ರಾಣೆಬೆನ್ನೂರು: ವಾಣಿಜ್ಯ ನಗರಿಯ ಪ್ರಮುಖ ರಸ್ತೆಗಳು, ವೃತ್ತಗಳು, ವಿವಿಧ ಬಡಾವಣೆಗಳು ಹಾಗೂ ಮನೆಯ ಸಮೀಪದ ಓಣಿಗಳು ಹೀಗೆ ಎಲ್ಲೆಂದರಲ್ಲಿ ಕಸ ಎಸೆಯುವ ಪ್ರಮುಖ ಪ್ರದೇಶಗಳನ್ನು ಗುರುತಿಸಿರುವ ನಗರಸಭೆ ಅಲ್ಲಿ ಕಸ ಹಾಕುವುದನ್ನು ತಡೆಯಲು ಕಿರು ಉದ್ಯಾನಗಳ ನಿರ್ಮಾಣದ ಪ್ರಯೋಗಕ್ಕೆ ಮುಂದಾಗಿದೆ. ಇದಕ್ಕೆ ‘ಕನಸಿನ ರಾಣೆಬೆನ್ನೂರು’ ಜೊತೆಯಾಗಿದೆ.

ಕಸ ಎಸೆಯುವ ಜಾಗದಲ್ಲಿ ಎಚ್ಚರಿಕೆಯ ಫಲಕವನ್ನು ನಗರಸಭೆ ಅಳವಡಿಸಿದ್ದರೂ ಜನ ಆ ಫಲಕದ ಎದುರೇ ಕಸ ಚೆಲ್ಲುತ್ತಿದ್ದಾರೆ. ನಿತ್ಯ ಮನೆ ಮನೆ ಕಸ ಸಂಗ್ರಹಿಸುವ ನಗರಸಭೆಯ ವಾಹನಗಳಲ್ಲಿ ಹಸಿ ಕಸ, ಒಣ ಕಸ ಸಂಗ್ರಹ ಕುರಿತು ಹಾಗೂ ಪರಿಸರ ಕಾಪಾಡುವ ಬಗ್ಗೆ ಜಾಗೃತಿ ಹಾಡುಗಳನ್ನು ಹಾಕಲಾಗುತ್ತದೆ. ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ ಆದರೂ ಕಸ ತಂದು ಮೂಲೆಯಲ್ಲಿ ಸುರಿಯುವುದು ಬಿಟ್ಟಿಲ್ಲ. ತಾಂತ್ರಿಕ ಕಾರಣದಿಂದ ಒಂದು ದಿನ ಕಸದ ಗಾಡಿ ಬರಲಿಲ್ಲ ಎಂದರೆ ಸಾಕು, ರಾತ್ರಿ ಹೊತ್ತು ತ್ಯಾಜ್ಯ ತಂದು ರಸ್ತೆಯ ಬದಿಗೆ ಸುರಿಯುವುದು ಕಂಡು ಬರುತ್ತಿದೆ. ಕೆಲವು ಬಡಾವಣೆಗಳಲ್ಲಿ ದಿನವೂ ಮತ್ತು ಕೆಲ ಬಡಾವಣೆಗಳಲ್ಲಿ ಎರಡು ಮೂರು ದಿನಗಳಿಗೊಮ್ಮೆ ಕಸ ಸಂಗ್ರಹ ವಾಹನಗಳು ಬರುತ್ತಿವೆ. ಅಲ್ಲಿಯ ತನಕ ಕಾಯದೇ ಜನರು ಮನೆ ಸಮೀಪದ ರಸ್ತೆ, ಮೂಲೆ ಅಥವಾ ಖಾಲಿ ನಿವೇಶನಗಳಲ್ಲಿ ಕಸ ಹಾಕುವ ರೂಢಿ ಮಾಡಿಕೊಂಡಿದ್ದಾರೆ.

‘ಕನಸಿನ ರಾಣೆಬೆನ್ನೂರು ತಂಡ’ ಹಾಗೂ ವಿವಿಧ ಸಂಘ ಸಂಸ್ಥೆಗಳು ಪಟ್ಟಣದ ನಗರಸಭೆ ಸಿಬ್ಬಂದಿಯೊಂದಿಗೆ ಕೈಜೋಡಿಸಿ ನಾಲ್ಕೈದು ಕಡೆಗಳಲ್ಲಿ ಕಸ ಸುರಿಯುವ ಬ್ಲಾಕ್ ಸ್ಪಾಟ್ಗಳನ್ನು ಗುರುತಿಸಿದ್ದಾರೆ. ವಿನಾಯಕ ನಗರ ಗಣೇಶ ದೇವಸ್ಥಾನ, ಹೆಸ್ಕಾಂ ಗ್ರಿಡ್ ಆವರಣದ ಗೋಡೆ ಮೂಲೆ, ಮೇಡ್ಲೇರಿ ಡಿವೈಡರ್ ರಸ್ತೆಯ ಲಯನ್ಸ್ ಸ್ಕೂಲ್ ಬಳಿ ವಾಹನ ನಿಲುಗಡೆ ಪ್ರದೇಶ, ಹೌಸಿಂಗ್ ಕಾಲೊನಿಯ ಸ್ವಾಮಿ ವಿವೇಕಾನಂದ ಸ್ಕೂಲ್ ಕಾಂಪೌಂಡ್ ಮತ್ತು ಅಶೋಕನಗರದ ಹಳೇ ಹೇಮಾ ಪಾಟೀಲ ಆಸ್ಪತ್ರೆಯ ಬಳಿ ಕಸದ ರಾಶಿ ಬೀಳುವ ಜಾಗಗಳನ್ನು ಸ್ವಚ್ಛಗೊಳಿಸಲಾಗಿದ್ದು, ಅವು ಈಗ ‘ಕಿರು ಉದ್ಯಾನ‘ ವಾಗಿ ಮಾರ್ಪಟ್ಟಿವೆ’ ಎಂದು ನಗರಸಭೆ ಮಾಜಿ ಸದಸ್ಯೆ ತ್ರಿವೇಣಿ ಪವಾರ, ನಗರಸಭೆಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ಗಾವಡೆ ಹಾಗೂ ಶೃತಿ ಎಂ.ತಿಳಿಸಿದ್ದಾರೆ.

ನಗರದ ಮೇಡ್ಲೇರಿ ಡಿವೈಡರ್ ರಸ್ತೆಯ ಬಳಿ ಲಯನ್ಸ್ ಸ್ಕೂಲ್ ಮತ್ತು ಸ್ವಾಮಿ ವಿವೇಕಾನಂದ ಸ್ಕೂಲ್ ಬಳಿಯ ಜಾಗವನ್ನು ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಿ ಅಲ್ಲಿ ಇಟ್ಟಿಗೆಗಳಿಂದ ಕಿರು ಉದ್ಯಾನ ನಿರ್ಮಿಸಲಾಗಿದೆ. ಸಿಮೆಂಟ್ ಇಟ್ಟಿಗೆ, ಹಳೆ ಎಣ್ಣೆ ಡಬ್ಬಿ, ಕುಡಿಯುವ ನೀರಿನ ಕ್ಯಾನ್, ವಾಹನಗಳ ಹಳೆ ಟೈರ್ಗಳಿಗೆ ಬಣ್ಣ ಬಳಿದು ಅದರಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದೆ. ರಂಗೋಲಿ ಬಿಡಿಸಿ ಕಸ ಚೆಲ್ಲಬೇಡಿ ಎಂಬ ಎಚ್ಚರಿಕೆ ಫಲಕವನ್ನು ಅಳವಡಿಸಲಾಗಿದೆ. ಯಾವಾಗಲೂ ದುರ್ನಾತ ಬೀರುತ್ತಿದ್ದ ಈ ಜಾಗದಲ್ಲಿ ಈಗ ಕಿರು ಉದ್ಯಾನ ಕಂಗೊಳಿಸುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-22-1080059795

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.