷಿಸಬಲ್ಲ. ಗುರುವಿನ ಕೋಪ ತಾಪಕ್ಕೆ ಬಲಿಯಾದರೆ ನಾಶ ನಿಶ್ಚಿತ. ಗುರು ಕಾರುಣ್ಯ ಸಂಪ್ರಾಪ್ತಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಗುರು ನರನೆಂದವಗೆ, ಲಿಂಗ ಶಿಲೆ ಎಂದವನಿಗೆ, ಕರುಣ ಪ್ರಸಾದ ಎಂಜಲು ಎನ್ನುವವರಿಗೆ ನಾಯಕ ನರಕ ತಪ್ಪದೆಂದು ಸರ್ವಜ್ಞ ಕವಿ ಎಲ್ಲರನ್ನು ಎಚ್ಚರಿಸಿದ್ದಾನೆ ಎಂದರು.

ಆರೇಮಲ್ಲಾಪುರ ಗ್ರಾಮ ಚಿಕ್ಕದಾದರೂ ಇಲ್ಲಿರುವ ಜನರ ಭಕ್ತಿ ಶ್ರದ್ಧೆ ಅಪಾರ. ರಂಭಾಪುರಿ ಪೀಠದ ಕ್ಷೇತ್ರನಾಥನಾಗಿ ಗೋತ್ರ ಪುರುಷನಾಗಿ ಪೂಜೆಗೊಳ್ಳುವ ವೀರಭದ್ರಸ್ವಾಮಿ ಆರೇಮಲ್ಲಾಪುರ ಗ್ರಾಮದಲ್ಲಿ ನೆಲೆ ಗೊಂಡಿರುವು ತಮ್ಮೆಲ್ಲರ ಸೌಭಾಗ್ಯವೆಂದು ಹರುಷ ವ್ಯಕ್ತಪಡಿಸಿದರು.

ಉಜ್ಜಯಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಕಾಲ ಕಾಲಕ್ಕೆ ಉತ್ತಮ ಮಳೆಯಾಗಲಿ. ಉತ್ತಮ ಬೆಳೆ, ಬೆಲೆ ಬಂದು ರೈತರು ಸುಖವಾಗಿ ಬಾಳಲಿ. ದೇಶ ಕಾಯುವ ಯೋಧ, ಅನ್ನ ನೀಡುವ ರೈತ ಇವರನ್ನು ಯಾರೂ ಮರೆಯಬಾರದು. ಆರೇಮಲ್ಲಾಪುರ ಸದ್ಭಕ್ತರ ಭಕ್ತಿ ಅತ್ಯಂತ ಶ್ರೇಷ್ಠವಾದದ್ದು. ಸರ್ವರಿಗೂ ಭಗವಂತ ಸುಖ ಶಾಂತಿ ಅನುಗ್ರಹಿಸಲೆಂದು ಶುಭ ಹಾರೈಸಿದರು.

ಶ್ರೀಶೈಲ ಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡಿ, ಬೆಳಕು ನೀಡುವ ಸೂರ್ಯ ಸಿರಿವಂತರ ಮತ್ತು ಬಡವರ ಮನೆ ಮೇಲೆ ಸಮಾನವಾದ ಬೆಳಕು ಬೀರುವ ತರಹ ಗುರುವು ಸರ್ವ ಜಾತಿ ಜನಾಂಗದವರನ್ನು ಸಮಾನ ಮನೋಭಾವನೆಯಿಂದ ಕಂಡು ಆಧ್ಯಾತ್ಮದ ಅರಿವು ಉಂಟು ಮಾಡುತ್ತಾನೆ. ಜಾತಿಗಿಂತ ನೀತಿ ಶ್ರೇಷ್ಠವೆಂದು ಭಾವಿಸಿ ಬಾಳಿದರೆ ಬದುಕಿನಲ್ಲಿ ಉನ್ನತಿ ಸುಲಭ ಸಾಧ್ಯವಾಗುವುದು ಎಂದರು.

ಶಾಸಕ ಪ್ರಕಾಶ ಕೋಳಿವಾಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಗ್ರಾಮದಲ್ಲಿ ನಡೆದದ್ದು ಇಲ್ಲಿಯ ಜನರ ಸೌಭಾಗ್ಯ. ಪೂಜ್ಯರ ಆಶೀರ್ವಾದದಿಂದ ಈ ಭಾಗದ ಜನರ ಬದುಕು ಬಲಗೊಳ್ಳಲಿ ಎಂದರು.

ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಎಚ್.ಶಿವಶಂಕರ್, ವಿರೂಪಾಕ್ಷಪ್ಪ ಬಳ್ಳಾರಿ, ಹಿರಿಯ ವಕೀಲ ಪಿ.ಆರ್.ಕುಪ್ಪೇಲೂರ, ವಿರೇಶ ಮೋಟಗಿ, ಮಂಜುನಾಥ ಹಲವಾಗಲ, ಶಿವನಗೌಡ ಮುದಿಗೌಡ್ರ, ಮಂಜನಗೌಡ ಪಾಟೀಲ ಇದ್ದರು.

ನೇತೃತ್ವ ವಹಿಸಿದ ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರು ಸರ್ವ ಜನಾಂಗಕ್ಕೂ ಆದರಣೀಯ ಸ್ಥಾನಮಾನಗಳನ್ನು ಹೊಂದಿದ್ದಾರೆ. ಆರೇಮಲ್ಲಾಪುರ ಗ್ರಾಮದ ಎಲ್ಲ ಜನತೆ ಭಕ್ತಿ ಶ್ರದ್ಧೆ ಅಭಿಮಾನದಿಂದ ಜಗದ್ಗುರುಗಳನ್ನು ಬರಮಾಡಿಕೊಂಡಿರುವುದು ತಮ್ಮೆಲ್ಲರ ಧರ್ಮನಿಷ್ಠೆ-ಸ್ವಾಭಿಮಾನಕ್ಕೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದರು.

ಹೊನ್ನಾಳಿ ಹಿರೇಕಲ್ಮಠ, ಹಾವೇರಿ ಕರ್ಜಗಿಮಠ, ಅಕ್ಕಿಆಲೂರು ಹಿರೇಮಠ, ದಿಂಡದಹಳ್ಳಿ ಹಿರೇಮಠ, ಲಿಂಗದಹಳ್ಳಿ ಹಿರೇಮಠ, ಹಾವೇರಿ ಬಣ್ಣದಮಠ, ರಾಣೆಬೆನ್ನೂರು ಹಿರೇಮಠ, ಮಳಲಿ ಸಂಸ್ಥಾನಮಠ, ಮಣಕೂರು, ನಾಗವಂದ, ಹಿರೇಮಣಕಟ್ಟಿ, ಗಂಜಿಗಟ್ಟಿ, ಕೂಡಲ, ಹರಪನಹಳ್ಳಿ, ರಾಂಪುರ ಬೃಹನ್ಮಠದ ಶ್ರೀಗಳವರು ಭಾಗವಹಿ ಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-22-1798408945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.