ರಾಣೆಬೆನ್ನೂರು: ಇಲ್ಲಿನ ಸ್ಟೇಷನ್ ರಸ್ತೆಯ ವರ್ತಕರ ಸಂಘದ ಸಮುದಾಯ ಭವನದಲ್ಲಿ ಶುಕ್ರವಾರ ಆಟೊ ಚಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು. ಸಭೆಯಲ್ಲಿ ತಾಲ್ಲೂಕು ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಜಗದೀಶ ಕೆರೂಡಿ ಹಾಗೂ ಗೌರವ ಅಧ್ಯಕ್ಷರಾಗಿ ರವೀಂದ್ರಗೌಡ ಎಫ್. ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಟೊ ಚಾಲಕರ ಒಕ್ಕೂಟದ ನೂತನ ಅಧ್ಯಕ್ಷ ಜಗದೀಶ ಕೆರೂಡಿ ಮಾತನಾಡಿ, ತೈಲ ದರ ಏರಿಕೆಯಿಂದಾಗಿ ನಗರದ ಸಾವಿರಾರು ಆಟೊ ಚಾಲಕರಿಗೆ ಕುಟುಂಬ ನಿರ್ವಹಣೆ ಮಾಡುವುದು ತೊಂದರೆಯಾಗಿದೆ ಎಂದರು.

ಎಷ್ಟೋ ಆಟೊ ಚಾಲಕರಿಗೆ ಸ್ವಂತ ಮನೆಗಳಿಲ್ಲ, ಸ್ವಂತ ಗಾಡಿಗಳಿಲ್ಲದೆ ಬಾಡಿಗೆ ರೂಪದ ಆಟೊಗಳನ್ನ ಪಡೆದು ಕನಿಷ್ಠ ಪ್ರಯಾಣದ ದರ ಪಡೆದು ಜೀವನ ನಡೆಸುವಂತಾಗಿದೆ. ಎಲ್ಪಿಜಿ ಗ್ಯಾಸ್ ದರ ಹೆಚ್ಚಳದಿಂದ ಆಟೊ ಚಾಲಕರು ಕಂಗಾಲಾಗಿದ್ದಾರೆ ಎಂದರು.

ಗೌರವ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಮಾತನಾಡಿ, ನಗರದ ಎಲ್ಲಾ ಆಟೊ ಚಾಲಕರು ಗೌರವ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ. ಆಟೊ ಚಾಲಕರ ಕಲ್ಯಾಣಕ್ಕಾಗಿ ಶ್ರಮಿಸುತ್ತೇನೆ. ಆಟೊ ಚಾಲಕರಿಗೆ ಸರ್ಕಾರದ ಸೌಲಭ್ಯಗಳು ಸೂಕ್ತ ಸಮಯದಲ್ಲಿ ದೊರಕಿಸಿ ಕೊಡಲು ನಿಮ್ಮ ಸಹಕಾರ ಬಹಳ ಮುಖ್ಯ. ನಂತರದ ದಿನಗಳಲ್ಲಿ ಉಳಿದ ಎಲ್ಲ ಪದಾಧಿಕಾರಿಗಳನ್ನು ಶೀಘ್ರವೇ ಆಯ್ಕೆ ಮಾಡಲಾಗುವುದು ಎಂದರು.

ಕರಿಯಪ್ಪ ಪೂಜಾರ, ವಿರೇಶ ಬಳ್ಳಾರಿ, ವಿನಯ ಚನ್ನಪ್ಪನವರ, ಪರಶುರಾಮ ಅಯ್ಯಜ್ಜನವರ, ರಮೇಶ್ ಕೆಂಪಣ್ಣನವರ, ಉದಯ ತೆಗ್ಗಿನ, ನಾಗರಾಜ ಹಾರೋಗಪ್ಪ, ಮನೋಜ್ ಕುಮಾರ್, ಉಮೇಶ ತಿಳುವಳ್ಳಿ, ಭಾಷಾಸಾಬ್ ಹಂಪಾಪಟ್ಟಣ, ರಾಜು ಓಲೇಕಾರ, ಯಲ್ಲಪ್ಪ ಚಿಕ್ಕಣ್ಣನವರ, ಅಣ್ಣಪ್ಪ, ಚಿಕ್ಕಪ್ಪ ಎಡಚಿ, ಅಜ್ಜಪ್ಪ ನಾಯಕ, ಆಟೊ ಚಾಲಕರು ಇದ್ದರು..

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-22-1147359823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.