ರಾಣೆಬೆನ್ನೂರು: ‘ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹಾಗೂ ಓದುಗರಿಗೆ ಇಷ್ಟವಾಗುವ ಸಾಹಿತ್ಯ ಪುಸ್ತಕಗಳೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಡಿಜಿಟಲ್ ಗ್ರಂಥಾಲಯ ಆರಂಭವಾಗಿದೆ. ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೊನ್ನಾಳಿ ಹೇಳಿದರು.

ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಗ್ರಂಥಾಲಯ ಅರಿವು ಕೇಂದ್ರದಲ್ಲಿ ಬೇಸಿಗೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಈ ಮೊದಲು ಗ್ರಂಥಾಲಯ ಸೌಲಭ್ಯಗಳಿಂದ ವಂಚಿತವಾಗಿತ್ತು. ಸದಸ್ಯರ ಒತ್ತಾಸೆಯಂತೆ ತಂತ್ರಜ್ಞಾನ ಆಧಾರಿತ ಡಿಜಿಟಲ್ ಗ್ರಂಥಾಲಯ ಸ್ಥಾಪಿಸಿ, ‘ಪುಸ್ತಕ ಮನೆ’ ಎಂದು ಹೆಸರಿಡಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿ ಬಸನಗೌಡ ಪಾಟೀಲ ಮಾತನಾಡಿ, ‘ಜಿಲ್ಲಾ ಗ್ರಂಥಾಲಯದಿಂದ 6 ಸಾವಿರ ಪುಸ್ತಕ ಹಾಗೂ ದಾನಿಗಳು 154 ಪುಸ್ತಕ ಒದಗಿಸಿದ್ದಾರೆ. ಗ್ರಾಮ ಪಂಚಾಯಿತಿಯಿಂದ ₹5 ಸಾವಿರ ಮೊತ್ತದ ಕೆಪಿಎಸ್ಸಿ ಪುಸ್ತಕಗಳನ್ನು ಅರಿವು ಕೇಂದ್ರಕ್ಕೆ ಒದಗಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಕಂಪ್ಯೂಟರ್ ಪ್ರೊಜೆಕ್ಟರ್ ಪೂರೈಸಲಾಗಿದೆ’ ಎಂದರು.

ಈ ವೇಳೆ ಬೇಸಿಗೆ ಶಿಬಿರದ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕರಾದ ವಿದ್ಯಾವತಿ ಕೊಟ್ರಪ್ಪನವರ, ಪಾವನಿ ಹುಯ್ಯಪ್ಪನವರ, ನಂದೀಶ ಚಲವಾದಿ, ಮಿಥುನ ಸಾಲಿ, ಹೇಮಾ ಹುಯ್ಯಪ್ಪನವರ, ರಾಕೇಶ ಸಾಲಿ, ಮೋಹಿತ ಕೆ.ಕೆ., ದೀಕ್ಷಾ ಕುಂಬಾರ, ಶ್ರೇಯಸ್ ಎನ್.ಕೆ, ಉಶಾ ಕಿಳ್ಳೇರ, ಕಿರಣ ಭಂಡಾರಿ, ಜೀವಿತಾ ಗಡ್ಡದ, ಪ್ರತಿಭಾ ಚಕ್ರಸಾಲಿ, ವಿಷ್ಣು ಚಕ್ರಸಾಲಿ, ರುತಿಕ ಕಬ್ಬಾರ, ಮಹಾಲಕ್ಷ್ಮಿ ಆರ್.ಪಿ, ನಮ್ರತ ಗಡ್ಡದ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-22-2118698830

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.