ರಟ್ಟೀಹಳ್ಳಿ: ಪಟ್ಟಣದ ಕುರಬಗೇರಿ ಕ್ರಾಸ್ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ಮಾಜಿ ಕೃಷಿ ಸಚಿವ ಬಿ.ಸಿ.ಪಾಟೀಲ ಗುರುವಾರ ಸಂಜೆ 7 ಗಂಟೆಗೆ ಚಾಲನೆ ನೀಡಿದರು.
ಅದಕ್ಕೂ ಮೊದಲು ಅವರು ಗಣಪತಿಗೆ ಪೂಜೆ ಸಲ್ಲಿಸಿದರು. ವಿಸರ್ಜನೆಗೆ ವಿವಿಧೆಡೆಯಿಂದ ಆಗಮಿಸಿದ್ದ ಕಲಾತಂಡಗಳು, ಡೊಳ್ಳು, ಹಲಗೆ, ವಾದ್ಯಮೇಳಗಳೊಂದಿಗೆ ಮೆರವಣಿಗೆ ಮೂಲಕ ಕುಮದ್ವತಿ ನದಿಗೆ ವಿಸರ್ಜನೆಗೆ ತೆಗೆದುಕೊಂಡು ಹೋಗಲಾಯಿತು.
ಮುಖಂಡರಾದ ಬಸವರಾಜ ಆಡಿನವರ, ದೇವರಾಜ ನಾಗಣ್ಣನವರ, ಆನಂದಪ್ಪ ಹಾದಿಮನಿ, ಫಕ್ಕೀರೇಶ ತುಮ್ಮಿನಕಟ್ಟಿ, ಸುಶೀಲ ನಾಡಗೇರ ಸೇರಿದಂತೆ ನೂರಾರು ಹಿಂದೂ ಮಹಾಸಭಾ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.