ರಾಣೆಬೆನ್ನೂರು: ‘ಭಸ್ಮ, ಮಂತ್ರ, ಪೂಜೆ, ಶಿವನ ಆರಾಧನೆ, ಗುರುಕಾರುಣ್ಯ ಜಂಗಮ ಮೂಲ ಮಂತ್ರವಾಗಿದೆ. ಶಿವ ದೀಕ್ಷೆಯು ಬಹಳ ಮಹತ್ವದ ಸಂಸ್ಕಾರ. ನಾವು ಮಾಡುವ ಕಾಯಕದಲ್ಲಿ ಆನಂದ ಕಾಣುತ್ತ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕಿದೆ’ ಎಂದು ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ದೊಡ್ಡಪೇಟೆಯ ಹೊಸಮಠ (ಚನ್ನವೀರಸ್ವಾಮಿ ಗದ್ದುಗೆ ಮಳೇಮಠ)ದಲ್ಲಿ ಭಾನುವಾರ ವೀರಶೈವ ಲಿಂಗಾಯತ ವೀರ ಮಾಹೇಶ್ವರ ಜಂಗಮ ವಟುಗಳಿಗೆ ಶಿವದೀಕ್ಷೆ (ಅಯ್ಯಾಚಾರ)ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಂದಾಯ ಅಧಿಕಾರಿ ವಾಗೀಶ ಎಂ. ಮಳೇಮಠ ಹಾಗೂ ಕುಟುಂಬದವರು ಕಾರ್ಯಕ್ರಮಕ್ಕೆ ನಡೆಸಿದರು. ಅರ್ಚಕರಾದ ಗೌರೀಶಸ್ವಾಮಿ ನೆಗಳೂರಮಠ, ಪ್ರಭಯ್ಯ ಸ್ವಾಮಿ ಹಿರೇಮಠ ಈಶ್ವರಗುಡಿ ಹಾಗೂ ಜಂಗಮ ಸಮಾಜ ಹಾಗೂ ಜಂಗಮ ನೌಕರರ ಸಂಘದ ಅಧ್ಯಕ್ಷ ವಿ.ಎಸ್. ಹಿರೇಮಠ, ಚನ್ನೇಶ್ವರಮಠದ ಕಾರ್ಯದರ್ಶಿ ಅಮೃತಗೌಡ ಹಿರೇಮಠ, ನಿರುಪಮಾ ವಾಗೀಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-22-1506142752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.