ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ಭಾರತ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಮಧ್ಯಾಹ್ನದ ವರೆಗೆ ಅಂಗಡಿ– ಮುಂಗಟ್ಟುಗಳು ಬಂದ್
Last Updated 28 ಸೆಪ್ಟೆಂಬರ್ 2021, 2:54 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕರಾಳ ಕೃಷಿ ಕಾಯ್ದೆಗಳ ರದ್ದತಿಗಾಗಿ ಮತ್ತು ವಿದ್ಯುತ್‌ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ನಗರದಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ, ವಿವಿಧ ಕನ್ನಡ ಪರ ಸಂಘಟನೆಗಳು ಸೋಮವಾರ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದವು. ನಂತರ ಅಂಚೆ ಕಚೇರಿ ವೃತ್ತದಲ್ಲಿ ತಹಶೀಲ್ದಾರ್ ಶಂಕರ್‌ ಜಿ.ಎಸ್‌. ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಗರದ ಬಸ್‌ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕರವೇ, ಕಿಸಾನ್‌ ಕಾಂಗ್ರೆಸ್‌ ಒಕ್ಕೂಟ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಒಕ್ಕೂಟ, ಹೊಟೇಲ್‌ ಉದ್ದಿಮೆದಾರರು, ಆಟೊ, ಸ್ತ್ರೀ ಶಕ್ತಿ ಸಂಘಟನೆಗಳು, ಬ್ಯಾಂಕ್‌ ನೌಕರರು, ಅಸಂಘಟಿತ ಕಾರ್ಮಿಕರ ಒಕ್ಕೂಟ, ದಿನಗೂಲಿ ನೌಕರರ ಒಕ್ಕೂಟ, ವಿದ್ಯಾರ್ಥಿ ಸಂಘಟನೆ, ವರ್ತಕರು ಅಂಗಡಿಗಳನ್ನು ಮಧ್ಯಾಹ್ನದವರೆಗೂ ಮುಚ್ಚಿ ಭಾರತ ಬಂದ್‌ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರಗೌಡ ಪಾಟೀಲ ಮಾತನಾಡಿ, ಅಡುಗೆ ಅನಿಲ, ಡಿಸೇಲ್‌, ಪೆಟ್ರೋಲ್‌, ಬೆಲೆ ಏರಿಕೆಯನ್ನು ಖಂಡಿಸಿದರು. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತ ಸಂಘಟನೆಗಳು ದೆಹಲಿಯಲ್ಲಿ ಸತತ 300 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸೌಜನ್ಯಕ್ಕೂ ಕರೆದು ಮಾತುಕತೆ ನಡೆಸಿಲ್ಲ ಎಂದು ದೂರಿದರು.

ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಜೀವನ ನಡೆಸುವುದು ಕಷ್ಟದಾಯಕವಾಗಿದೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ವಿದ್ಯುತ್‌ ಖಾಸಗೀಕರಣ ಕೈಬಿಡಬೇಕು ಎಂದರು.

ಹನುಮಂತಪ್ಪ ಕಬ್ಬಾರ, ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ನಿಂಗರಾಜ ಕೋಡಿಹಳ್ಳಿ, ಬಸರವಾಜ ಹುಚಗೊಂಡರ, ರುಕ್ಮಿಣಿ ಸಾವುಕಾರ, ಬಸಣ್ಣ ಕಡೂರ, ನಿತ್ಯಾನಂದ ಕುಂದಾಪುರ, ವೀರನಗೌಡ ಪೊಲೀಸಗೌಡ್ರ, ಕೃಷ್ಣಪ್ಪ ಕಂಬಳಿ, ಬಸವರಾಜ ಕೊಂಗಿ, ವಿಶ್ವನಾಥ ಕರೇಗೌಡ್ರ, ಎಸ್‌.ಡಿ. ಹಿರೇಮಠ, ಕಿರಣ ಗುಳೇದ, ಹರಿಹರಗೌಡ ಪಾಟೀಲ, ರೇಣುಕಾ ಲಮಾಣಿ, ಶಾಂತಮ್ಮ ಹಿರೇಮರದ, ರೂಪಾ ನಾಯಕ, ಸೇತಸನದಿ, ಪ್ರೇಮಾ, ಸುನೀತಾ ಬಾರ್ಕಿ, ಎ.ಎಂ.ನಾಯಕ, ಮಂಜುನಾಥ ದುಗ್ಗತ್ತಿ, ಸೀತಾರಾಮ ರಡ್ಡಿ, ಇಕ್ಬಾಲಸಾಬ್‌ ರಾಣೆಬೆನ್ನೂರು, ಜೈನುಮಾಬಿ ಪಿಂಜಾರ, ನಗೀನಾ ಬಾನು ದೊಡ್ಡಮನಿ, ಬಸವರಾಜ ಕಡೂರ, ಶಂಕ್ರಪ್ಪ ಮೆಣಸಿನಹಾಳ, ನಾಗರಾಜ ಸೂರ್ವೆ, ಕಟ್ಟಡ ಕಾರ್ಮಿಕರ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ ಎಂ, ಭರತರಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT