ರಟ್ಟೀಹಳ್ಳಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತರಳುಬಾಳು ಬಡಾವಣೆಯ 2ನೇ ಕ್ರಾಸ್ನಲ್ಲಿ ಸಾರ್ವಜನಿಕ ಉದ್ಯಾನವನ ಸೂಕ್ತ ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಿವಿಧ ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಮೀಸಲಾಗಿಟ್ಟ ಜಾಗೆಗಳು ಪಾಳುಬಿದ್ದು, ಅನೈತಿಕ ಚಟುವಟಿಕೆಯ ತಾಣವಾಗಿವೆ.

ಕೆಲವೊಂದು ಜಾಗೆಗಳು ಸಾರ್ವಜನಿಕರು ಕಸತ್ಯಾಜ್ಯ ಎಸೆದು ಹಾಳುಗೆಡವಿದ್ದಾರೆ. ಕೆಲವೊಂದು ಉದ್ಯಾನವನಗಳಲ್ಲಿ ಯಾವುದೇ ಗಿಡಮರಗಳನ್ನು ನೆಡದೆ ಗಿಡಗಂಟೆಗಳು ಬೆಳೆದು ನಿಂತು ವಿಷಜಂತುಗಳ ತಾಣವಾಗಿ ಮಾರ್ಪಟ್ಟಿವೆ.

ಪಟ್ಟಣದ ತರಳುಬಾಳು ಬಡಾವಣೆಯ 2ಕ್ರಾಸ್ನಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯಲ್ಲಿ ಪಟ್ಟಣ ಪಂಚಾಯ್ತಿ 15ನೇ ಹಣಕಾಸು ಯೋಜನೆಯಡಿ 2021-22ನೇ ಸಾಲಿನಲ್ಲಿ ₹3.70 ಲಕ್ಷ ರೂ. ಹಾಗೂ 2022-23ನೇ ಸಾಲಿನಲ್ಲಿ ಅಂದಾಜು ₹3.16 ಲಕ್ಷ ರೂ. ಉದ್ಯಾನವನ ಅಭಿವೃದ್ಧಿಗೆ ಎಂದು ವ್ಯಯಿಸಿದ ಸರ್ಕಾರದ ಹಣ ಸಂಪೂರ್ಣ ಪೋಲಾಗಿದೆ. ಒಟ್ಟಾರೆ 6 ಲಕ್ಷಕ್ಕೂ ಅಧಿಕ ಹಣವನ್ನು ಉದ್ಯಾನವನ ಅಭಿವೃದ್ಧಿಗೆ ಹಣವಿನಿಯೋಗಿಸಲಾಗಿದ್ದು, ಇಲ್ಲಿ ಕೇವಲ ಸುತ್ತಲೂ (ಮೂರು ದಿಕ್ಕುಗಳಲ್ಲಿ ಮಾತ್ರ, ಒಂದು ದಿಕ್ಕಿನಲ್ಲಿ ಖಬರಸ್ತಾನದ ಕಾಂಪೌಂಡ್ ಇದೆ) ಕಬ್ಬಿಣದ ಗೇಟ್ ಅಳವಡಿಸಿರುವುದನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿ ಕೆಲಸವಾಗಿಲ್ಲ. ಗುತ್ತಿಗೆದಾರರು, ಹಾಗೂ ಪಟ್ಟಣ ಪಂಚಾಯಿತಿ ಎಂಜಿನಿಯರ್ ಸೂಕ್ತ ಕಾಮಗಾರಿ ನಿರ್ವಹಿಸದೇ ಕಳಪೆ ಕಾಮಗಾರಿ ನಿರ್ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಕುರಿತು ಸಮಗ್ರ ತನಿಖೆಕೈಗೊಂಡು ತಪ್ಪಿತಸ್ಥ ಗುತ್ತಿಗೆದಾರರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ಸಾರ್ವಜನಿಕರ ಒತ್ತಾಯಿಸಿದ್ದಾರೆ.

ಉದ್ಯಾನವನ ಸಂರಕ್ಷಿಸಬೇಕು: ತರಳುಬಾಳು ಬಡಾವಣೆಯಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಜಾಗೆಯ ಅಭಿವೃದ್ಧಿ ಕಾಮಗಾರಿಗೆ ₹6 ಲಕ್ಷಕ್ಕೂ ಅಧಿಕ ಹಣ ವ್ಯಯ್ಯಸಿದ್ದು, ಇಲ್ಲಿ ಸಾಕಷ್ಟು ಸರ್ಕಾರದ ಹಣ ಪೋಲಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎನ್ನುತ್ತಾರೆ ಪಟ್ಟಣದ ನಿವಾಸಿ ಹೇಮಣ್ಣ ನಿಂಬೆಗೊಂದಿ.

’ರಟ್ಟೀಹಳ್ಳಿ ಪಟ್ಟಣದ ತರಳುಬಾಳು ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಎರಡು ಹಂತದಲ್ಲಿ ಟೆಂಡರ್ ಮೂಲಕ 2021-22 ಹಾಗೂ 2022-23ನೇ ಸಾಲಿನಲ್ಲಿ ಕಾಮಗಾರಿ ನೀಡಲಾಗಿದೆ. ಟೆಂಡರ್ ಆದ ಸಂದರ್ಭದಲ್ಲಿ ಬೇರೆ ಮುಖ್ಯಾಧಿಕಾರಿ ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದನ್ನು ಕೂಡಲೇ ಪರಿಶೀಲಿಸಲಾಗುವುದು’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ.

’ತರಳುಬಾಳು ಬಡಾವಣೆಯ ಉದ್ಯಾನವನ ಅಭಿವೃದ್ಧಿ ಕಾಮಗಾರಿಯಲ್ಲಿ ಬಹಳಷ್ಟು ಹಣ ಪೋಲಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಆ ಸಂದರ್ಭದಲ್ಲಿ ಪ.ಪಂಗೆ ಚುನಾಯಿತ ಪ್ರತಿನಿಧಿಗಳು ಇರಲಿಲ್ಲ. ಆಡಳಿತಾಧಿಕಾರಿಗಳು ಹಾಗೂ ಮುಖ್ಯಾಧಿಕಾರಿಗಳು ಕರ್ತವ್ಯದಲ್ಲಿದ್ದರು. ಇದರ ಸೂಕ್ತ ತನಿಖೆಯಾಗಬೇಕುಠ ಎನ್ನುತ್ತಾರೆ ಪಟ್ಟಣ ಪಂಚಾಯ್ತಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-22-1315405364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.