ರಾಯಪುರ: ಛತ್ತೀಸಗಡದ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಎಎಸ್ಐ ಅನಿಲ್ಕುಮಾರ್ ಮೌರ್ಯ ಮೃತಪಟ್ಟಿದ್ದಾರೆ.
ಕಿಸ್ತಾರಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಗುಂಡಿನ ಚಕಮಕಿಯಲ್ಲಿ ಅನಿಲ್ಕುಮಾರ್ ಮೃತಪಟ್ಟಿದ್ದಾರೆ. ಇವರು ಮಧ್ಯಪ್ರದೇಶದವರು ಎಂದು ದಕ್ಷಿಣ ಬಸ್ತರ್ ವಲಯದ ಡಿಐಜಿ ಪಿ.ಸುಂದರರಾಜ್ ತಿಳಿಸಿದ್ದಾರೆ.