ರಾಣೆಬೆನ್ನೂರು: ತಾಲ್ಲೂಕಿನಲ್ಲಿ ಮೇ ತಿಂಗಳಲ್ಲಿ ಇಲ್ಲಿಯವರೆಗೆ 185 ಮಿಮೀ ಮಳೆಯಾಗಿದ್ದು, ವಾಡಿಕೆ ಮಳೆ (136 ಮಿಮೀ)ಗಿಂತ 49ಮಿಮೀ ಹೆಚ್ಚಾಗಿದೆ. ತಾಲ್ಲೂಕಿನಲ್ಲಿ ಉತ್ತಮ ಮಳೆಯಾದ ಕಡೆಗಳಲ್ಲಿ ರೈತರು ಬಿತ್ತನೆ ಕಾರ್ಯ ಕೈಗೊಂಡಿದ್ದು, ಕಳೆದ ವರ್ಷ ಸೋಯಾಬಿನ್ 2,215 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಆದರೆ ಕಳೆದ ವರ್ಷಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ಸಾಧ್ಯತೆ ಇದೆ. ರೈತರು ಮೊದಲ ಮಳೆಯನ್ನೇ ಆಧರಿಸಿ ಬಿತ್ತನೆ ಮಾಡಬಾರದು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಒಂದು ಅಥವಾ ಎರಡು ಮಳೆಯ ಬಳಿಕ ಮಳೆ ಬಾರದೆ ಇದ್ದರೆ ಬೀಜ ಮೊಳಕೆಯೊಡೆಯುವಿಕೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸೋಯಾಬಿನ್ ಬಿತ್ತನೆಗೆ ಮಣ್ಣಿನಲ್ಲಿ ಕೇವಲ 3 ರಿಂದ 5 ಸೆಂ.ಮೀ ಆಳದವರೆಗೆ ಸಮರ್ಪಕ ತೇವಾಂಶ ಮತ್ತು ತಂಪಾದ ವಾತಾವರಣ ಇರುವುದು ಅತ್ಯಗತ್ಯ. ಆದ್ದರಿಂದ ಸಾಕಷ್ಟು ಮಳೆಯಾದ ನಂತರವಷ್ಟೇ ಬಿತ್ತನೆ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ತಾಲ್ಲೂಕಿನಲ್ಲಿ ಚದುರಿದ ಮಳೆ ಹಾಗೂ ಗುಡುಗು ಮಿಂಚಿನ ಸಾಧ್ಯತೆ ಕಂಡುಬರುತ್ತಿದೆ. ಮುಂಗಾರು ಇನ್ನೂ ಸ್ಥಿರವಾಗದ ಹಿನ್ನೆಲೆಯಲ್ಲಿ ರೈತರು ಆತುರದಲ್ಲಿ ಸೋಯಾಬೀನ್ ಬಿತ್ತನೆ ಮಾಡದೆ, ಸುಮಾರು 50 ರಿಂದ 75 ಮಿಮೀ ಪ್ರಮಾಣದ ಪರಿಣಾಮಕಾರಿ ಮಳೆ ಹಾಗೂ ಸಮರ್ಪಕ ಮಣ್ಣಿನ ತೇವಾಂಶ ಲಭ್ಯವಾದ ನಂತರವೇ ಬಿತ್ತನೆ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.

ರೈತರು ರಸಗೊಬ್ಬರ ಖರೀದಿಸುವಾಗ ಒಂದೇ ಸಂಸ್ಥೆ ಅಥವಾ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೇ ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಹಾಗೂ ಪೋಟ್ಯಾಸಿಯಂ ಒಳಗೊಂಡ ಸಂಯುಕ್ತ ರಸಗೊಬ್ಬರಗಳನ್ನು ಬಳಸಬೇಕು ಎಂದು ರೈತರಿಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-22-1154995045

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.