ರಾಣೆಬೆನ್ನೂರು: ನಗರದ ನಾಗರಿಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಬಿ.ಟಿ.ಪಾಟೀಲ ಮೈದಾನದಲ್ಲಿ ದೇಶ ವಿದೇಶಗಳ ಹೆಸರಾಂತ ಪ್ರತಿಭಾನ್ವಿತ ಕಲಾವಿದರ ತಂಡದಿಂದ ಕೂಡಿದ ಜಂಬೂ ಸರ್ಕಸ್ ರೋಚಕ ಮತ್ತು ಅದ್ಭುತ ಪ್ರದರ್ಶನ ಪ್ರತಿ ದಿನ ಮಧ್ಯಾಹ್ನ 1 ಗಂಟೆ, ಸಂಜೆ 4 ಗಂಟೆ ಮತ್ತು 7 ಗಂಟೆಗೆ ಮೂರು ಪ್ರದರ್ಶನಗಳನ್ನು ನೀಡಲಿದೆ ಎಂದು ಜಂಬೊ ಸರ್ಕಸ್ ವ್ಯವಸ್ಥಾಪಕ ಟೈಟಸ್ ವರ್ಗೀಸ್ ಹೇಳಿದರು.

ನಗರದ ಬಿ.ಟಿ.ಪಾಟೀಲ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸರ್ಕಸ್ನ ಪ್ರಮುಖ ಆಕರ್ಷಣೆಯಾದ ಪ್ರಾಣಿಗಳ ಪ್ರದರ್ಶನ ನಿಷೇಧ ನಂತರ ಸರ್ಕಸ್ ಇನ್ನಷ್ಟು ಜನಪ್ರಿಯಗೊಳಿಸುವ ಉದ್ದೇಶದಿಂದ ರಷ್ಯಾ ಸಹಿತ ವಿವಿಧ ದೇಶಗಳ ಕಲಾವಿದರನ್ನು ಬಳಸಿಕೊಂಡು ಜನಾಕರ್ಷಣೆ ಹೆಚ್ಚಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದೆ. ಎರಡು ಗಂಟೆಗಳ ಕಾಲ ಜನರು ನಿಬ್ಬೆರಗಾಗುವಂತೆ ಪ್ರದರ್ಶನ ನೀಡಲಿದ್ದಾರೆ ಎಂದರು.

1977ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಬಿಹಾರದ ಧಾನಪುರದಲ್ಲಿ ಎಂ.ವಿ.ಶಂಕರನ್ ಅವರ ನೇತೃತ್ವದಲ್ಲಿ ಜಂಬೂ ಸರ್ಕಸ್ನ ಪ್ರಥಮ ಪ್ರದರ್ಶನ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಜಂಬೂ ಸರ್ಕಸ್ ದೇಶ ವಿದೇಶಗಳಲ್ಲಿ ಸಾವಿರಾರು ಪ್ರದರ್ಶನ ನೀಡುವ ಮೂಲಕ ಕಲೆಯನ್ನು ಜೀವಂತವಾಗಿ ಉಳಿಸಿದೆ. ಇಂದು ಎಂ.ವಿ.ಶಂಕರ್ ಅವರ ಪುತ್ರರಾದ ಅಜಯ್ ಶಂಕರ್ ಹಾಗೂ ಅಶೋಕ್ ಶಂಕರ್ ಅವರು ಜಂಬೋ ಸರ್ಕಸ್ ಮುಂದುವರಿಸುವ ಮೂಲಕ ತಮ್ಮ ತಂದೆಯ ಹೆಸರಿಗೆ ಕೀರ್ತಿ ತಂದಿದ್ದಾರೆ ಎಂದರು.

ರಷ್ಯಾ, ಮಣಿಪುರ, ತಾಂಜೇನಿಯಾ, ಇಥಿಯೋಪಿಯ ಹಾಗೂ ಭಾರತದ ವಿವಿಧ ಭಾಗದ ಹೆಸರಾಂತ 100 ಜನ ಕಲಾವಿದರಿದ್ದು, ಅವರಲ್ಲಿ 60 ಮಂದಿ ಮಹಿಳಾ ಕಲಾವಿದರು ಹಾಗೂ 40 ಮಂದಿ ಪುರುಷ ಕಲಾವಿದರು ವೈವಿಧ್ಯಮಯ ರೋಮಾಂಚನಕಾರಿ ಸಾಹಸ ಪ್ರದರ್ಶನ ನೀಡುವ ಮೂಲಕ ಜನರನ್ನು ರಂಜಿಸುತ್ತಾರೆ ಎಂದು ಟೈಟಸ್ ವರ್ಗೀಸ್ ಹೇಳಿದರು.

ಮುಖ್ಯ ಕಲಾವಿದರಾದ ಮುಖೇಶ್ ತಿವಾರಿ ಮತ್ತು ತಾನಿಯಾ ತಿವಾರಿ ಅವರು ತಾಲ್ಲೂಕಿನ ಜನತೆ ಹೆಚ್ಚು ಹೆಚ್ಚು ಸರ್ಕಸ್ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.

ವ್ಯವಸ್ಥಾಪಕ ಸುರೇಶ ಬಾಬು, ಸೌತ್ ಆಫ್ರಿಕಾದ ವೇಟ್ ಲಿಫ್ಟರ್ ಆಂತೋನಿ, ಸದಾನಂದ, ವೆಂಜನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-22-803177891

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.