ರಟ್ಟೀಹಳ್ಳಿ: ಜಗತ್ತಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಓದುಗರಿಗೆ ಪತ್ರಿಕೆಗಳನ್ನು ತಲುಪಿಸುವ ಪತ್ರಿಕೆ ವಿತರಕರ ಕಾರ್ಯ ಅತ್ಯಂತ ಶ್ಲಾಘನೀಯವಾದುದು. ಮಳೆಗಾಲವಿರಲಿ, ಚಳಿಗಾಲವಿರಲಿ, ಅಥವಾ ಯಾವುದೇ ಸಂದರ್ಭದಲ್ಲಿಯೂ ಪತ್ರಿಕಾ ವಿತರಕರು ಬೆಳಂಬೆಳಿಗ್ಗೆ ಪತ್ರಿಕೆ ವಿತರಿಸುವ ಕಾರ್ಯ ವಿಶೇಷವಾಗಿದೆ ಎಂದು ಪ್ರಿಯದರ್ಶಿನಿ ಮಹಾವಿದ್ಯಾಲಯದ ಪ್ರಾಚಾರ್ಯ ರಾಘವೇಂದ್ರ ಎ.ಜಿ. ಹೇಳಿದರು.

ಇತ್ತೀಚಿಗೆ ವಿದ್ಯಾಸಂಸ್ಥೆಯ ಸಮುದಾಯ ಭವನದಲ್ಲಿ ತಮ್ಮ ಮಗಳು ವಿನುತಾಳ 9ನೇ ವರ್ಷದ ಜನ್ಮದಿನಾಚರಣೆ ಪ್ರಯುಕ್ತ ಪಟ್ಟಣದ ಎಲ್ಲಾ ಪತ್ರಿಕಾ ವಿತರಕರಿಗೆ ಜರ್ಕಿನ್ಗಳನ್ನು ವಿತರಿಸಿ ಮಾತನಾಡಿದರು.

ಪ್ರತಿವರ್ಷವೂ ಪುತ್ರಿಯ ಜನ್ಮದಿನಾಚರಣೆ ನಿಮಿತ್ತ ಗೋಶಾಲೆ, ಮಠ, ಮಂದಿರಗಳಿಗೆ ದೇಣಿಗೆಯನ್ನು ಮತ್ತು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಬ್ರೆಡ್ಗಳನ್ನು ನೀಡುತ್ತ ವಿಶಿಷ್ಟವಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಈ ವರ್ಷವೂ ಸಹ ಪತ್ರಿಕಾ ವಿತರಕರ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಈ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ವರದಿಗಾರ ಚಿದಾನಂದ ಮಾಣೆ ಮಾತನಾಡಿ, ಮಳೆಗಾಲದಲ್ಲಿ ಪತ್ರಿಕಾ ವಿತರಣೆ ಕೆಲಸ ಸಾಹಸವಾಗಿದೆ. ವಿತರಕರ ಸುರಕ್ಷತೆಯನ್ನು ಗಮನಿಸಿ ಅವರಿಗೆ ಜರ್ಕಿನ್ ನೀಡಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಭಾಗ್ಯ ರಾಘವೇಂದ್ರ, ಶಿಕ್ಷಕರಾದ ರಾಜು ಹರವಿಶೆಟ್ಟರ್, ಬೀರೇಶ ಕರಡೆಣ್ಣನವರ, ಸುರೇಂದ್ರ ನಾಯ್ಕ್, ಉಪನ್ಯಾಸಕ ಸಿ.ಎಸ್. ಕಮ್ಮಾರ್, ಎಚ್. ಬಿ. ಕೆಂಚಳ್ಳಿ, ಬಿ.ಸಿ. ತಿಮ್ಮನಹಳ್ಳಿ, ಸಿ.ಎನ್ ಸೊರಟೂರು, ವೈ.ವೈ. ಮರಳೀಹಳ್ಳಿ, ಶಾಂತಮ್ಮ ಎಚ್, ವಿಜಯಲಕ್ಷ್ಮೀ ರೂಳಿ, ಎನ್.ಎಂ. ಪ್ಯಾಟಿ, ಎಂ.ಆರ್. ಅಂಚಿ, ಎಚ್.ಎಚ್. ಬ್ಯಾಡಗೌಡ್ರ, ಪತ್ರಿಕಾ ವಿತರಕರಾದ ತಿಲಕ ಹೊಳಜೋಗಿ, ಸಂದೀಪ ಪವಾರ, ವಿಷ್ಣು ಮಾಯಾಚಾರಿ, ಯೋಗೀಶ ಮೂಲಿಮನಿ, ಚೇತನ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-329675581

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.