ರಟ್ಟೀಹಳ್ಳಿ: ಕೃಷಿ ಲಾಭದಾಯಕವಾಗಿಸಲು ಅಡಿಕೆ ಬೆಳೆಯುತ್ತಿರುವ ಇಲ್ಲಿಯ ರೈತರಿಗೆ ತೀವ್ರ ಬಿಸಲು ಬರೆ ಎಳೆದಿದೆ.

ಈಚೆಗೆ ಇಲ್ಲಿಯ ಬಹುತೇಕ ರೈತರು ಕೂಲಿಕಾರ್ಮಿಕರ ವೆಚ್ಚ ತಗ್ಗಿಸಲು ಹಾಗೂ ಲಾಭದಾಯಕ ಮತ್ತು ಕಡಿಮೆ ಶ್ರಮ ಇರುವ ಅಡಿಕೆ ಬೆಳೆಗೆ ಆದ್ಯತೆ ನೀಡುತ್ತಿದ್ದಾರೆ. ಮೊದಮೊದಲು ಮಲೆನಾಡು ಭಾಗದಲ್ಲಿ ಮಾತ್ರ ಹೇರಳ ಅಡಿಕೆ ತೋಟ ನೋಡಲು ಸಿಗುತ್ತಿದ್ದವು. ಆದರೆ ಈಚೆಗೆ ರೈತರು ಬಯಲು ಸೀಮೆಯಲ್ಲಿಯೂ ತೋಟಕ್ಕೆ ಬೋರವೆಲ್ ಕೊರೆಸಿ ಅಡಿಕೆ ಫಸಲು ತೆಗೆಯುತ್ತಿದ್ದಾರೆ.

ಉತ್ತಮ ಫಸಲು ಹಾಗೂ ಲಾಭದ ನಿರೀಕ್ಷೆಯಲ್ಲಿ ಇರುವ ಹಲವು ರೈತರಿಗೆ ಬಿರುಬೇಸಿಗೆ ಹೊಡೆತ ನೀಡಿದೆ. ಕೊಳವೆಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿ ಫಸಲಿಗೆ ಬಂದ ಅಡಿಕೆ ಮರಗಳು ಬಿಸಿಲಿನ ಹೊಡೆತಕ್ಕೆ ಒಣಗುತ್ತಿರುವುದು ರೈತರಿಗೆ ತೀವ್ರ ಸಂಕಷ್ಟ ತಂದಿದೆ. ರಟ್ಟೀಹಳ್ಳಿ ತಾಲ್ಲೂಕು ಒಂದರಲ್ಲಿಯೇ ಸರಿಸುಮಾರು 3,600 ಹೆಕ್ಟೇರ್ಗಳಷ್ಟು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ತಾಲ್ಲೂಕಿನ ಕಡೂರು ಗ್ರಾಮದ ರೈತ ಮಲ್ಲನಗೌಡ ಗಂಟ್ಟೆಪ್ಪಗೌಡ್ರ ಐದು ವರ್ಷಗಳ ಹಿಂದೆ ಅಡಿಕೆ ಬೆಳೆ ಹಾಕಿದ್ದರು. ಇಗ ಅಡಿಕೆ ಫಸಲಿಗೆ ನೀರಿಲ್ಲದೇ ಒಂದು ಎಕರೆ ತೋಟ ಸಂಪೂರ್ಣ ಒಣಗಿದೆ. ಬೆಳೆ ಉಳಿಸಿಕೊಳ್ಳಲು ತೋಟದಲ್ಲಿ ನಾಲ್ಕು ಬೋರವೆಲ್ ಕೊರೆಸಿದರೂ ನೀರು ಸಿಕ್ಕಿಲ್ಲ. ಇದರಿಂದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಅದೇ ಗ್ರಾಮದಲ್ಲಿ ಶಂಕರಗೌಡ ಶಿರಗಂಬಿ, ಗಣೇಶ ಮಾಯಾಚಾರಿ ಅವರ ಅಡಿಕೆ ತೋಟಗಳೂ ಬಿರುಬಿಸಿಲಿನಿಂದ ಒಣಗಿವೆ. ತಾಲ್ಲೂಕಿನ ಕೆಲವು ತೋಟಗಳಲ್ಲಿ ಸುಮಾರು 700 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಕೆರೆ ಕಟ್ಟೆಗಳು ಒಣಗಿವೆ. ದಿನೇ ದಿನೇ ಏರುತ್ತಿರುವ ತಾಪಮಾನದಿಂದಾಗಿ ಅಡಿಕೆ ಮರಗಳು ಒಣಗುತ್ತಿವೆ. ಇದರಿಂದ ರೈತ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ.

‘ಈ ಮೊದಲು ನಮ್ಮ ತೋಟದ ಕೊಳವೆಬಾವಿಯಲ್ಲಿ ನೀರು ಚೆನ್ನಾಗಿ ಇತ್ತು. ಹೀಗಾಗಿ ನಾವು ಅಡಿಕೆ ಬೆಳೆದೆವು. ಈ ವರ್ಷ ಕೊಳವೆಬಾವಿಯಲ್ಲಿ ನೀರು ಬತ್ತಿದ್ದು, 2 ತಿಂಗಳಿನಿಂದ ಅಡಿಕೆ ತೋಟಕ್ಕೆ ನೀರಿಲ್ಲದೇ ಮರಗಳು ಒಣಗಿವೆ. ದಿಕ್ಕುತೋಚದಂತಾಗಿದೆ’ ಎನ್ನುತ್ತಾರೆ ಕಡೂರು ಗ್ರಾಮದ ರೈತ ಗಣೇಶ ಮಾಯಾಚಾರಿ.

‘ಅಡಿಕೆ ಬೆಳೆ ಉಳಿಸಿಕೊಳ್ಳಲು ತೋಟದಲ್ಲಿ ನಾಲ್ಕು ಕಡೆ ಕೊಳವೆಬಾವಿ ಹಾಕಿಸಿದರೂ ನೀರು ಸಿಗಲಿಲ್ಲ. ಹೀಗಾಗಿ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದೇನೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತೋಟದಲ್ಲಿ ನೀರು ಚೆನ್ನಾಗಿ ಇತ್ತು ಯಾವುದೇ ತೊಂದರೆಯಾಗಿರಲಿಲ್ಲ. ಈ ಸಾರಿ ಬಹಳ ತೊಂದರೆಯಾಗಿದೆ’ ಎಂದು ರೈತ ಮಲ್ಲನಗೌಡ ತಿಳಿಸಿದರು.

ಕಾಲುವೆಗೆ ನೀರು ಹರಿಸಿ

ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ಬೇಸಿಗೆ ಕಾಲದಲ್ಲಿಯೂ ನೀರು ಹರಿಸಿದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಇದರಿಂದ ಬೇಸಿಗೆಯಲ್ಲಿಯೂ ಬೆಳೆಗಳ ರಕ್ಷಣೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಗಂಭೀರ ಚಿಂತನೆ ಮಾಡಬೇಕು. ನೀರಿಲ್ಲದೇ ಬತ್ತಿರುವ ತೋಟಗಾರಿಕೆ ಬೆಳೆಗಳಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಶಂಕರಗೌಡ ಶಿರಗಂಬಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.