ರಾಣೆಬೆನ್ನೂರು: ನಗರದಲ್ಲಿ ಆಟೊ ಅನಿಲ ಮಾಲೀಕರು ಏಕಾಏಕಿ ಆಟೊಅನಿಲ ದರವನ್ನು ಹೆಚ್ಚಿಸಿದ್ದನ್ನು ಖಂಡಿಸಿ ಬುಧವಾರ ಆಟೊ ಚಾಲಕರು ಮತ್ತು ಮಾಲೀಕರು ಆಟೊ ಬಂದ್ ಮಾಡಿ ರೈತ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಆಹಾರ ನಿರೀಕ್ಷಕ ಸ್ಟ್ಯಾಲಿನ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಆಟೊ ಅನಿಲ ದರ ಏರಿಕೆ ಮಾಡುತ್ತಿರುವ ಬಂಕ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆ ನಡೆಸಿ ಆಹಾರ ನಿರೀಕ್ಷಕರಿಗೆ ಮನವಿ ಮಾಡಿದಾಗ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಮತ್ತೆ ಬಂಕ್ ಮಾಲೀಕರು ಒಂದು ವಾರ ಸುಮ್ಮನಿದ್ದು ಈಗ ಮತ್ತೆ ಆಟೊ ಅನಿಲ ದರ ಹೆಚ್ಚಿಸಿದ್ದಾರೆ ಎಂದು ಆರೋಪಿಸಿದರು.

ನಗರದ ಮಾತೇ ಗ್ಯಾಸ್ ಮತ್ತು ಗೋ ಗ್ಯಾಸ್ ಬಂಕ್ ಮಾಲೀಕರ ವಿರುದ್ದ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ದೂರು ದಾಖಲಿಸಿದರೆ ಮಾತ್ರ ಪ್ರತಿಭಟನೆ ವಾಪಸ್ಸು ಪಡೆಯುತ್ತೇವೆ ಎಂದು ಆಟೊ ಚಾಲಕರು ಮತ್ತು ಮಾಲೀಕರ ಸಂಘದವರು ಒತ್ತಾಯಿಸಿದರು. ಆಹಾರ ನಿರೀಕ್ಷಕರು ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ, ಮನೋಜಕುಮಾರ ಚುಂಬಳೇಕರ, ನಟರಾಜ ಗುಡ್ಡದ, ಮೆಹಬೂಬ ಟಿನ್ಮೇಕರ, ಅಜಯ ಹುಲ್ಲತ್ತಿ, ಹೊನ್ನಪ್ಪ, ಆಂಜನೇಯ ಚಿಕ್ಕಣ್ಣನವರ, ಸಮೀರ ಶಿರಹಟ್ಟಿ, ಕೃಷ್ಣ ಸಾಳೇರ, ಮಂಜುನಾಥ, ಮಾಲತೇಶ ಕರೂರು, ಮಹ್ಮದ್ ಶಿಕ್ಲಗಾರ, ನಾಗರಾಜ ಲಮಾಣಿ, ವಾಸು ನವಲೆ, ಎಸ್.ಎಸ್. ನಂದಿಗಾವಿ, ಬಸವರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-22-1353884076

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.