ರಾಣೆಬೆನ್ನೂರು: ನಗರದ ಯರೇಕುಪ್ಪಿ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.

ಸಿದ್ದೇಶ್ವರನಗರದ ನಿವಾಸಿ ಶರತ್ ಷಣ್ಮುಖಪ್ಪ ಶಿಗ್ಲಿ (26) ಮೃತಪಟ್ಟವ. ಬೈಕ್ ಸಮೇತ ನೀರಿನ ಗುಂಡಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ.

‘ರಸ್ತೆಯ ನಿರ್ವಹಣಾಧಿಕಾರಿ ಎನ್.ಎಚ್. 48ರ ಮಧ್ಯದಲ್ಲಿರುವ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯನ್ನು ಸರಿಯಾಗಿ ಮುಚ್ಚದಿರುವುದರಿಂದ ಹಾಗೂ ಆ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಯರೇಕುಪ್ಪಿ ಸೇತುವೆ ಕಡೆಯಿಂದ ಹಾವೇರಿ ಸೇತುವೆ ಕಡೆ ಬೈಕ್ ಚಲಾಯಿಸಿಕೊಂಡು ಬಂದ ಮಗ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ರಸ್ತೆಯ ನಿರ್ವಹಣಾಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಷಣ್ಮುಖಪ್ಪ ದೂರು ಸಲ್ಲಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲೊಕೇಶ ಜೆ., ಗ್ರಾಮೀಣ ಸಿಪಿಐ ಎನ್.ಸಿ. ಕಾಡದೇವರ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಸಾರ್ವಜನಿಕರು ಮಾಹಿತಿ ನೀಡಿದ ಮೇಲೆ ಪೊಲೀಸರು ಕ್ರೇನ್ ಮತ್ತು ಜೆಸಿಬಿ ಮೂಲಕ ಸ್ಲ್ಯಾಬ್ ತೆರವುಗೊಳಿಸಿ ಶವವನ್ನು ಹೊರ ತೆಗೆದರು.

‘ಯರೇಕುಪ್ಪಿ ಸೇತುವೆ ಸಮೀಪ ಎನ್.ಎಚ್. 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಗೆ ಸರಿಯಾಗಿ ಸಿಮೆಂಟ್ ಸ್ಲ್ಯಾಬ್ ಹಾಕಿ ಮುಚ್ಚಿರಲಿಲ್ಲ. ಇಲ್ಲಿ ಸಾಕಷ್ಟು ಬೆಳಕು ಇಲ್ಲ. ಈ ಬಗ್ಗೆ ಯಾವುದೇ ನಾಮಫಲಕಗಳೂ ಇಲ್ಲಿ ಇರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-22-774624175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.