ರಟ್ಟೀಹಳ್ಳಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಅಕ್ರಮವಾಗಿ ಗೋ ಸಾಗಾಟ ಹಾಗೂ ಹೋ ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಕೂಡಲೇ ಅದನ್ನು ತಡೆಗಟ್ಟಿ ತಪ್ಪಿತಸ್ಥರಿಗೆ ಕಾನೂನು ರೀತ್ಯ ಶಿಕ್ಷೆ ವಿಧಿಸಬೇಕು ಎಂದು ತಾಲ್ಲೂಕಿನ ವಿಶ್ವಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರು ತಾಲ್ಲೂಕು ದಂಡಾಧಿಕಾರಿ ಶ್ವೇತಾ ಅಮರಾವತಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಅನಧಿಕೃತ ಕಸಾಯಿಖಾನೆಗಳು ತಲೆಎತ್ತಿದ್ದು, ಅವುಗಳನ್ನು ನಿಷೇಧಿಸಿ ಹಿಂದೂ ಸಂಸ್ಕೃತಿಯ ದೇವತಾ ಸ್ವರೂಪವಾದ ಗೋವುಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಆನಂತರ ಪೊಲೀಸ್ ಇಲಾಖೆಗೂ ಮನವಿ ಸಲ್ಲಿಸಿದರು. ಮನವಿದಾರರು ಗೋವುಗಳೊಂದಿಗೆ ತಹಶೀಲ್ದಾರ್ ಕಚೇರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರಾದ ನವೀನ ಮಾದಾರ, ಆಕಾಶಗೌಡ ಪಾಟೀಲ, ಮೃತ್ಯುಂಜಯ ಬೆಣ್ಣಿ, ಸಿದ್ದು ಪಾಟೀಲ, ಪಾಂಡುರಂಗ ಪಾಟೀಲ, ಪ್ರಶಾಂತ ಹಿತ್ತಲಮನಿ,ಶಂಭುಗೌಡ ಮಲ್ಲನಗೌಡ್ರ, ಸಂತೋಷ ಹಿರೇಮಠ, ಅನಿಲ ರಾಣೇಬೆನ್ನೂರ, ಆಕಾಶ ಹುಲ್ಲತ್ತಿ, ಶಶಾಂಕ ಯರೇಸೀಮೆ, ಶಬರೀಶ ಕಾಯಕದ, ಸುನೀಲ ಕಟ್ಟೀಮನಿ, ಬಿರೇಶ ಹೊಳಜೋಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-22-1740175154

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.