ರಾಣೆಬೆನ್ನೂರು: ಕೃಷಿ ಇಲಾಖೆಯಿಂದ ಬೀಜ ವಿತರಣೆ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಬಿತ್ತನೆ ಬೀಜಗಳ ಯಾವುದೇ ರೀತಿಯ ಕೊರತೆ ಇಲ್ಲ. ರೈತರು ಬೇಡಿಕೆ ಅನುಗುಣವಾಗಿ ಬಿತ್ತನೆ ಬೀಜಗಳನ್ನು ಹಂತ ಹಂತವಾಗಿ ಬೀಜ ಮಾರಾಟ ಕೇಂದ್ರಗಳಿಂದ ಪಡೆದುಕೊಳ್ಳಲು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹೇಳಿದರು.

ತಾಲ್ಲೂಕಿನ ಮೇಡ್ಲೇರಿ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ರಾಣೆಬೆನ್ನೂರು ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರ ಭೂಮಿ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ 7780 ಹೆಕ್ಟೇರ್ ಭತ್ತ, 42900 ಹೆಕ್ಟೇರ್ ಗೋವಿನಜೋಳ, 615 ಹೆಕ್ಟೇರ್ ತೊಗರಿ, 1350 ಹೆಕ್ಟೇರ್ ಶೇಂಗಾ, 575 ಹೆಕ್ಟೇರ್ ಹತ್ತಿ, 570 ಹೆಕ್ಟೇರ್ ಸೋಯಾಬಿನ್ 150 ಹೆಕ್ಟೇರ್ ಹೆಸರು ಮತ್ತು 1206 ಹೆಕ್ಟೇರ್ ಇತರೆ ಬೆಳೆಗಳು ಸೇರಿದಂತೆ ಒಟ್ಟಾರೆ 54,901ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದರು.

ಸೋಯಾಬೀನ್, ಶೇಂಗಾ ಬೀಜಗಳ ಮೇಲ್ಪದರು ಸೂಕ್ಷ್ಮವಾಗಿರುವುರಿಂದ ಟ್ರ್ಯಾಕ್ಟರ್ ಬಿತ್ತನೆ, ಆಳವಾದ ಬಿತ್ತನೆ, ಹೆಚ್ಚಾಗಿ ಉಷ್ಣಾಂಶ ಹಾಗೂ ಒಣಹವೆ ಇದ್ದಲ್ಲಿ ಬಿತ್ತನೆಗೆ ಸೂಕ್ತವಾಗಿರುವುದಿಲ್ಲ. ರೈತರು ಬೀಜಗಳನ್ನು ಬಿತ್ತುವಾಗ ಟ್ರೈಕೋಡಮಾ, ಅಜಟೋಬ್ಯಾಕ್ಟೋ, ಅಜೋಸ್ಪರಲಂ, ವ್ಯಾಮ್, ಜೈನೆಬ್, ಮೋನೆಬ್ಗಳನ್ನು 4 ಗ್ರಾಂ ಪ್ರತಿ ಕೆ.ಜಿ ಬೀಜಕ್ಕೆ ಲೆಪಿಸಿ(ಉಪಚರಿಸಿ) ಬಿತ್ತನೆ ಮಾಡುವುದರಿಂದ ಬೀಜ ಮೊಳಕೆ ಮತ್ತು ಬೆಳೆಯ ಬೆಳವಣಿಗೆ ಹಂತದಲ್ಲಿ ಬರುವಂತಹ ರೋಗ, ಕೀಟಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ರೈತರು ಸದ್ಬಳಕೆ ಮಾಡಿಕೊಳ್ಳುವ ಜತೆಗೆ ಇಲಾಖೆ ಅಧಿಕಾರಿಗಳಿಂದ ಅವಶ್ಯಕ ಮಾಹಿತಿ ಪಡೆದು ಸಮಯಕ್ಕೆ ಸರಿಯಾಗಿ ಬಿತ್ತನೆ ಮಾಡಬೇಕು ಎಂದು ತಿಳಿಸಿದರು.

ಕೃಷಿ ಅಧಿಕಾರಿಗಳಾದ ಅರವಿಂ ಎಂ., ವಿರೇಶ ಜೆ.ಎಂ, ದಿಳ್ಳೆಪ್ಪ ಅಣ್ಣೇರ, ನಾಗಪ್ಪ ಯಲಿಗಾರ, ಸುರೇಶ, ರವೀಂದ್ರಗೌಡ ಪಾಟೀಲ, ಬೀರೇಶ ಕೂನಬೇವು, ತಿರುಪತಿ ಅಜ್ಜನವರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-22-707465979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.