ರಟ್ಟೀಹಳ್ಳಿ: ಮಹಿಳೆಗೆ ವಿಶಿಷ್ಟವಾದ ಸ್ಥಾನಮಾನ ನೀಡಿ ಗೌರವದಿಂದ ಕಾಣುವು ಕಾರ್ಯವಾಗಬೇಕು. ಸಾಂಸಾರಿಕ ಜೀವನದೊಂದಿಗೆ ಸಮಾಜದಲ್ಲಿ ಮಹಿಳೆ ಇಂದು ಆರ್ಥಿಕವಾಗಿ ಸದೃಡವಾದ ಬದುಕು ಕಟ್ಟಿಕೊಂಡು ಸಂಸಾರದ ಉನ್ನತಿಗೆ ಕಾರಣವಾಗಿದ್ದಾಳೆ. ಅವಳನ್ನು ಗೌರವದಿಂದ ಕಾಣವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮೇದೂರು ಗ್ರಾಮದಲ್ಲಿ ಶುಕ್ರವಾರ ಬಸವೇಶ್ವರ, ಪಂಚಲಿಂಗೇಶ್ವರ ದೇವಸ್ಥಾನಗಳ ಲೋಕಾರ್ಪಣೆ ಕಳಸಾರೋಹಣ ಮತ್ತು ಧರ್ಮಸಭೆಯಲ್ಲಿ ಮಾತನಾಡಿದರು.

ಪತ್ನಿ ಒಪ್ಪಿಗೆ ಇಲ್ಲದೇ ಗಂಡ ತನ್ನ ಆಸ್ತಿ ಮಾರದಂತೆ ಕಾನೂನು ರೂಪಿಸಬೇಕಿದೆ ಎಂದರು.

ಗ್ರಾಮದ ಮುಖಂಡ ಪಾಲಾಕ್ಷಗೌಡ ಪಾಟೀಲ ಮಾತನಾಡಿ, ಮೇದೂರು ಗ್ರಾಮದ ಕೆರೆ ಮಧ್ಯ 21 ಅಡಿ ಎತ್ತರ ಶಿವನಮೂರ್ತಿ ನಿರ್ಮಿಸುವುದಕ್ಕೆ ಶಾಸಕರು ಒಂದು ಕೋಟಿ ಅನುದಾನ ನೀಡಬೇಕೆಂದು ಮನವಿ ಮಾಡಿದರು.

ಶಾಸಕ ಯು.ಬಿ. ಬಣಕಾರ ಮಾತನಾಡಿ ರಾಜ್ಯದ ಅಭಿವೃದ್ಧಿಯಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ. ಗ್ರಾಮದ ಅಭಿವೃದ್ಧಿಗೆ ₹50 ಲಕ್ಷ ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ, ಮಾಜಿ ಮುಖ್ಯ ಸಚೇತಕ ಡಿ.ಎಂ.ಸಾಲಿ, ಮಾತನಾಡಿದರು. ಶಂಕರಗೌಡ ಯಡಚಿ, ಸಿದ್ದನಗೌಡ ಸಣ್ಣಗೌಡ್ರ, ರಾಜು ಓದಗೌಡ್ರ, ಕೆ. ಶಿವಲಿಂಗಪ್ಪ, ಶಂಭಣ್ಣ ಗೂಳಪ್ಪನವರ, ಆರ್.ಎನ್. ಗಂಗೋಳ, ಕೋಟ್ರೇಶಪ್ಪ ಬಸಗಣ್ಣಿ, ಮಾಲತೇಶಗೌಡ ಗಂಗೋಳ, ಲಿಂಗರಾಜ ಚಪ್ಪರದಹಳ್ಳಿ, ಶಿವಪ್ಪ ನಂದಿಹಳ್ಳಿ, ಜೆ.ಪಿ. ಪ್ರಕಾಶಗೌಡ. ಶಿಕ್ಷಕ ಸಿ.ಎಸ್. ಚಕ್ರಸಾಲಿ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.

ರಥ ಏರದ ಶ್ರೀಗಳು: ಕಾರ್ಯಕ್ರಮಕ್ಕೆ ಸ್ವಾಮೀಜಿ ಸ್ವಾಗತಿಸಲು 300ಕ್ಕೂ ಹೆಚ್ಚು ಮಹಿಳೆಯರು ಪೂರ್ಣಕುಂಭ ಹೊತ್ತು ನಿಂತಿದ್ದರು. ಶ್ರೀಗಳಿಗೆ ಬೆಳ್ಳಿ ರಥ ತರಿಸಲಾಗಿತ್ತು. ಆದರೆ ಬೆಳ್ಳಿರಥ ಏರಲು ಒಪ್ಪದ ಶ್ರೀಗಳು ಬಿಸಿಲನ್ನು ಲೆಕ್ಕಿಸದೇ ಪೂರ್ಣಕುಂಭದಲ್ಲಿ ಭಕ್ತರೊಂದಿಗೆ ಒಂದುವರೆ ಕಿ.ಮಿ. ಹೆಜ್ಜೆ ಹಾಕಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-22-1742439013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.