ರಾಣೆಬೆನ್ನೂರು: ನಗರಕ್ಕೆ ಪೂರೈಸುತ್ತಿರುವ 24/7 ನಿರಂತರ ನೀರು ಸರಬರಾಜಿನ ಮುದೇನೂರು ತುಂಗಭದ್ರ ನದಿ ಪಾತ್ರದಲ್ಲಿರುವ ಜಾಕ್ವೆಲ್ನ ತಳ ಭಾಗದಲ್ಲಿ ಮರಳು ಮಿಶ್ರಿತ ತಿಳಿ ಮಣ್ಣು ಮತ್ತು ಕಸ ಕಡ್ಡಿಯಂತ ವಸ್ತುಗಳು ಸಂಗ್ರಹವಾಗಿರುವುದರಿಂದ ನೀರು ಸರಬುರಾಜಿನ ಸಾಮರ್ಥ್ಯಕ್ಕೆ ತೊಂದರೆ ಉಂಟಾಗುತ್ತಿದೆ.

ಜಾಕ್ವೆಲ್ನ ಸಮರ್ಪಕ ನಿರ್ವಹಣೆಗೆ ತಾತ್ಕಾಲಿಕವಾಗಿ ಮೇ 4 ರಿಂದ ಮೇ10ರ ವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೀರು ಪೂರೈಕೆ ಇರುವುದಿಲ್ಲ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 9 ಗಂಟೆವರೆಗೆ ನಗರಕ್ಕೆ 24/7 ನಿರಂತರ ನೀರು ಸರಬುರಾಜು ಮಾಡಲಾಗುತ್ತದೆ. ಪ್ರಸ್ತುತ ಬೇಸಿಗೆ ಕಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀರನ್ನು ವ್ಯರ್ಥ ಮಾಡದೇ ಮಿತವಾಗಿ ಬಳಸಬೇಕು. ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸೂಚಿಸಿದ್ದಾರೆ. 24/7 ನಿರಂತರ ನೀರಿನ ಪೈಪ್ಲೈನ್ಗಳಲ್ಲಿ ನಳಗಳಲ್ಲಿ ನೀರಿನ ಸೋರಿಕೆ ಕಂಡು ಬಂದರೆ ತಕ್ಷಣ ನಗರಸಭೆ ಗ್ರಾಹಕರ ಕೇಂದ್ರದ ದೂರವಾಣಿ 7735833313 ಸಂಖ್ಯೆಗೆ ತಿಳಿಸಲು ನಗರಸಭೆ ಪೌರಾಯುಕ್ತ ಎಫ್.ವೈ.ಇಂಗಳಗಿ ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-1971302266

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.