ರಾಣೆಬೆನ್ನೂರು: ನಾಡಿನ ಸಾಧು, ಸಂತರು, ಅವತಾರಿ ಪುರುಷರು ಸಮಾಜದ ಒಳಿತಿಗೆ ಉತ್ತಮ ಮೌಲ್ಯ ಬಿತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದ ಭಾಗದ ಸದ್ಗುರು ಸಿದ್ದಾರೂಢ ಸ್ವಾಮೀಜಿ ಅಗ್ರಗಣ್ಯರು ಎಂದು ಜೋಡಕುರಳಿ ಸಿದ್ಧರೂಢ ಮಠದ ಚಿದ್ಘಾನಾನಂದ ಭಾರತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಮೇಡ್ಲೇರಿ ರಸ್ತೆಯ ವಾಗೀಶ ನಗರದ 5ನೇ ಕ್ರಾಸ್ನಲ್ಲಿರುವ ವೀರಭದ್ರೇಶ್ವರ ದೇವಸ್ಥಾನದ ಸಭಾಂ ಗಣದಲ್ಲಿ ಈಚೆಗೆ ವೀರಭದ್ರ ದೇವಸ್ಥಾನ ಸಮಿತಿಯಿಂದ ಅಧಿಕ ಮಾಸದ ಪ್ರಯುಕ್ತ ಏರ್ಪಡಿಸಿದ ಸಿದ್ದಾರೂಢ ಸ್ವಾಮೀಜಿ ಅವರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಕ್ಷೇತ್ರ ಐರಾವತ ಕ್ಷೇತ್ರ ಐರಣಿ ಹೊಳೆ ಮಠದ ಸಿದ್ದಾರೂಢ ಭಾರತಿ ಸ್ವಾಮೀಜಿ ಅವರು ಸಿದ್ದಾರೂಢರ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀರಭದ್ರ ದೇವಸ್ಥಾನ ಟ್ರಸ್ಟ್ ಕಮೀಟಿ ಅಧ್ಯಕ್ಷ ವೀರೇಶ ಮೋಟಗಿ ಮಾತ ನಾಡಿದರು.

ಮೂರ್ತಿ ಮೆರವಣಿಗೆ: ಬೆಳಿಗ್ಗೆ ವೀರ ಭದ್ರದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ, ಮಹಾಂಗಳಾರತಿ, ಅಲಂಕಾರ ಪೂಜೆ ನಡೆದವು. ಮೇಡ್ಲೇರಿ ರಸ್ತೆಯ ವಾಗೀಶನಗರದ ಗುರುಬಸಪ್ಪ (ಬಾಬು) ಐರಣಿ ಅವರ ನಿವಾಸದಿಂದ ಐರಣಿ ಹೊಳೆಮಠದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸದ್ಗುರು ಸಿದ್ದಾರೂಢರ ಮೂರ್ತಿ ಮೆರವಣಿಗೆ ವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಸುಮಂಗಲೆಯರು ಕುಂಭ ಹೊತ್ತು ಸಾಗಿದ್ದು ಮೆರವಣಿಗೆಗೆ ಮೆರಗು ನೀಡಿತು.

ಸಿದ್ದಾರೂಢ ಸ್ವಾಮಿ ಮಹಾರಾಜಕೀ ಜೈ ಎನ್ನುವ ಜೈಘೋಷ ಮೊಳಗಿತು. ವೀರಭದ್ರದೇವಸ್ಥಾನದಲ್ಲಿ ಸಂಪನ್ನಗೊಂಡಿತು.

ವಿನೋದ ಜಂಬಿಗಿ, ಪಿ.ಮಂಜು ನಾಥ, ಶರಣಪ್ಪ ಮುಚಡಿ, ನಾಗರಾಜ ಮೋಟಗಿ, ನಾಗಣ್ಣ ಮುಂಡಾಸದ, ಗದಿಗೆಪ್ಪ ಹೊಟ್ಟಿಗೌಡ್ರ, ಭದ್ರಿನಾಥ, ಪಂಚಾಕ್ಷರಿ, ರವಿ ಪಟ್ಟಣಶೆಟ್ಟಿ, ವಿರು ಪಾಕ್ಷಪ್ಪ ಅಂಗಡಿ, ಚನ್ನಬಸರಾಜ ನ್ಯಾಮತಿ, ಕರಬಸಪ್ಪ ರಾಮಲಿಂಗಣ್ಣನವರ, ನಾಗರಾಜ ಅಂಗಡಿ, ಬಸಣ್ಣ ರವದಿ ಸೇರಿದಂತೆ ವಿವಿಧ ಮಠದ ಸಾಧು ಸಂತರು ಭಾಗವಹಿಸಿದ್ದರು.

ಮೌನೇಶ ತಬಲಾ ಸಾಥ್ ನೀಡಿದರು. ಅರುಣಕುಮಾರ ಹಾರ್ಮೋನಿಯಂ ನುಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-22-687392775

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.