ರಾಣೆಬೆನ್ನೂರು: ಇಲ್ಲಿನ ಮೇಡ್ಲೇರಿ ರಸ್ತೆಯ ರೇಲ್ವೆ ಗೇಟ್ ನಂ. 217ರಲ್ಲಿ ಸಿದ್ದಾಪುರ ತಾಂಡಾದ ಲಕ್ಷ್ಮೀ ಅಶೋಕಪ್ಪ ಲಮಾಣಿ (32) ಎಂಬ ಮಹಿಳೆ ಹಳಿ ದಾಟುವಾಗ ಚಲಿಸುವ ಗಾಡಿ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.

ಕೂಲಿ ಕೆಲಸ ಮುಗಿಸಿಕೊಂಡು ಯುಗಾದಿ ಹಬ್ಬದ ಸಂತಿ ಮಾಡಿಕೊಂಡು ಮನೆಗೆ ಹೋಗುವಾಗ ಈ ಘಟನೆ ನಡೆದಿದೆ ಎಂದು ರೈಲ್ವೆ ಪೊಲೀಸರಿಂದ ತಿಳಿದು ಬಂದಿದೆ. ಮಹಿಳೆಗೆ ಪತಿ, 7 ತಿಂಗಳು ಪುತ್ರಿ, ನಾಲ್ವರು ಪುತ್ರಿಯರು ಇದ್ದಾರೆ. ದಾವಣಗೆರೆ ರೈಲ್ವೆ ಸ್ಟೇಶನ್ನಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಸಂಭವಿಸಿ ಮಹಿಳೆ ಮೃತರಾದ ಸುದ್ದಿ ತಿಳಿಯುತ್ತಿದ್ದಂತೆ ರೇಲ್ವೆ ಮೇಲ್ಸುತುವೆ ನಿರ್ಮಾಣ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಮಹಿಳೆಯ ಶವ ಇಟ್ಟು ಪ್ರತಿಭಟನೆ ನಡೆಸಿದರು.

ಸಮಿತಿಯ ಅಧ್ಯಕ್ಷ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, ನಗರದ ರೇಲ್ವೆ ಗೇಟ್ ನಂ. 217ರಲ್ಲಿ ಸರಣಿ ರೇಲ್ವೆ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಈಗಾಗಲೇ ದೇವರಗುಡ್ಡ ರಸ್ತೆಯ ಬಳಿ ಗೇಟ್ ನಂ. 219ಕ್ಕೆ ಹೊಸದಾಗಿ ಮೇಲುಸೇತುವೆ ನಿರ್ಮಾಣ ಮಾಡಿ ಲೋಕಾರ್ಪಣೆ ಮಾಡಿದೆ. ಅದೇ ರೀತಿ ಗಂಗಾಪುರ ರಸ್ತೆಯ ಗುರುಕೊಟ್ಟೂರೇಶ್ವರನಗರದ ಗೇಟ್ ನಂ 218 ಮತ್ತು 217 ಕ್ಕೂ ಕೂಡ ರೇಲ್ವೆ ಮೇಲ್ಸುತುವೆ ನಿರ್ಮಿಸಿ ಸರಣಿ ಅಪಘಾತಕ್ಕೆ ಅಂತ್ಯ ಹಾಡಬೇಕು ಎಂದು ಮನವಿ ಮಾಡಿದರು.

ದಿನದ 24 ಗಂಟೆಗಳೊಗಾಗಿ 58 ಬಾರಿ ಎರಡೂ ಕಡೆಯಿಂದ ಗೇಟ್ ತೆಗದು ಹಾಕುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಎಂದು ದೂರಿದರು.

ರೈಲ್ವೆ ಪೊಲೀಸ್ ಇಲಾಖೆಯ ದಾವಣಗೆರೆಯ ಎ.ಎಸ್.ಐ. ಜಾನ್ ಮತ್ತು ಹರಿಹರ ರೈಲ್ವೆ ಪೊಲೀಸ್ ಎಚ್ಸಿ ಕೊಟ್ರೋಶ ಮತ್ತು ದಿನೇಶ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-22-1030369013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.